ಸುವರ್ಣವಾಹಿನಿ ಸುದ್ದಿ
ಕೊಟ್ಟೂರು,ಜ,೨೨: ಸುಮಾರು ವರ್ಷಗಳ ಹೋರಾಟದ ಫಲವಾಗಿ ಅಯೋದ್ಯಯಲ್ಲಿ ಶ್ರೀರಾಮ ಮಂದಿರ ದೇವಾಲಯ ಲೋಕಾರ್ಪಣಿ ನಿಮಿತ್ತ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆ ಬದಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು. ಇಂದು ಬ್ರಹ್ಮೀ ಮೂಹರ್ತದಲ್ಲಿ ಪಂಚಾಮೃತ ಆಭಿಷೇಕ,ಪುಷ್ಪ ಅಲಂಕಾರ ಪೂಜೆ ,ಹಾಗೂ ತೀರ್ಥ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಾಲಯದ ಆರ್ಚಕರು ಗುರುವಾರ ತಿಳಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು,ಮನ,ಧನ ಕೊಟ್ಟು ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಿ ಎಂದು ಪತ್ರೀಕೆ ಪ್ರಕಟಣೆಯಲ್ಲಿ ತಿಳಿಸಿದರು