ಕೊಟ್ಟೂರು: ಪಟ್ಟಣಕ್ಕೆ ತುಂಗಭದ್ರ ನದಿಯ ಬನ್ನಿಗೋಳು ಜಾಕ್ವೆವಲ್ ನಿಂದ ಕುಡಿಯುವ ನೀರಿನ ಪೂರೈಕೆ ಆಗುತ್ತಿದ್ದು . ಸದರಿ ಸ್ಥಳದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆ ಆಗುತ್ತಿರುವುದರಿಂದ ಈ ಹಿಂದೆ ಪ್ರತಿ ದಿನ 22 ಗಂಟೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು ಆದರೆ ಹಾಲಿ ಪ್ರತಿದಿನ 16 ಗಂಟೆ ಮಾತ್ರ ನೀರು ಪೂರೈಕೆ ಆಗುತ್ತಿರುತ್ತದೆ ಇದರಿಂದ ನೀರು ಸರಬರಾಜುನಲ್ಲಿ ತೊಂದರೆ ಉಂಟಾಗಲಿದ್ದು ಸಾರ್ವಜನಿಕರು ನೀರನ್ನು ಮಿತವಾಗಿ ಬಳಕೆ ಮಾಡಲು ಹಾಗೂ ಕಾಯಿಸಿ ಶುದ್ಧೀಕರಿಸಿಕೊಂಡು ಕುಡಿಯಲು ಸಾರ್ವಜನಿಕರಿಗೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸ್ಸರುಲ್ಲಾ ರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ