ಸುವರ್ಣವಾಹಿನಿ ಸುದ್ದಿ
ಕೊಟ್ಟೂರು,ಜ,೨೦: ಮಾನ್ಯ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಕೊಟ್ಟೂರು ಪಟ್ಟಣದಲ್ಲಿ ಕೈಗೊಂಡ ಸೈಕಲ್ ಸವಾರಿ ಸಂದರ್ಭದಲ್ಲಿ ಬೀದಿಬದಿ ಹೋಟೆಲ್ ಗಳಲ್ಲಿ ಕಂಡುಬAದ ಆಹಾರ ಪದಾರ್ಥ ಸ್ವಚ್ಚತೆ, ಮತ್ತು ಶುಚಿತ್ವ ಇಲ್ಲದ್ದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ವ್ಯಾಪಾರಿಗಳಿಗೆ ಸುರಕ್ಷತೆ ಕ್ರಮಗಳು ಕೈಗೊಳ್ಳುವಂತೆ ಸೂಚಿಸಿದ್ದರು.
ಪಟ್ಟಣದ ವಿವಿಧೆಡೆ ಸೈಕಲ್ ಮೂಲಕ ಸುತ್ತುವರಿದು ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು ಜನರ ಉತ್ತಮ ಆರೋಗ್ಯ ಹಿತದೃಷ್ಟಿಯಿಂದ ಸ್ವಚ್ಚತೆ ಕಡೆ ಗಮನ ಹರಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಹಾಗೂ ಆರೋಗ್ಯ ನಿರೀಕ್ಷಕರಾದ ಅನುಷ ಇವರಿಗೆ ಖಾರವಾಗಿ ಪ್ರಶ್ನಿಸಿದ್ದಲ್ಲದೇ ಆದಷ್ಟು ಬೇಗನೆ ಕ್ರಮ ಕೈಗೊಳ್ಳಿ ಎಂದಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಬೀದಿ ಬದಿ ವ್ಯಾಪಾರಿ ಮಂಜುನಾಥ ಅವರಿಗೆ ಆಹಾರ ಪದಾರ್ಥಗಳ ಸಂರಕ್ಷಣೆ, ಸುರಕ್ಷತೆ, ಶುಚಿತ್ವದ ಬಗ್ಗೆ ಆಹಾರ ವಿತರಣೆಯ ಸುರಕ್ಷತೆ,ಹಾಗೂ ಜನರಿಗೆ ಶುದ್ಧ ಕುಡಿಯುವ ನೀರು ಇಡುವಂತೆ ಮುಖ್ಯಾಧಿಕಾರಿ ಎ.ನಸರುಲ್ಲಾ, ಆರೋಗ್ಯ ನಿರೀಕ್ಷಕರಾದ ಅನುಷ ಮೇಡಂ, ಹೇಮನಗೌಡ ಖುದ್ದು ಹಾಜರಿದ್ದು ಸುರಕ್ಷತೆ ಪಾಠ ಮಾಡಿದ್ದನ್ನು ಕಂಡ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಆದೇಶಕ್ಕೆ ಪ.ಪಂ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಜವಾಬ್ದಾರಿ ನೋಡಿ ಮೆಚ್ಚಿಗೆ ವ್ಯಕ್ತಪಡಿಸಿದರು.