ಸುವರ್ಣವಾಹಿನಿ ಸುದ್ದಿ
ಕೊಟ್ಟೂರು,ಜ,೨೧: ಅಂಗನವಾಡಿ ಯತ್ತ ಸಮುದಾಯ.ಪಾಲಕ ಪೋಷಕರ ಸಭೆ ಅನ್ನು ಒ ಕೇಂದ್ರದಲ್ಲಿ ನಡೆಸಲಾಯಿತು. ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಕಳಿಸಲು ತಿಳಿಸಿದರು. ಏಕೆಂದರೆ ಅಂಗನವಾಡಿಯಲ್ಲಿ ಬೆಳಿಗ್ಗೆ ೧೦-೦೦ಗಂಟೆಗೆ ಮುಕ್ತ ಆಟ ಪ್ರಾರಂಭವಾಗುತ್ತದೆ. ಈ ಆಟದಲ್ಲಿ ಐದು ಮೂಲೆಗಳು ಇರುತ್ತವೆ ೧ ಗೊಂಬೆ ಮನೆ ಆಟ ಈ ಮೂಲೆಯಲ್ಲಿ ಮಕ್ಕಳು ಆಟ ಆಡಲು ಒಂದು ವಾರಕ್ಕೆ ಸಂಬAಧಿಸಿದAತೆ ಆಟಿಕೆ ಸಾಮಾನುಗಳನ್ನು ಇಡಲಾಗಿರುತ್ತದೆ. ಆಸ್ಪತ್ರೆಕಿಟ್ಟು, ಸಾಕು ಪ್ರಾಣಿಗಳು,ಕಾಡುಪ್ರಾಣಿಗಳು, ಅಡಿಗೆ ಸಾಮಾನುಗಳ ಕಿಟ್ಟು, ಕೃಷಿ ಸಾಮಗ್ರಿಗಳಕಿಟ್ಟು, ಕಿರಾಣಿ ಅಂಗಡಿ, ಬಟ್ಟೆಅಂಗಡಿ,ಹಣ್ಣು ಮತ್ತು ತರಕಾರಿ ವ್ಯಾಪಾರ, ಇವುಗಳಲ್ಲಿ ಯಾವುದಾದರೂ ಒಂದನ್ನು ಮಕ್ಕಳು ಆಟ ಆಡಲು ಇಟ್ಟಿರುತ್ತಾರೆ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ಅಥವಾ ಅನುಕರಣೆ ಮಾಡಲು ಈ ಮೂಲೆ ತುಂಬಾ ಉಪಯುಕ್ತವಾಗಿದೆ. ಎರಡನೇ ಮೂಲೆಯಲ್ಲಿ ಜೋಡಣೆ (ಬಿಲ್ಡಿಂಗ್ ಸೆಟ್ ) ಮೂರನೇ ಮೂಲೆಯಲ್ಲಿ ಪೋಣಿಕೆ ಮತ್ತು ಎಣಿಕೆ (ಮಣಿಗಳು ದಾರ ಹೂ ಎಲೆ ಕಡ್ಡಿ) ನಾಲ್ಕನೇ ಮೂಲೆಯಲ್ಲಿ ರಚನೆ( ಚಿತ್ರಗಳ ಮೇಲೆ ಕಲ್ಲು, ಬಣ್ಣದ ಕಡ್ಡಿಗಳಿಂದ ಚಿತ್ರ ಬಿಡಿಸುವುದು,ಐದನೇ ಮೂಲೆಯಲ್ಲಿ ಚಿತ್ರಕಥೆ ಪುಸ್ತಕ ವನ್ನು ನೋಡುವುದು, ಹೀಗೆ ಎಲ್ಲಾ ಮೂಲೆಗಳಲ್ಲಿ ಮಕ್ಕಳ ಮುಕ್ತವಾಗಿ ತಮಗೆ ಇಷ್ಟವಾದಲ್ಲಿ ಆಟ ಆಡಬಹುದು. ಮುಕ್ತ ಆಟವು ಬೆಳಗ್ಗೆ ೧೦ ಗಂಟೆಯಿAದ ೧೦:೩೦ರ ತನಕ ನಡೆಯುತ್ತದೆ. ಈ ಆಟದಿಂದ ಮಕ್ಕಳ ಮನಸ್ಸು ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ. ಇದರಿಂದ ಪ್ರಾರಂಭವಾದ ಶಾಲಾ ಪೂರ್ವ ಶಿಕ್ಷಣವು ವೇಳಾಪಟ್ಟಿ ಪ್ರಕಾರನಡೆಯುತ್ತದೆ, ಹಾಜರಾತಿ ಆಟ,ಕ್ಯಾಲೆಂಡರ್ ಹವಾಮಾನ ಬಗ್ಗೆ ಮಾಹಿತಿ,ವಿಷಯ ಚರ್ಚೆ, ಅಭಿನಯ ಗೀತೆ ಎರಡು ಅಭಿನಯ ಗೀತೆ ಒಂದು ಕುಂತು ಒಂದು ನಿಂತು, ಎಣಿಕೆ ಆಟ ,ಸಂಖ್ಯೆ ಆಟ ,ಮತ್ತು ಶಬ್ದ ಆಟವನ್ನು ಆಡಿಸಲಾಗುತ್ತದೆ ಲಘು ಉಪಹಾರದ ನಂತರ ೧೨ ಗಂಟೆಗೆ ಗಣಿತ ಬೌದ್ಧಿಕ ಚಟುವಟಿಕೆಯನ್ನು ವಾರದ ವಿಷಯಕ್ಕೆ ಅನುಗುಣವಾಗಿತಿಳಿಸಿಕೊಡಲಾಗುತ್ತದೆ . ಭಾಷಾ ಚಟುವಟಿಕೆಗೆ ಕಥೆ ಹೇಳಲಾಗುತ್ತದೆ.ಕ್ರಿಯಾತ್ಮಕ ಚಟುವಟಿಕೆಯನ್ನು ಚಿತ್ರ ಬಿಡಿಸುವುದು ಬಣ್ಣ ಹಚ್ಚುವುದು ಜೇಡಿಮಣ್ಣಿನ ಆಕೃತಿ ಮುದ್ರಣ ಅಂಟಿಸುವ ಚಟುವಟಿಕೆಯನ್ನು ಮಾಡಿಸಲಾಗುತ್ತದೆ ಇವುಗಳಲ್ಲಿ ಪ್ರತಿದಿನ ಯಾವುದಾದರೂ ಒಂದನ್ನು ವೇಳಾಪಟ್ಟಿ ಪ್ರಕಾರ ಮಕ್ಕಳಿಗೆ ಚಟುವಟಿಕೆ ಮಾಡಿಸಲಾಗುತ್ತದೆ. ಹೀಗೆ ಒಂದು ಮೂವತ್ತರ ತನಕ ಶಾಲಾ ಪೂರ್ವ ಶಿಕ್ಷಣ ನಡೆದು ನಂತರ ಒಂದು ಮೂವತ್ತಕ್ಕೆ ಊಟ ಕೊಡಲಾಗುತ್ತದೆ. ಎಂದು ವಿವರವಾದ ವೇಳಾಪಟ್ಟಿಯ ಬಗ್ಗೆ ಮೇಲ್ವಿಚಾರಕರದ ಶ್ರೀಮತಿ ಅನ್ನಪೂರ್ಣ ತಿಳಿಸಿದರು. ಈ ತಿಂಗಳ ಅಂಗನವಾಡಿಯತ್ತ ಸಮುದಾಯ ಕಾರ್ಯಕ್ರಮದಲ್ಲಿ ಪೋಷಕರು ಕಥೆಯನ್ನು ಹೇಳುವುದು. ಆದ್ದರಿಂದ ಈ ದಿನ ರೆಹನ್ ಮಗುವಿನ ತಾಯಿಯಾದ ಶ್ರೀಮತಿ ನಾಗಿನ ಇವರು ಆಮೆ ಮತ್ತು ಮೊಲದ ಕಥೆಯನ್ನು ತುಂಬಾ ಚೆನ್ನಾಗಿ ಹೇಳಿದರು. ಇದರಿಂದ ಮಕ್ಕಳ ಕಲಿಕೆಯನ್ನು ಮನೆಯಲ್ಲೂ ಸಹ ಪೋಷಕರ ತಿಳಿದು ಮಕ್ಕಳ ಶಿಕ್ಷಣ ಉತ್ತಮವಾಗಿರುವಂತೆ ನೋಡಲು ಅನುಕೂಲವಾಗುತ್ತದೆ. ಅಂಗನವಾಡಿಯಲ್ಲಿ ಶಾಲಾ ಪೂರ್ವ ಶಿಕ್ಷಣ ತುಂಬಾ ಉತ್ತಮವಾಗಿದೆ ಎಂದು ಪೋಷಕ ತುಂಬಾ ಖುಷಿಪಟ್ಟರು. ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸಂಗ್ರಹಿಸಿರುವುದು ತುಂಬಾ ಖುಷಿ ತಂದಿದೆ ಎಂದು ಪೋಷಕರು ವ್ಯಕ್ತಪಡಿಸಿದರು. ಕೇಂದ್ರದಲ್ಲಿರುವ ಕೇಂದ್ರ ಆಯೋಜನೆಯನ್ನು ವೀಕ್ಷಿಸಿದರು. ಪೋಷಕರಾದ ಪಾರ್ವತಿ ಅವರು ಎಲ್ಲರಿಗೂ ವಂದಿಸಿದರು. ಸಭೆಯಲ್ಲಿ ಸೈನಾಬಿ ಶರಣಮ್ಮ ಪಾರ್ವತಿ ಶಿವಗಂಗಾ ಶಿಲ್ಪ ಸಾವಿತ್ರಿ ಮುಂತಾದವರು ಪಾಲ್ಗೊಂಡಿದ್ದರು.
ಅAಗನವಾಡಿಯತ್ತ ಸಮುದಾಯ ಪಾಲಕ ಪೋಷಕರ ಸಭೆಯನ್ನು ಪ್ರತಿ ತಿಂಗಳು ಮೂರನೇ ಶುಕ್ರವಾರ ಅಥವಾ ಶನಿವಾರದಂದು ಎಲ್ಲಾ ಕೇಂದ್ರದಲ್ಲಿ ನಡೆಸಲಾಗುತ್ತದೆ. ಆದ್ದರಿಂದ ಸಭೆಗೆ ಪ್ರತಿ ತಿಂಗಳ ಹಾಜರಾಗುವಂತೆ ತಿಳಿಸಲಾಯಿತು. ಬಾಲಾವಿಕಾಸ ಸಲಹಾ ಸಮಿತಿ ಸದಸ್ಯರು ಮಕ್ಕಳ ತಾಯಂದಿರು, ಪಾಲಕ ಪೋಷಕರು ಹಾಜರಾಗಿದ್ದರು. ಅಂಗನವಾಡಿ ಶಿಕ್ಷಕಿ ಗೀತಾ, ಮೇಲ್ವಿಚಾರಕರಾದ ಅನ್ನಪೂರ್ಣ ಮಕ್ಕಳಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯದ ಬಗ್ಗೆ ತಿಳಿಸಿದರು.