ತುಮಕೂರು, ಜ.೨೧: ತ್ರಿವಿಧ ದಾಸೋಹಿ, ವಿಶ್ವಕಂಡ ಸಂತ, ನಡೆದಾಡಿದ್ದ ದೇವರು ಐಕ್ಯರಾಗಿ ಐದು ವರ್ಷಗಳು ಕಳೆದಿವೆ. ಇಂದು ಶಿವಕುಮಾರ್ ಶ್ರೀ ಗಳ ಐದನೇ ಪುಣ್ಯ ಸ್ಮರಣೆ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ನಡೆದಿವೆ. ರುದ್ರಾಭಿಷೇಕ, ಅಷ್ಟೋತ್ತರ ಪೂಜೆ ಮಹಾಮಂಗಳಾರತಿ ಸೇರಿದಂತೆ ಹಲವು ಪೂಜೆ ನಡೆದಿದೆ. ಬೆಳಿಗ್ಗೆ ೮.೩೦ ರ ಬಳಿಕ ಶಿವಕುಮಾರ್ ಶ್ರೀ ಗಳ ಪುತ್ಥಳಿ ಮೆರವಣಿಗೆ ನಡೆಯಿತು. ಬೆಳಿಗ್ಗೆ ೧೧.೩೦ ರ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಶ್ರೀ ಗಳು ಸೇರಿದಂತೆ ಹಲವು ಮಠಾಧಿಶರು, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಪರಮೇಶ್ವರ್, ರಾಜಣ್ಣ, ಎಮ್ ಬಿ ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ. ಬೆಳಿಗ್ಗೆ ೧೦.೩೦ ಕ್ಕೆ ರಸ್ತೆ ಮೂಲಕ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಮೊದಲಿಗೆ ಮಠದ ಆವರಣದಲ್ಲಿ ನಿರ್ಮಾಣವಾಗಿರುವ ಸ್ಮೃತಿ ವನ ಉದ್ವಾಟನೆ ಆಗಲಿದೆ. ಶಿವಕುಮಾರ್ ಶ್ರೀ ಗಳ ಪ್ರತಿಮೆ ಸೇರಿದಂತೆ ಹಲವು ಪ್ರತಿಮೆಗಳನ್ನು ತಯಾರಿಸಲಾಗಿದೆ. ಬಳಿಕ ಬೆಳಿಗ್ಗೆ ೧೧ ಗಂಟೆಗೆ ಗೋಶಾಲ ಸಿದ್ದೇಶ್ವರ ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಮಾಜಿ ಸಿಎಂ ಸಚಿವರು ಭಕ್ತರು ಭಾಗಿಯಾಗಲಿದ್ದಾರೆ.