ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೧೭: ತಾಲ್ಲೂಕಿನ ಮೋಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿಯ ಯುವ ಸಪ್ತಾಹ ಅಭಿಯಾನದ ಅಂಗವಾಗಿ ಪ್ರಾಚೀನ, ರಾಷ್ಟ್ರೀಯ, ಅಂತಾರಾಷ್ಟ್ರೀಯ ನಾಣ್ಯ ಮತ್ತು ಶಿಲಾಯುಗದ ಸ್ಮಾರಕಗಳ ಪ್ರದರ್ಶನ ಹಾಗೂ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜ,೧೬ ರಂದು ಹಮ್ಮಿಕೊಳ್ಳಲಾಗಿದ್ದ ನಾಣ್ಯ,ನೋಟುಗಳ ಪ್ರದರ್ಶನದ ಸಂಪನ್ಮೂಲ ವ್ಯಕ್ತಿ ಕರ್ನಾಟಕ ಯುವ ನಾಣ್ಯ ಸಂಗ್ರಹಕಾರ ಹಾಗೂ ಪ್ರದರ್ಶಕರು ಆದ ಶ್ರೀ ಶಾಂತಕುಮಾರ್.ಬಿ ಗೋಟೂರು ಇವರು ಮೂಲತಃ ಕೃಷಿಕ ವೃತ್ತಿಯನ್ನವಲಂಬಿಸಿದ್ದರೂ, ನಾಣ್ಯ, ನೋಟುಗಳ ಸಂಗ್ರಹಿಸುವಲ್ಲಿ ಹವ್ಯಾಸ ಬೆಳೆಸಿಕೊಂಡು ಪ್ರಾಚೀನ, ರಾಷ್ಟ್ರೀಯ, ಅಂತಾರಾಷ್ಟ್ರೀಯ ನಾಣ್ಯ ನೋಟುಗಳ ಸಂಗ್ರಹ ಮಾಡಿದ ಬಗೆ, ಆಸಕ್ತಿ, ಐತಿಹಾಸಿಕ ಪ್ರಜ್ಞೆಯ ಬಗ್ಗೆ ತಿಳಿಸುತ್ತಾ ಯುವಶಕ್ತಿಗಳಾದ ನಾವು ಇಂತಹ ಅಭಿರುಚಿಯನ್ನು ಬೆಳೆಸಿಕೊಂಡು ದೇಶದ ಸಂಸ್ಕೃತಿ, ಸಂಪತ್ತನ್ನು ಸಂರಕ್ಷಸುವುದು ನಮ್ಮೆಲ್ಲರ ಹೊಣೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಅದೇ ರೀತಿಯಾಗಿ ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮನೋಹರ್ ಸಿ.ಎಂ ಇವರು ತೆಕ್ಕಲಕೋಟೆ ಭಾಗದಲ್ಲಿ ದೊರೆಕಿರುವ ಶಿಲಾಯುಗದ ವಸ್ತುಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳು ಐತಿಹಾಸಿಕ, ಪಾರಂಪರಿಕ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ನಮ್ಮ ಸಂಸ್ಕೃತಿ , ಸಂಪ್ರದಾಯ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಸಾಧ್ಯವೆಂದು ಸಾರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಕಲಾವತಿ ಬಿ.ಜಿ ಅವರು ಕುವೆಂಪು ಅವರ ಕಲ್ಕಿ ಕವಿತೆಯಂತೆ ಯುವಶಕ್ತಿ ಕನಸಿನಲ್ಲೂ ಉತ್ಸಾಹದಿಂದ ಕಾರ್ಯನ್ಮುಖರಾದಾಗ ಅಸಾಧ್ಯವಾದುದು ಯಾವುದು ಇಲ್ಲ. ಎಂದು ಹೇಳಿ ವಿದ್ಯಾರ್ಥಿಗಳು ಯಾವುದಾದರೊಂದು ಉತ್ತಮ ಅಭಿರುಚಿಯನ್ನು ಬೆಳೆಸಿಕೊಂಡಾಗ ಅವನ ಜೀವನ ಪರಿಪೂರ್ಣ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಅದೇ ರೀತಿಯಾಗಿ ಇಂದು ಅಂದರೆ ಜ.೧೭ ರಂದು ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಪ್ರಾಂಶುಪಾಲರಾದ ಡಾ. ಇಸ್ಮಾಯಿಲ್ ಮಕಂದಾರ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಗೆಳೆಯರನ್ನಾಗಿ ಮಾಡಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಿ, ಪುಸ್ತಕಗಳು ಮನುಷ್ಯನನ್ನು ಸಂಪತ್ಭರಿತವಾಗಿ ರೂಪಿಸುತ್ತವೆ ಎಂದು ಮಾತನಾಡಿ ಪ್ರೇರಿಪಿಸಿದರು. ಪುಸ್ತಕ ಪ್ರದರ್ಶನದಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಅವಲೋಕಿಸಿದ ವಿದ್ಯಾರ್ಥಿಗಳು ಸಾರ್ಥಕ ಭಾವದ ಅಭಿಪ್ರಾಯ ಹಂಚಿಕೊAಡು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎನ್ ಎಸ್ ಎಸ್ ನ ಕಾರ್ಯಕ್ರಮಾಧಿಕಾರಿಗಳಾದ
ಬಕಾಡೆ ಪಂಪಾಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರೆ, ವಿದ್ಯಾರ್ಥಿನಿ ಕು. ಶ್ವೇತಾ ಪ್ರಾರ್ಥನೆ ಮಾಡಿದರು. ಉಪನ್ಯಾಸಕ ಡಾ. ಬೋರಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಪ್ರಾಧ್ಯಾಪಕರುಗಳಾದ ಕು. ಅಮಲ್, ಪ್ರವೀಣ ಎ.ಎಂ.ಪಿ, ಆದರ್ಶ ಕೆ.ಎನ್, ಮಹಮದ್ ಅಸ್ಲಾಂ, ಗ್ರಂಥಪಾಲಕ ಪಂಪಾಪತಿ, ಶ್ರೀನಿವಾಸ್, ನವೀನ್, ಹರೀಶ್, ಮನೋಹರ್ , ಆನಂದ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.