ಸುವರ್ಣವಾಹಿನಿ ಸುದ್ದಿ
ಕೊಪ್ಪಳ, ಜ,೨೦: ತುಂಗಭದ್ರಾ ನೀರಾವರಿ ನಿಗಮದಲ್ಲಿ ೨೦೦೯-೧೦ ಮತ್ತು ೨೦೧೦-೧೧ರ ಸಾಲಿನಲ್ಲಿ ೬೫೦ ಕೋಟಿ ರೂಪಾಯಿ ಅವ್ಯವಹಾರದಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಅವ್ಯವಹಾರದಲ್ಲಿ ಭಾಗಿಯಾದ ತುಂಗಭದ್ರಾ ನೀರಾವರಿ ನಿಗಮದ ೨೮ ಇಂಜಿನಿಯರ್ಗಳನ್ನು ಜಲಸಂಪನ್ಮೂಲ ಇಲಾಖೆಯ ಅಧೀನ ಕಾರ್ಯದರ್ಶಿ ಎನ್ ಹರ್ಷ ಅವರು ವಜಾಗೊಳಿಸಿ ಆದೇಶ ಹೊರಡಸಿದ್ದಾರೆ.
೨೦೦೯-೧೦ ಮತ್ತು ೨೦೧೦-೧೧ರ ಅವಧಿಯಲ್ಲಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗಳ ನವೀಕರಣಕ್ಕೆ ಸರ್ಕಾರ ಚಾಲನೆ ನೀಡಿತ್ತು. ಆದರೆ ಅಧಿಕಾರಿಗಳು ನವೀಕರಣ ಕಾಮಗಾರಿಗಳನ್ನು ನಡೆಸದೇ ಗುತ್ತಿಗೆದಾರರ ಜೊತೆ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಪಾವತಿಯಾಗುವಂತೆ ನೋಡಿಕೊಂಡಿದ್ದಾರೆ. ಈ ಮೂಲಕ ಅಧಿಕಾರಿಗಳು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಜಲಸಂಪನ್ಮೂಲ ಇಲಾಖೆ ತನಿಖೆ ನಡೆಸಿತ್ತು. ತನಿಖೆ ವೇಳೆ ಅಕ್ರಮ ಮಾಡಿರುವು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ.
೨೦೦೯-೧೦ರಲ್ಲಿ ೯ ಪ್ರಕರಣಗಳು ನಡೆದಿದ್ದು, ೨೦೧೦-೧೧ರಲ್ಲಿ ೩ ಪ್ರಕರಣಗಳು ಒಟ್ಟು ೧೩ ಪ್ರಕರಣಗಳು ನಡೆದಿವೆ. ಈ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಇಂಜಿನಿಯರ್ಗಳನ್ನು ಅಮಾನತು ಮಾಡಲಾಗಿದೆ.
ವಜಾಗೊಂಡ ಅಧಿಕಾರಿಗಳು:
ಅನಂತ ಕುಮಾರ್ ಚೂರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, (ಪ್ರಸ್ತುತ ಅಧೀಕ್ಷಕ ಇಂಜಿನಿಯರ್, ಮುಖ್ಯ ಇಂಜಿನಿಯರ್ ರವರ ಕಚೇರಿ, ಸಂಪರ್ಕ ಮತ್ತು ಕಟ್ಟಡಗಳು (ಉತ್ತರ), ಧಾರವಾಡ).
ವಿನೋದ್ ಕುಮಾರ್ ಗುಪ್ತ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, (ಪ್ರಸ್ತುತ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆ).
ಎಂ. ಹನುಮಂತಪ್ಪ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಂ.೧, ಕಾಲುವೆ ಉಪ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ತುರುವಿಹಾಳ, ರಾಯಚೂರು ಜಿಲ್ಲೆ).
ಬಿ. ಶಿವಮೂರ್ತಿ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಚಿತ್ರದುರ್ಗ).
ಸೂಗಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪ್ರಭಾರ), (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗ ಕುಷ್ಟಗಿ).
ವಿ. ತಿಮ್ಮಣ್ಣ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬಳ್ಳಾರಿ ಉಪ ವಿಭಾಗ, ಬಳ್ಳಾರಿ).
ಈಶ್ವರ ನಾಯಕ್, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಂ.೨ ಹೆಚ್.ಆರ್.ಬಿ.ಸಿ ಉಪ ವಿಭಾಗ, ಕಾವೇರಿ. ನೀರಾವರಿ ನಿಗಮ ನಿಯಮಿತ, ಹೊಸೂರು, ಕೆ.ಆರ್.ನಗರ ತಾಲೂಕು ಮೈಸೂರು ಜಿಲ್ಲೆ).
ಕೆ. ಶಾಂತರಾಜು, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಆರ್.ಡಿ.ಎಸ್. ಉಪ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಗಿಲ್ವೇಸುಗೂರು ಶಿಬಿರ, ರಾಯಚೂರು ಜಿಲ್ಲೆ).
ಬಸವರಾಜ ಹಳ್ಳಿ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ೨೦೨, ೦.೪, ೨. ಟಿ.ಬಿ.ಬೋರ್ಡ್, ಅದೋನಿ, ಕರ್ನೂಲ್ ಜಿಲ್ಲೆ, ಆಂಧ್ರ ಪ್ರದೇಶ). ಉಪ ವಿಭಾಗ,
ಸಿ. ಹೆಚ್.ಜಿ. ವೆಂಕಟೇಶ್ವರ ರಾವ್, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿAಗ್ ಉಪ ವಿಭಾಗ ಬಳ್ಳಾರಿ).
ಜಿತೇಂದ್ರ, ಸಹಾಯಕ ಇಂಜಿನಿಯರ್, (ಪ್ರಸ್ತುತ ತಾಂತ್ರಿಕ ಸಹಾಯಕರು, ಲೋಕೋಪಯೋಗಿ ವಿಭಾಗ, ಬಳ್ಳಾರಿ).
ರಾಜೀವನಾಯಕ್, ಸಹಾಯಕ ಇಂಜಿನಿಯರ್, (ಪುಸ್ತುತ ತಾಂತ್ರಿಕ ಸಹಾಯಕರು, ನಂ.೧, ಭದ್ರಾ ಮೇಲ್ದಂಡೆ ಯೋಜನ ವಿಭಾಗ. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಕಡೂರು, ಚಿಕ್ಕಮಗಳೂರು ಜಿಲ್ಲೆ).
ವಿಶ್ವನಾಥ ಹೆಚ್., ಸಹಾಯಕ ಇಂಜಿನಿಯರ್, (ಪ್ರಸ್ತುತ ತಾಂತ್ರಿಕ ಸಹಾಯಕರು, ನಂ.೨, ಕಾಲುವೆ ವಿಭಾಗ, ಕರ್ನಾಕ ನೀರಾವರಿ ನಿಗಮ ನಿಯಮಿತ, ವಡ್ಡರಹಟ್ಟಿ ಕ್ಯಾಂಪ್, ಗಂಗಾವತಿ ತಾಲೂಕು ಕೊಪ್ಪಳ ಜಿಲ್ಲೆ).
ಕೃಷ್ಣ ಮೂರ್ತಿ ಎಂ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜಲಸಂಪನ್ಮೂಲ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆ).
ದೇವೇಂದ್ರಪ್ಪ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಉಪ ವಿಭಾಗ, ಗಂಗಾವತಿ).
ಯಲ್ಲಪ್ಪ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಇಂಜಿನಿಯರ್, ವಿಜಯನಗರ ಕಾಲುವೆ ಉಪ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಮಲಾಪುರ, ಬಳ್ಳಾರಿ ಜಿಲ್ಲೆ).
ರವಿ.ಕೆ.ಬಿ. ಕಿರಿಯ ಇಂಜಿನಿಯರ್, (ಪ್ರಸ್ತುತ ಸಹಾಯಕ ಇಂಜಿನಿಯರ್-೨, ನೀರು ಮತ್ತು ನೈರ್ಮಲ್ಯ ಕುಡಿಯುವ ಇಲಾಖೆ ಉಪ ವಿಭಾಗ, ಬಳ್ಳಾರಿ).
ರವಿ.ಕೆ.ಬಿ, ಕಿರಿಯ ಇಂಜಿನಿಯರ್, (ಪ್ರಸ್ತುತ ಸಹಾಯಕ ಇಂಜಿನಿಯರ್-೨, ಕುಡಿಯುವ ಉಪ ವಿಭಾಗ, ಬಳ್ಳಾರಿ). ನೀರು ಮತ್ತು ನೈರ್ಮಲ್ಯ ಇಲಾಖೆ
ಜಗನ್ನಾಥ ಕುಲಕರ್ಣಿ, ಕಿರಿಯ ಇಂಜಿನಿಯರ್, (ಪ್ರಸ್ತುತ ಸಹಾಯಕ ಇಂಜಿನಿಯರ್-೨, ನಂ.೨, ಕಾಲುವೆ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ವಡ್ಡರಹಟ್ಟಿ ಕ್ಯಾಂಪ್, ಗಂಗಾವತಿ ತಾ||, ಕೊಪ್ಪಳ ಜಿಲ್ಲೆ).
ಕನಕಪ್ಪ, ಕಿರಿಯ ಇಂಜಿನಿಯರ್. (ಪ್ರಸ್ತುತ ಸಹಾಯಕ ಇಂಜಿನಿಯರ್-೨, ನಂ.೪, ಕಾಲುವೆ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಸಿರವಾರ, ರಾಯಚೂರು ಜಿಲ್ಲೆ).
ಅಬ್ದುಲ್ ರಶೀದ ಖಾನ್, ಕಿರಿಯ ಇಂಜಿನಿಯರ್, (ಪ್ರಸ್ತುತ ಸಹಾಯಕ ಇಂಜಿನಿಯರ್-೨, ನಂ.೩, ತುಂಗಭದ್ರಾ ಎಡದಂಡೆ ಕಾಲುವೆ ಉಪ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಮಾನ್ನಿ, ಮಾನ್ನಿ ತಾಲೂಕು ರಾಯಚೂರು ಜಿಲ್ಲೆ).
ಗಜಾನನ, ಕಿರಿಯ ಇಂಜಿನಿಯರ್, (ಪ್ರಸ್ತುತ ಸಹಾಯಕ ಇಂಜಿನಿಯರ್-೨, ಲೋಕೋಪಯೊಗಿ ಉಪ ವಿಭಾಗ, ಲಿಂಗಸೂಗೂರು).
ಮೋಹನ್ ಕುಮಾರ್, ಕಿರಿಯ ಇಂಜಿನಿಯರ್, (ಪ್ರಸ್ತುತ ಸಹಾಯಕ ಇಂಜಿನಿಯರ್-೨, ನಂ.೩, ಜಿ.ಎಲ್.ಬಿ.ಸಿ. ಉಪ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಂಕಣವಾಡಿ, ರಾಯಭಾಗ ತಾಲೂಕು ಬೆಳಗಾವಿ ಜಿಲ್ಲೆ).
ಹೆಚ್.ಡಿ. ನಾಯಕ, ಕಿರಿಯ, ಇಂಜಿನಿಯರ್, (ಪ್ರಸ್ತುತ ಕಿರಿಯ ಇಂಜಿನಿಯರ್, ನಂ.೫, ಹೆಚ್.ಎಲ್.ಬಿ.ಸಿ. ಉಪ ವಿಭಾಗ, ಕಾವೇರಿ ನೀರಾವರಿ ನಿಗಮ ನಿಯಮಿತ, ಕೆ.ಆರ್.ಪೇಟೆ, ಮಂಡ್ಯ ಜಿಲ್ಲೆ).
ಮಲ್ಲಪ್ಪ ನಾಗಪ್ಪ, ಕಿರಿಯ ಇಂಜಿನಿಯರ್ (ಪಸ್ತುತ ಕಿರಿಯ ಇಂಜಿನಿಯರ್, ನಂ.೩೧, ಟಿ.ಎಲ್.ಬಿ.ಸಿ. ಉಪ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಾರಟಗಿ, ಕೊಪ್ಪಳ ಜಿಲ್ಲೆ).
ಮಹಿಮೂದ, ದ್ವಿತೀಯ ದರ್ಜೆ ಸಹಾಯಕರು, (ಪ್ರಸ್ತುತ ದ್ವಿತೀಯ ದರ್ಜೆ ಸಹಾಯಕರು, ನಂ.೩, ಕಾಲುವ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಸಿಂಧನೂರು, ರಾಯಚೂರು ಜಿಲ್ಲೆ).
ನಾಗರಾಜ, ದ್ವಿತೀಯ ದರ್ಜೆ ಸಹಾಯಕರು, (ಪ್ರಸ್ತುತ ದ್ವಿತೀಯ ದರ್ಜೆ ಸಹಾಯಕರು, ನಂ.೨, ಕಾಲುವೆ ಉಪ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಯರಮರಸ್, ರಾಯಚೂರು ಜಿಲ್ಲೆ).
ಆರೀಫ್ ಹುಸೇನ, ದ್ವಿತೀಯ ದರ್ಜೆ ಸಹಾಯಕರು, (ಪ್ರಸ್ತುತ ದ್ವಿತೀಯ ದರ್ಜೆ ಸಹಾಯಕರು, ನಂ.೩೧, ಟಿ.ಎಲ್.ಬಿ.ಸಿ. ಉಪ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಾರಟಗಿ, ಕೊಪ್ಪಳ ಜಿಲ್ಲೆ).
ಅಬ್ದುಲ್ ಹಕ್, ಅನುರೇಖಕಾರರು, (ಪ್ರಸ್ತುತ ಅನುರೇಖಕಾರರು, ನಂ.೪, ಕಾಲುವೆ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಸಿರವಾರ, ರಾಯಚೂರು ಜಿಲ್ಲೆ).