ಬಳ್ಳಾರಿ,ಏ.10 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಅಖಂಡ ಬಳ್ಳಾರಿ ಜಿಲ್ಲೆ (ಈಗಿನ ವಿಜಯನಗರ ಜಿಲ್ಲೆ ಒಳಗೊಂಡು) ಯು ಶೇ.74 ರಷ್ಟು ಫಲಿತಾಂಶ ಪಡೆದಿದ್ದು, ರಾಜ್ಯದಲ್ಲಿ 29 ನೇ ಸ್ಥಾನದಲ್ಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶ ಟಿ.ಪಾಲಾಕ್ಷ ಅವರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.01 ರಿಂದ ಏ.22 ರ ವರೆಗೆ ಅಖಂಡ ಜಿಲ್ಲೆಯಲ್ಲಿ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ನಡೆದಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸಬರು, ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 28,026 ವಿದ್ಯಾರ್ಥಿಗಳಲ್ಲಿ 20,955 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಶೇ.74.77 ರಷ್ಟು ಫಲಿತಾಂಶ ಲಭಿಸಿ, ರಾಜ್ಯದಲ್ಲಿ 29 ನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
*ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿ (ಅಖಂಡ ಬಳ್ಳಾರಿ ಜಿಲ್ಲೆ):*
*ಕಲಾ ವಿಭಾಗ:*
ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕವಿತಾ ಬಿ.ವಿ (596 ಅಂಕ) ಜಿಲ್ಲೆಗೆ ಮೊದಲನೇ ಸ್ಥಾನ ಮತ್ತು ರಾಜ್ಯಕ್ಕೆ ಮೊದಲನೇ ರ್ಯಾಂಕ್.
ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶಶಿಧರ.ಡಿ (594 ಅಂಕ) ಜಿಲ್ಲೆಗೆ 2ನೇ ಸ್ಥಾನ ಮತ್ತು ರಾಜ್ಯಕ್ಕೆ ಮೂರನೇ ರ್ಯಾಂಕ್.
ಹಡಗಲಿಯ ಎಸ್ಎಂಎಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ.ಬಿ.ಎ (594 ಅಂಕ) ಜಿಲ್ಲೆಗೆ 2ನೇ ಸ್ಥಾನ ಮತ್ತು ರಾಜ್ಯಕ್ಕೆ ಮೂರನೇ ರ್ಯಾಂಕ್.
ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಂ.ಪಿ.ಬೀರೇಶ್ (593 ಅಂಕ) ಜಿಲ್ಲೆಗೆ 3ನೇ ಸ್ಥಾನ ಮತ್ತು ರಾಜ್ಯಕ್ಕೆ ನಾಲ್ಕನೇ ರ್ಯಾಂಕ್.
ಇಟಗಿಯ ಪಂಚಮಸಾಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪಿ.ವಿರೇಶ್ (592 ಅಂಕ) ಜಿಲ್ಲೆಗೆ 4ನೇ ಸ್ಥಾನ ಮತ್ತು ರಾಜ್ಯಕ್ಕೆ ಐದನೇ ರ್ಯಾಂಕ್.
ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಾನಸ.ಎನ್ (592 ಅಂಕ) ಜಿಲ್ಲೆಗೆ 4ನೇ ಸ್ಥಾನ ಮತ್ತು ರಾಜ್ಯಕ್ಕೆ ಐದನೇ ರ್ಯಾಂಕ್.
ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನುμÁ.ಎ (592 ಅಂಕ) ಜಿಲ್ಲೆಗೆ 4ನೇ ಸ್ಥಾನ ಮತ್ತು ರಾಜ್ಯಕ್ಕೆ ಐದನೇ ರ್ಯಾಂಕ್.
*ವಾಣಿಜ್ಯ ವಿಭಾಗ:*
ಬಳ್ಳಾರಿಯ ಬಿಪಿಎಸ್ಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಾನಸ್ವಿನಿ (592 ಅಂಕ) ಜಿಲ್ಲೆಗೆ ಮೊದಲನೇ ಸ್ಥಾನ. ಇದೇ ಕಾಲೇಜಿನ ವಿದ್ಯಾರ್ಥಿಗಳಾದ ಮೋಕ್ಷಾ (591 ಅಂಕ) ಜಿಲ್ಲೆಗೆ 2ನೇ ಸ್ಥಾನ. ನಂದಿನಿ (590 ಅಂಕ) ಮತ್ತು ಆದಿತ್ಯ ಲುಂಕರ್ (590 ಅಂಕ) ಇಬ್ಬರೂ ಕ್ರಮವಾಗಿ ಜಿಲ್ಲೆಗೆ 3 ನೇ ಪಡೆದಿದ್ದಾರೆ.
*ವಿಜ್ಞಾನ ವಿಭಾಗ:*
ಹಗರಿಬೊಮ್ಮನಹಳ್ಳಿಯ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಯಶ್ವಂತ್ (592 ಅಂಕ) ಜಿಲ್ಲೆಗೆ ಮೊದಲನೇ ಸ್ಥಾನ.
ಬಳ್ಳಾರಿಯ ಜ್ಞಾನಾಮೃತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದೇವರಾಜ (590 ಅಂಕ) ಜಿಲ್ಲೆಗೆ 2 ನೇ ಸ್ಥಾನ.
ಕೊಟ್ಟೂರಿನ ಸನ್ನಿಧಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶರತ್ ಕುಮಾರ್.ಕೆ.ಎಂ (587 ಅಂಕ) ಮತ್ತು ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಮೃತ.ಹೆಚ್.ಎಸ್ (587 ಅಂಕ) ಅವರು ಕ್ರಮವಾಗಿ ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
*ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ, ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವ ವಿವರ:*
ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏ.10 ರಿಂದ ಏ.16ರ ವರೆಗೆ ಅವಕಾಶವಿದ್ದು, ಪ್ರತಿ ವಿಷಯಕ್ಕೆ ರೂ.530 ನಿಗದಿಯಾಗಿರುತ್ತದೆ.
ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು ಏ.14 ರಿಂದ ಮೇ 19 ರ ವರೆಗೆ ಅವಕಾಶವಿದ್ದು, ಯಾವುದೇ ಶುಲ್ಕ ನಿಗದಿಯಾಗಿರುವುದಿಲ್ಲ.
ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು (ಸ್ಕ್ಯಾನಿಂಗ್ ಪ್ರತಿ ಪಡೆದವರಿಗೆ ಮಾತ್ರ ಅವಕಾಶ) ಏ.15 ರಿಂದ ಏ.20 ರವರೆಗೆ ಅವಕಾಶವಿದ್ದು, ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ನಿಗದಿಯಾಗಿರುತ್ತದೆ.
*ಅನುತ್ತೀರ್ಣ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸುವ ವಿವರ:*
ದ್ವಿತೀಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಆನ್ಲೈನ್ ಪೆÇೀರ್ಟಲ್ನಲ್ಲಿ ಅಪ್ಡೇಟ್ ಮಾಡಲು ದಂಡ ರಹಿತ ಏ.16 ಕೊನೆ ದಿನವಾಗಿದೆ. ದಂಡ ಸಹಿತ ಪೂರಕ ಪರೀಕ್ಷೆಗೆ ಏ.17 ರಿಂದ 18 ರವರೆಗೆ (ದಿನಕ್ಕೆ ರೂ.50 ರಂತೆ) ಕಾಲಾವಕಾಶ ನೀಡಲಾಗಿದೆ ಎಂದು ಡಿಡಿಪಿಯು ಟಿ.ಪಾಲಾಕ್ಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.