ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೧೮: ಕಾಶ್ಮೀರದ ಹಿಂದುಗಳನ್ನು ಇಸ್ಲಾಮಿಗೆ ಮತಾಂತರ ಮಾಡುವ ಮೊದಲು ತನ್ನನ್ನು ಮತಾಂತರ ಮಾಡು – ಎಂದು ಮೊಘಲ್ ದೊರೆ ಔರಂಗಜೇಬನಿಗೆ ಸವಾಲೆಸೆದ ಧರ್ಮರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಅಂತಹ ಗುರು ತೇಗ್ ಬಹಾದ್ದೂರ್ ಅವರ ಮಗ ಸಿಕ್ಖರ ೧೦ನೇ ಗುರು ಧನ್ ಧನ್ ಗುರು ಗೋವಿಂದ್ ಸಿಂಗ್ ಅವರು ೩೫೮ ನೇ ಜನ್ಮ ದಿನಾಚರಣೆಯನ್ನು ನಿನ್ನೆ ನಗರದ ಕೌಲಬಜಾರನ್ ಜವರಿ ಸ್ಟ್ರೀಟ್ ನ ಗುರು ದ್ವಾರದಲ್ಲಿ ಅಚರಿಸಲಾಯಿತು.
ಸಿಕ್ ಸಮಾಜದ ಎಲ್ಲಾರೂ ಸೇರಿ ಕೌಲಬಜಾರನ್ ಜವರಿ ಸ್ಟ್ರೀಟ್ ನ ಗುರು ದ್ವಾರದಲ್ಲಿ ಗುರು ಗೋವಿಂದ್ ಸಿಂಗ್ ಅವರನ್ನು ಸ್ಮರಿಸಿ ಎಲ್ಲರಿಗೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಗಾಣಿ ಸುರಿಂದರ್ ಸಿಂಗ್, ಜಿ. ಬಾಬು ಸಿಂಗ್, ವಿಜಯ್ ಸಿಂಗ್, ಜೆಪಿ .ಗಣೇಶ್ ಸಿಂಗ್, ಎಛಿ. ವೇಣು ಸಿಂಗ್, ವಿನೋದ್ ಸಿಂಗ್,ಅಮನ್ದೀಪ್ ಸಿಂಗ್, ಅಮರ್ಜೀತ್ ಸಿಂಗ್, ಓಂ ಸಿಂಗ್, .ಜೆಪಿ ಗಣೇಶ್ ಸಿಂಗ್, ಭಾಸ್ಕರ್ ಸಿಂಗ್ ಹಾಗೂ ಸಿಕ್ ಸಮಾಜದ ಅನೇಕ ಮುಖಂಡರುಗಳು ಮತ್ತಿರ ಉಪಸ್ಥಿತರಿದ್ದರು.