ಸುವರ್ಣವಾಹಿನಿ ಸುದ್ದಿ
ಕಾರಟಗಿ. ಜ.೨೨: ಪಟ್ಟಣದ ಚಳ್ಳೂರ್ ಕ್ರಾಸ್ ಇರುವ ಅಂಬಿಗರ ಚೌಡಯ್ಯ ವೃತ್ತವನ್ನು ಲೋಕಾರ್ಪಣೆ ಮಾಡುವ ಮುಖಾಂತರ ಜಯಂತಿಯನ್ನು ಸಂಭ್ರಮದಿAದ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಸುರೇಶ್ ಮಾತನಾಡಿ, ಅಂಬಿಗರ ಚೌಡಯ್ಯ ೧೨ನೇ ಶತಮಾನದಲ್ಲಿ ಜೀವಿಸಿದ್ಧ ನಿಜಶರಣ ಹಾಗೂ ವಚನಕಾರರು, ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶೇಷ್ಟ ವ್ಯಕ್ತಿತ್ವ ಇವರದ್ದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭಿತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಶಿವರೆಡ್ಡಿ ನಾಯಕ್ ಮಾತನಾಡಿ ಡಂಬದವೈರಿ, ವೀರಗಣಾಚಾರಿ, ನಿಜದನಗಾರಿ, ಸಮಾಜದಲ್ಲಿ ಮೌಡ್ಯತೆಯ ವಿರುದ್ದ, ಅನಿಷ್ಠ ಪದ್ದತಿಗಳ ವಿರುದ್ದ,ಮೂಡನಂಬಿಕೆಗಳ ವಿರುದ್ಧ ನೇರವಾಗಿ ತಮ್ಮ ವಚನಾಮೃತದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಕಠೋರವಾಗಿ ನಿಷ್ಠೂರವಾಗಿ ತನ್ನ ಹೆಸರಿನಲ್ಲಿಯೇ ವಚನಗಳನ್ನು ಬರೆದ ಏಕೈಕ ನಿಜಶರಣ ಅಂದರೆ ಅದು ನಿಜಶರಣ ಅಂಬಿಗರ ಚೌಡಯ್ಯ ೧೨ ನೇ ಶತಮಾನದಲ್ಲಿ ಬಸವಣ್ಣನವರ ಅನುಭಾವ ಮಂಟಪದಲ್ಲಿ ಶರಣರಲ್ಲಿ ಇವರು ಕೂಡ ಒಬ್ಬರಾಗಿ ಸಮನ್ವಯತೆ, ಸಹಬಾಳ್ವೆ, ಸಮಾನತೆ, ವಿಷಯವಾಗಿ ನೇರವಾಗಿ ಪ್ರತಿಪಾದಿಸುತ್ತಿದ್ದರು. ಇಂತಹ ಒಬ್ಬ ನಾಡಿನಶ್ರೇಷ್ಠ ದಾರ್ಶನಿಕನ ೯೦೪ನೇ ಜಯಂತಿಯನ್ನು ಇಂದು ನಾವು ಆಚರಿಸಲಾಯಿತು ಈ ಶರಣರ ಸಂಸೃತಿಯನ್ನು ಉಳಿಸೋಣಾ ಮತ್ತು ಬೆಳೆಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷರಾದ ಚಿಕ್ಕ ಅಯ್ಯಪ್ಪ ಸಂಗಟಿ, ಗೌರವ ಅಧ್ಯಕ್ಷರಾದ ಹನುಮಂತಪ್ಪ ಸಿಂಗಾಪುರ್, ಗುರುಪೀಠದ ನಿರ್ದೇಶಕರಾದ ತಾಯಪ್ಪ ಕೋಟ್ಯಾಳ, ಮುಖಂಡರಾದ ಬಿಲ್ಗಾರ್ ನಾಗರಾಜ್, ಗಿರಿಯಪ್ಪ ಬೂದಿ, ಶರಣೇಶ್ ಸಾಲೋಣಿ, ಶರಣಪ್ಪ ದಿವಟರ್, ಗದ್ಯಪ್ಪ ನಾಯಕ್, ಯಮನಪ್ಪ ಮೂಲೆಮನೆ, ರಾಮಣ್ಣ ಬಡಿಗೇರ್, ನಿಂಗಪ್ಪ ಗಿಣಿವಾರ, ತಿಪ್ಪಣ್ಣ ಮೂಲೆ ಮನೆ, ಮೌನೇಶ್ ದಡೆಸುಗೂರು, ಧನಂಜಯ ಹರೀಶ್ ಎಲ್ಲಿಗೆರ್, ಚನ್ನಬಸಪ್ಪ ಸುಂಕದ್, ರಮೇಶ್ ನಾಡಿಗೆರ್, ಶ್ರೀಹರಿ ಈಡಿಗೇರ್, ಅಯ್ಯಪ್ಪ ಬಂಡಿ, ಕಾರಟಗಿ ಪೊಲೀಸ್ ಎ ಎಸ್ ಐ ಬೋರಣ್ಣ, ಶಿವರಾಮಪ್ಪ ಮುಸ್ಟೂರು, ಫಕೀರಣ್ಣ ರಾಮಸಾಗರ್, ಬಸಪ್ಪ, ಗಣೇಶಪ್ಪ, ದೊಡ್ಡತಾಯಪ್ಪ, ವೀರೇಶ್ ಮೂಲೆಮನೆ, ಮಾರುತಿ, ಮಂಜುನಾಥ್ ಗಜ, ಹನುಮಂತಪ್ಪ ನಾಯಕ್, ಗೌಡ ಬಡಿಗೇರ್, ವೀರೇಶ್ ಸೂರುಗುಪ,ನರಸಪ್ಪ ಸಿಂಗಾಪುರ್ ರಾಮಣ್ಣ ಬಡಿಗೇರ್,ವೀರೇಶ್, ಮೃತ್ಯುಂಜಯ ಸಂಗಟಿ, ವೀರೇಶ್ ಬೇವಿನಾಳ ಇದ್ದರು.