ಬಳ್ಳಾರಿ,ಜ,೧೮: ಶ್ರೀಶಿರಿಡಿ ಸಾಯಿ ಸೇವಾ ಸತ್ಸಂಗ್ ಟ್ರಸ್ಟ್ ವತಿಯಿಂದ ಇಂದು ಬೆಳಿಗ್ಗೆ ೮ ಗಂಟೆಗೆ ನೇತ್ರ ತಪಾಸಣೆ ಶಿಬಿರವನ್ನು ನಗರದ ಬಲಿಜ ಭವನದಲ್ಲಿ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ ಎಂದು : ಶ್ರೀಶಿರಿಡಿ ಸಾಯಿ ಸೇವಾ ಸತ್ಸಂಗ್ ಟ್ರಸ್ಟ್ನ ಅಧ್ಯಕ್ಷ ಆರ್. ಗೋಪಾಲಕೃಷ್ಣ ತಿಳಿಸಿದ್ದಾರೆ.
ಜ.೧೮ ರಂದು ಟ್ರಸ್ಟ್ನ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಶಿಬಿರವನ್ನು ದಿ.ಪ್ರೋವಿನ್ ಷಿಯಲ್ ವೈಶ್ಯ ಎಜುಕೇಷನ್ ಫಂಡ್ನ ಪ್ರಧಾನ ಕರ್ಯರ್ಶಿ ಪತ್ತಿ ಗೋಪಾಲಕೃಷ್ಣ ಉದ್ಘಾಟನೆ ಮಾಡಲಿದ್ದಾರೆ, ೯ ಗಂಟೆಯಿಂದ ನೇತ್ರ ತಪಾಸಣೆಯನ್ನು ಡಾ.ವಿಜಯ್ ನಡೆಸಲಿದ್ದಾರೆ ಎಂದು ತಿಳಿಸಿದರು.
ಜ.೨೦ ರಂದು ಸತ್ಸಂಗದ ೨೩ನೇ ವರ್ಷಿಕೋತ್ಸವ ಪ್ರಯುಕ್ತ ಉಚಿತ ಸಾಮೂಹಿಕ ಶ್ರೀಸಾಯಿ ಸತ್ಯವ್ರತ, ಬೆಳಿಗ್ಗೆ ಅಭಿಷೇಕ, ೧೦ ಗಂಟೆಗೆ ಸಾಮೂಹಿಕ ಶ್ರೀಸಾಯಿಸತ್ಯವ್ರತ, ಆರತಿ,ಪ್ರಸಾದ ವಿತರಣೆ ನಡೆಯಲಿದೆ. ಅಂದು ಸಂಜೆ ೬ ಗಂಟೆಗೆ ಟ್ರಸ್ಟ್ನಲ್ಲಿ ತರಬೇತಿ ಪಡೆದ ವಿದ್ಯರ್ಥಿಗಳಿಂದ ನೃತ್ಯ ಪ್ರರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜ.೨೧ ರಂದು ಬೆಳಿಗ್ಗೆ ೯.೩೦ ಕ್ಕೆ ಅಯೋಧ್ಯಯ ರಾಮನ ಪ್ರಾಣ ಪ್ರತಿಷ್ಟಾಪನೆ ಅಂಗವಾಗಿ ಬಲಿಜ ಭವನದಲ್ಲಿ ಬೆಳಿಗ್ಗೆ ರಾಮ ಮಂದಿರ ಮತ್ತು ಸ್ವಾಮಿ ವಿವೇಕಾನಂದರ ಕುರಿತು ಬೆಂಗಳೂರಿನ ಹಾರಿಕಾ ಮಂಜುನಾಥ ಉಪನ್ಯಾಸ, ವಿಚಾರ ಸಂಕಿರಣ ನಡೆಯಲಿದೆ. ನಂತರ ೧೧ ಗಂಟೆಗೆ ನಡೆಯುವ ಸಮಾರೋಪ ಸಮಾರಂಭಕ್ಕೆ ಮಾಜಿ ಸಂಸದ ಕೆ.ಸಿ.ಕೊಂಡೊಯ್ಯ, ಬಸವರಾಜೇಶ್ವರಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್, ಬುಡಾ ಮಾಜಿ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ ಭಾಗವಹಿಸಲಿದ್ದಾರೆ.
ನಂತರ ನೇತ್ರ ಚಿಕಿತ್ಸೆ ಪಡೆದವರಿಗೆ ಔಷಧಿ ವಿತರಣೆ, ಟೈಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ, ಸಂಜೆ ೬ ಶ್ರೀರಾಮ ದೀಪೋತ್ಸವ ಬಳಿಕ ಪ್ರಸಾದ ವಿತರಣೆ ನಡೆಯಲಿದೆಂದು ತಿಳಿಸಿದರು. ಟ್ರಸ್ಟ್ ಈವರಗೆ ಕೈಗೊಂಡ ಕರ್ಯಕ್ರಮಗಳ ಬಗ್ಗೆ ವಿವರಿಸುತ್ತ. ೧೪೭೨ ನೇತ್ರ ಚಿಕಿತ್ಸೆ ಎಸ್ಎಸ್ಎಲ್ಸಿ, ಪಿಯುಸಿ ವೇಳೆ ವಿದ್ಯರ್ಥಿಗಳಿಗೆ ಪ್ರೇರಣಾ ತರಗತಿ, ಕೋವಿಡ್ನಲ್ಲಿ ಊಟ ವಿತರಿಸಿದೆ. ೩೫ ದಿನದಲ್ಲಿ ೮೭೭೫ ಜನರಿಗೆ ೧೮೭೦ ಲಸಿಕೆ ಕೊಡಿಸಿದೆ. ೧೨ ಸಾವಿರ ಮಾಸ್ಕ್ ವಿತರಿಸಿದೆ.
೭೫ ಜನ ಬೀದಿ ಬದಿ ವ್ಯಾಪಾರಿಗಳಿಗೆ ಧ್ವನಿ ರ್ಧಕ ನೀಡಿದೆ ೬೦೦ ಕ್ಕೂ ಹೆಚ್ಚು ಯುವ ಜನತೆಗೆ ಟೈಲರಿಂಗ್ ,೭೫೦ ಕ್ಕೂ ಹೆಚ್ಚು ಕಂಪ್ಯೂಟರ್ ತರಬೇತಿ ನೀಡುತ್ತಿದೆ. ಬಡ ವಿದ್ಯರ್ಥಿಗಳಿಗೆ ಕಾಲೇಜು ಶುಲ್ಕ ಆರು ಜನರಿಗೆ ನೀಡಿದೆ. ೫೦೦ ಕ್ಕೂ ಹೆಚ್ಚು ಜನರಿಗೆ ಕೃತಕ ಕಾಲು ಜೋಡಣೆ ಮಾಡಿದೆ. ೮೯ ಜನರಿಗೆ ಹಿಯರಿಂಗ್ ಏಡ್ಸ್ ನೀಡಿದೆ. ಬೇಸಿಗೆ ಅವಧಿಯಲ್ಲಿ ಗ್ರಹಂ ರಸ್ತೆಯಲ್ಲಿ ಮಜ್ಜಿಗೆ ನೀರು ವಿತರಣೆ ಮಾಡುತ್ತಿದೆ. ಪ್ರತಿ ಭಾನುವಾರ ಉಚಿತ ಆರೋಗ್ಯ ತಪಾಸಣೆಯನ್ನು ಶ್ರೀಶಿರಿಡಿ ಸಾಯಿ ಸೇವಾ ಸತ್ಸಂಗ್ ಟ್ರಸ್ಟ್ ಮಾಡುತ್ತಿದೆಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ಡಿ.ಶ್ರೀನಿವಾಸ್, ಕೆ.ಹೆಚ್.ರಮೇಶ್, ಸಹ ಕರ್ಯರ್ಶಿ ಕೊಂಡಯ್ಯ, ಎಂ.ರಮೇಶ್, ಖಜಾಂಚಿ ಕೆ.ಗೋವಿಂದರಾಜುಲು, ಸಲಹೆಗಾರರಾದ ಜೆ.ಕುಶೋರ್ ಕುಮಾರ್ , ಸೊಂತಗಿರಧರ್ ಮೊದಲಾದವರು ಇದ್ದರು.