ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೧೯: ಆಂಧ್ರದ ಪ್ರಮುಖ ನಟ, ನಟ ಸಾರ್ವಭೌಮ ಎನ್ ಟಿ ಆರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವು ಹವಂಭಾವಿ, ಸಿರುಗುಪ್ಪ ರಸ್ತೆ ಕಾಲುವೆ ಹತ್ತಿರ ಇರುವ ನೇಸ್ತಮ್ ಎಂಟರ್ ಪ್ರೈಸಸ್ ಕಾರ್ಯಾಲಯದಲ್ಲಿ ಎನ್ ಟಿ ಆರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ನೇರವೆರಿತು. ಎನ್ ಟಿ ಆರ್ ಕ್ಯಾಲೆಂಡರ್ನ್ನು ಕೆ. ಶೇಷಗಿರಿರಾವ್ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಮಬ್ರಹ್ಮಂ, ವಲೀ ಅಹ್ಮದ್ ಅವರು ಘಂಟಸಾಲ, ಎನ್ ಟಿ ಆರ್ ಅವರ ಪದ್ಯ, ಹಾಡುಗಳನ್ನು ಹಾಡಿ ಅಭಿಮಾನಿಗಳ ಮನ ರಂಜಿಸಿದ್ದಾರೆ, ಈ ಕಾರ್ಯಕ್ರಮದಲ್ಲಿ ಎನ್ ಟಿ ಆರ್ ಅಭಿಮಾನಿ ಬಳಗ, ಭೀಮಿನೇನಿ ಸಹೋದರರು, ಎನ್ ಟಿ ಆರ್ ಫ್ಯಾನ್ಸ್ ಅಸೋಸಿಯೇಶನ್ ಬಸವರಾಜ್ ಮತ್ತು ಸದಸ್ಯರು ಕಲಾವಿದ ನೇತಿ ರಘುರಾಮ ಇನ್ನಿತರರು ಪಾಲ್ಗೊಂಡಿದ್ದಾರೆ.