ಬಳ್ಳಾರಿ,ಅ. 2 : ನಗರದ ಹದ್ದಿನ ಗುಂಡು ರಸ್ತೆಯಲ್ಲಿರುವ ದುರ್ಗಾ ಕಾಲೋನಿಯ ಶ್ರೀ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ 9ನೇ ವರ್ಷದ ಶರನ್ ನವರಾತ್ರಿ ವೈಭವದ ಉತ್ಸವಗಳನ್ನು 9 ದಿನಗಳ ಕಾಲ ನಡೆಸಲಾಗುವುದು ಎಂದು ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಮೀನಳ್ಳಿ ತಾಯಣ್ಣ ತಿಳಿಸಿದರು.
ಅವರು ಇಂದು ಹದ್ದಿನ ಗುಂಡು ರಸ್ತೆಯಲ್ಲಿರುವ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ ಪತ್ರಿಕಾ ಘೋಷ್ಠಿಯನ್ನು ಕರೆದು ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ 9 ದಿನಗಳ ಕಾಲ ದುರ್ಗಾದೇವಿಗೆ ವಿಶೇಷವಾದ ಪೂಜೆಗಳನ್ನು ನೆರವೇರಿಸುವ ಮೂಲಕ ನವರಾತ್ರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ, ನವರಾತ್ರಿಯ ಪ್ರಥಮ ದಿನವಾದ ಗುರುವಾರದಂದು ಶ್ರೀ ಬಾಲ ತ್ರಿಪುರ ಸುಂದರಿ ದೇವಿ ಅಲಂಕಾರವನ್ನು ಮಾಡಲಾಗುವುದು, ಎರಡನೇ ದಿನ ಶ್ರೀ ಗಾಯತ್ರಿ ದೇವಿ ಅಲಂಕಾರ, ಶ್ರೀ ಲಲಿತಾದೇವಿ ಅಲಂಕಾರ, ಶ್ರೀ ಅನ್ನಪೂರ್ಣೇಶ್ವರಿ ದೇವಿ ಅಲಂಕಾರ, ಶ್ರೀ ಅರ್ಧನಾರೀಶ್ವರ ದೇವಿ ಅಲಂಕಾರ, ಶ್ರೀ ಸರಸ್ವತಿ ದೇವಿ ಅಲಂಕಾರ, ಶ್ರೀ ದುರ್ಗಾದೇವಿ ಅಲಂಕಾರ, ಶ್ರೀ ಮೈಶಾಸುರ ಮರ್ದಿನಿ ದೇವಿ ಅಲಂಕಾರ, ಅಮ್ಮನವರ ನಿಜರೂಪ ದೇವಿ ಅಲಂಕಾರವನ್ನು ಮಾಡಲಾಗುವುದು, ಜೊತೆಗೆ 1008 ಮುತ್ತೈದೆಯರಿಗೆ ಉಚಿತವಾಗಿ ಉ ಡಿತುಂಬ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ತಾಯಣ್ಣ ತಿಳಿಸಿದರು.
ಪ್ರತಿ ದಿನ ಸಂಜೆ, ಭರತನಾಟ್ಯ ಜನಪದ ಗೀತ ಗಾಯನ ಮಿಮಿಕ್ರಿ ಭಜನೆ ಭಕ್ತಿ ಗೀತೆಗಳು ಹಾಸ್ಯ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಮತ್ತು ಈ ಮಧ್ಯೆ ಚಂಡಿಕಾಯಾಗ ಶ್ರೀ ಶ್ರೀಶೈಲ ಬ್ರಮರಾಂಬಿಕ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣೋತ್ಸವ ಜರಗಿಸಲಾಗುವುದು ಎಂದು ಅವರು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿರುತ್ತದೆ. ಈ ವಿಜ್ರಂಬಣೆಯಿಂದ ಜರುಗಲಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವುಗಳು ಹೊಸ ಕುಟುಂಬ ಸಮೇತರಾಗಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಅಧ್ಯಕ್ಷ ತಾಯಣ್ಣ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸತ್ಯನಾರಾಯಣ, ಹನುಮಂತಪ್ಪ ,ರಾಧಮ್ಮ, ಬಸವರಾಜ್ ,ಸಂತೋಷ್ ಸ್ವಾಮಿ ,ತಿಪ್ಪಣ್ಣ ,ರಮೇಶ್ ,ಕೃಷ್ಣ, ರಾಮ, ಬಾಬು ಪ್ರಕಾಶ್, ಕಿರಣ್ ಕುಮಾರ್ ಸೇರಿದಂತೆ ಸಮಿತಿಯ ಇತರ ಭಕ್ತಾದಿಗಳು ಇದ್ದರು.