ಬಳ್ಳಾರಿ,ಆ.15 : ನಗರದ ಡಾ||ರಾಜ್ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ನಲ್ಲಿ ೭೮ ನೇ ಸ್ವಾತಂತ್ರ÷್ಯ ದಿನಾಚರಣೆ ಅತ್ಯಂತ ಸಡಗರ, ಸಂಭ್ರಮದಿAದ ನೆರವೇರಿತು. ಈ ಆಚರಣೆಯ ಅಂಗವಾಗಿ ಆಗಮಿಸಿದ ಸಂಸ್ಥೆಯ ಅಧ್ಯಕ್ಷರಾದ ಡಾ||ಎಸ್.ಜೆ.ವಿ.ಮಹಿಪಾಲ್, ಡಾ||ಭರತ್, ವಿಕ್ರಮ್ ಮಹಿಪಾಲ್, ಜೆ. ಅನೀಲ್ ಕುಮಾರ್ ಪ್ರಾಂಶುಪಾಲರು ಇವರನ್ನು ಶಾಲೆಯ ೧೦ ನೇ ತರಗತಿ ವಿಧ್ಯಾರ್ಥಿನಿಯಾದ ಕುಮಾರಿ ಬಿಂದುರವರು ಸ್ವಾಗತಿಸಿದರು. ಶಾಲೆಯ ೬ ನೇ ತರಗತಿ ವಿಧ್ಯಾರ್ಥಿಗಳು ದೇಶಭಕ್ತಿಗೀತೆಯ ಪ್ರಾರ್ಥನಾಗೀತೆಯನ್ನು ಹಾಡಿದರು. ೯ ನೇ ತರಗತಿಯ ವಿಧ್ಯಾರ್ಥಿನಿಯಾದ ಕುಮಾರಿ ವೈಭವಿ ದೇಶದ ಸ್ವಾತಂತ್ರö್ಯಕ್ಕೋಸ್ಕರ ತ್ಯಾಗ ಬಲಿದಾನ ಮಾಡಿದ ಗಾಂಧಿಜೀಯವರು, ನೇತಾಜೀ ಸುಭಾಸ್ ಚಂದ್ರಭೋಸ್, ಬಾಲ ಗಂಗಾಧರ ತಿಲಕ್, ಲಾಲ್ ಲಜಪತ್ ರಾಯ್, ಭಗತ್ ಸಿಂಗ್ ಮತ್ತು ಇತರರು ನಿರ್ವಹಿಸಿದ ಪಾತ್ರವನ್ನು ಎಳೆಎಳೆಯಾಗಿ ಬಿಡಿಸಿ ತಿಳಿಸಿದರು. ಶಾಲೆಯ ವಿಧ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಡಾ|| ಎಸ್.ಜೆ.ವಿ ಮಹಿಪಾಲ್ ರವರು ದೇಶದ ಸ್ವಾತಂತ್ರ÷್ಯಕ್ಕಾಗಿ ಹೋರಾಟ ನಡೆಸಿದ ಹಿರಿಯ ನಾಯಕರ, ತ್ಯಾಗ ಬಲಿದಾನವನ್ನು ತಿಳಿಸುತ್ತಾ, ವಿಧ್ಯಾರ್ಥಿಗಳು ಶೈಕ್ಷಣಿಕ ಪಥದಲ್ಲಿ ಅಧ್ಭುತ ಸಾಧನೆಯನ್ನು ಮಾಡುತ್ತಾ ಮುಂದಿನ ಭಾರತ ದೇಶದ ಉತ್ತಮ ಸೇವಕರಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ತಿಳಿಸಿದರು.
ನಂತರ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ದೆಯನ್ನು ಏರ್ಪಡಿಸಿದ್ದು ಅದರಲ್ಲಿ ಪ್ರಥಮ ಬಹುಮಾನ ಗಳಿಸಿದ ನಮ್ಮ ಶಾಲೆಯ ೭ ನೇ ತರಗತಿ ವಿಧ್ಯಾರ್ಥಿನಿಯಾದ ಕುಮಾರಿ ಮಹತಿರವರಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೂ ನಮ್ಮ ಶಾಲೆಯಲ್ಲಿ ಜ್ಯೂನಿಯರ್ ಕೆ.ಜಿ ಮಕ್ಕಳಿಗೆ ದಿನಾಂಕ:೧೪-೦೮-೨೦೨೪ ರಂದು ಸ್ವಾತಂತ್ರ÷್ಯ ಹೋರಾಟಗಾರರ ಛದ್ಮವೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಾದ ಕುಮಾರಿ ಸಾನ್ವಿ ಹಾಗೂ ಕುಮಾರ ಸಾಕೇತ ಕೃಷ್ಣ ರವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ೧ ರಿಂದ ೮ ನೇ ತರಗತಿಯ ಎಲ್ಲಾ ವಿಧ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು, ರೂಪಕ ಹಾಗೂ ನೃತ್ಯವನ್ನು ಪ್ರದರ್ಶಿಸುವ ಮೂಲಕ ದೇಶದ ಬಗ್ಗೆ ಸ್ಪೂರ್ತಿ, ಅಭಿಮಾನವನ್ನು ಮೂಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ೧೦ ನೇ ತರಗತಿಯ ವಿಧ್ಯಾರ್ಥಿನಿಯಾದ ಕುಮಾರಿ ದೀಪ್ತಿ.ಸಿ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಕುಮಾರಿ ಸಂಕೇತ ಮಾಡಿದರು. ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸುವುದರ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.