ಬಳ್ಳಾರಿ, ಸೆ. 26: ನವರಾತ್ರಿ ಹಬ್ಬದ ಅಂಗವಾಗಿ ಬಾಪೂಜಿ ನಗರದಲ್ಲಿ 4ನೆ ವರ್ಷದ ಗಂಗೆ ಪೂಜೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಸಣ್ಣ ಮಾರ್ಕೆಟ್ನ ಶುಂಕ್ಲಮ್ಮ ದೇವಿ ದೇವಸ್ಥಾನದಿಂದ ಬಾಪೂಜಿ ನಗರ ಬನ್ನಿ ಮಹಾಕಾಳಿ ದೇವಸ್ಥಾನದವರೆಗೆ ಭಕ್ತಿಪೂರ್ಣ ಮೆರವಣಿಗೆ ಜರುಗಿತು.
ಈ ಮೆರವಣಿಗೆಯನ್ನು ರವಿ ಚಂದ್ರ ಅವರ ನೇತೃತ್ವದಲ್ಲಿ ಡೊಳ್ಳು ಕುಣಿತ, ಭಜನೆ ಹಾಗೂ ನೃತ್ಯಗಳ ಸಂಭ್ರಮದ ನಡುವೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರವಿ ಚಂದ್ರ ಅವರು “ನವರಾತ್ರಿ ಹಬ್ಬವು ಸಮಾಜದಲ್ಲಿ ಭಕ್ತಿ, ಶಾಂತಿ ಮತ್ತು ಏಕತೆಯನ್ನು ಬೆಳೆಸುವ ಹಬ್ಬವಾಗಿದೆ. ಯುವಕರು ಸಂಸ್ಕೃತಿ ಸಂರಕ್ಷಣೆಗೆ ಮುಂದಾಗಬೇಕು. ಧಾರ್ಮಿಕ ಆಚರಣೆಗಳು ಸಮಾಜದ ಏಕತೆಗಾಗಿ ದೊಡ್ಡ ಬಲವಾಗಿವೆ” ಎಂದು ಅಭಿಪ್ರಾಯಪಟ್ಟರು.
ಅವರು ಮುಂದುವರಿದು, “ನಮ್ಮ ವಾರ್ಡ್ನಿಂದ ಬನ್ನಿ ಮಹಾಕಾಳಿ ದೇವಾಲಯದ ಹತ್ತಿರ ಒಂಬತ್ತು ದಿನಗಳ ಕಾಲ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ನ ಮುಖಂಡರಾದ ಮುಂಡ್ರಿಗಿ ನಾಗರಾಜ, ಶಿವರಾಜ್, ರವಿ ಚಂದ್ರ, ರಾಜ, ಲಿಂಗಪ್ಪ, ಆನಂದ್, ಫಕೀರ, ವಿಶ್ವ, ರವಿಕುಮಾರ್, ಬೀರಪ್ಪ, ರಾಜಸೇಕರ್, ಚಂದ್ರ, ಸಣ್ಣ ರಾಮಜಿನೆಯುಲು, ತಾಯಣ್ಣ, ರಾಮoಜಿ ನೀ ಹಾಜರಿಧರು.