ಕೊಟ್ಟೂರು; ಜ.25. ರಾಜ್ಯ ಸರ್ಕಾರವು 2023ನೇ ಸಾಲಿನ ಮುಂಗಾರು ಮಳೆ ಕೊರತೆಯಿಂದ ಉಂಟಾದ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಮೊದಲ ಹಂತವಾಗಿ ಬೆಳೆ ಪರಿಹಾರವನ್ನು ಮಂಜೂರು ಮಾಡಿದ್ದು, ಅದನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಕೊಟ್ಟೂರು ತಹಶೀಲ್ದಾರರಾದ ಅಮರೇಶ.ಜಿ.ಕೆ ಇವರು ತಿಳಿಸಿರುತ್ತಾರೆ.
ಬೆಳೆ ಪರಿಹಾರಕ್ಕಾಗಿ ಅರ್ಹತೆಗೆ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 2000ಗಳ ವರೆಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗಿರುವ ರೈತರಿಗೆ(ಎಫ್ಐಡಿ) ಅವರು ಹೊಂದಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮಾಮಾಡಲಾಗಿರುತ್ತದೆ. ಕೊಟ್ಟೂರು ತಾಲೂಕಿನಲ್ಲಿ ಈಗಾಗಲೇ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಿದ್ದು, ಕೊಟ್ಟೂರು ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 13,255 ರೈತ ಫಲಾನುಭವಿಗಳಿಗೆ ರೂ.2,60,51,026ಗಳನ್ನು ಜಮಾ ಮಾಡಲಾಗಿರುತ್ತದೆ. ಬಾಕಿ ಉಳಿದ ರೈತರಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ತುರ್ತಾಗಿ ಕ್ರಮ ಕೈಗೊಳ್ಳಲಾಗುವುದೆಂದು ಮಾಹಿತಿಯಲ್ಲಿ ತಿಳಿಸಿರುತ್ತಾರೆ.