ಬೆಂಗಳೂರು,ಜ,೧೯: ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆಗೆ ಪೂರ್ವಭಾವಿಯಾಗಿ ಕರ್ನಾಟಕ ಅಂಚೆ ವೃತ್ತವು ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಪಕ್ಕದಲ್ಲಿರುವ ಸಂದೇಶ್ ಮ್ಯೂಸಿಯಂ ಆಫ್ ಕಮ್ಯುನಿಕೇಷನ್ನಲ್ಲಿ ‘ರಾಮಾಯಣ-ದಿ ಎಸೆನ್ಸ್ ಆಫ್ ಲೈಫ್’ ಪ್ರದರ್ಶನವನ್ನು ಏರ್ಪಡಿಸಿದೆ. ಇದು ಹೆಸರಾಂತ ಅಂಚೆಚೀಟಿ ಸಂಗ್ರಹಕಾರ ಮತ್ತು ಲೇಖಕಿ ಎನ್ ಶ್ರೀದೇವಿಯವರ ದಶಕಗಳ ಹಿಂದಿನ ಅಪರೂಪದ ಅಂಚೆ ಲಕೋಟೆಗಳು ಮತ್ತು ಅಂಚೆಚೀಟಿಗಳ ಸಂಗ್ರಹವನ್ನು ಪ್ರದರ್ಶಿಸುತ್ತದೆ.
೬೬ ವರ್ಷದ ಬೆಂಗಳೂರು ಮೂಲದ ಶ್ರೀದೇವಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ, ಇಲ್ಲಿ ಪ್ರದರ್ಶಿಸಲಾದ ನನ್ನ ಸಂಗ್ರಹಣೆಯಲ್ಲಿ ಭಾರತ, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ಇಂಡೋನೇಷ್ಯಾ, ಇತರ ಆಗ್ನೇಯ ಏಷ್ಯಾದ ರಾಷ್ಟ್ರಗಳು ಹೊರಡಿಸಿದ ರಾಮಾಯಣಕ್ಕೆ ಸಂಬAಧಿಸಿದ ಅಂಶಗಳ ಮೇಲೆ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ.
ಅಂಚೆಚೀಟಿಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ವಸ್ತುಸಂಗ್ರಹಾಲಯದ ಪ್ರವೇಶ ದ್ವಾರದ ತೆರೆದ ಜಾಗದಲ್ಲಿ ಇದನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಪ್ರದರ್ಶನವು ಫೆಬ್ರವರಿ ೧೫ ರವರೆಗೆ ಇರುತ್ತದೆ.