ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೨: ನಗರದ ೨೪ ನೇ ವಾರ್ಡಿನ ವೀರಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನ ಬಳಿ ರಾಜ ಋಷಿ ಶ್ರೀ ಭಗೀರಥ ಮಹರ್ಷಿಗಳ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಪರಮ ಪೂಜ್ಯ ಶ್ರೀಗುರು ಬಸವರಾಜ ಗುರುಗಳು ಶ್ರೀ ನಿಜಾನಂದ ಯೋಗಾಶ್ರಮ ಮಲದಕಲ್ ರವರ ಸಾನಿದ್ಯದಲ್ಲಿ ಬೆಳ್ಳಿಗ್ಗೆ ೯-೦೫ರಿಂದ ಸ್ವಸ್ತಿ ಪುಣ್ಯಹಾ ವಾಚನೆ. ಶ್ರೀ ಗಣ ಹೋಮಾ. ಪ್ರತಿಷ್ಠಾ ಹೋಮಾ, ನವಕ ಪ್ರಧಾನ ಕಳಸಾ ಪೂಜೆ. ೧೧-೩೦ಕ್ಕೆ ಪೂರ್ಣಾಹುತಿ, ೧೨-೨೦ಕ್ಕೆ ಮೇಷ ಲಗ್ನ ಶುಭ ಮುರ್ಹೂತದಲ್ಲಿ ಶ್ರೀ ಭಗೀರಥ ಮಹರ್ಷಿ ಬಿಂಬ ಪ್ರತಿಷ್ಠೆ ಹಾಗೂ ಪ್ರಾಣ ಪ್ರತಿಷ್ಠೆ. ೧೨.-೩೦ಕ್ಕೆ ಕಳಶಾಭಿಷೇಕ, ೧೨-೪೫ಕ್ಕೆ ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಿತು. ಬೆಳಿಗ್ಗೆ ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದಿಂದ ಕಪ್ಪಗಲ್ ರಸ್ತೆ ವೀರಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನದವರೆಗೆ ಶ್ರೀ ಭಗೀರಥ ಮಹರ್ಷಿ ಹಾಗೂ ಶ್ರೀರಾಮಚಂದ್ರರ ಭಾವಚಿತ್ರದೊಂದಿಗೆ ಡೊಳ್ಳು, ಮೇಳ, ಕುಂಭ ಕಳಸ, ವಾಧ್ಯ ವೃಂದಗಳ ಮೂಲಕ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ನಂತರ ವೇದಿಕೆ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ವಹಿಸಿದ್ದ ಸಮುದಾಯದ ಶ್ರೀಗಳು,ಮಾಜಿ ಸಚಿವ ಶ್ರೀರಾಮುಲು, ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಸೇರಿದಂತೆ ಸಮುದಾಯದ ಹಿರಿಯರು ವೇದಿಕೆ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಮಾಜಿ ಸಚಿವ ಬಿ ಶ್ರೀರಾಮುಲು. ಮಾತನಾಡಿ,೫೦೦ ವರ್ಷಗಳ ಹೋರಾಟದ ಪರಿಶ್ರಮದಿಂದ ಇಂದು ಅಯೋಧ್ಯೆಯಲ್ಲಿ ರಾಜಕೀಯವಾಗಿ ಕಾನೂನಾತ್ಮಕವಾಗಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತದೆ ಅಲ್ಲಿ ರಾಮಮಂದಿರ ಉದ್ಘಾಟನೆ ಇಲ್ಲಿ ಶ್ರೀ ಭಗೀರಥ ಮಹರ್ಷಿಗಳ ಶಿಲಾಮೂರ್ತಿ ಸ್ಥಾಪನೆ ಆಗುತ್ತಿರುವುದು ಸಂತಸವನ್ನುAಟು ಮಾಡಿದೆ ಹಾಗೂ ನನ್ನ ಮತ್ತು ಉಪ್ಪಾರ ಸಮಾಜದ ಬಂಧುಗಳ ಅವಿನಾಭವ ಸಂಬAಧ ಮೂವತ್ತು ವರ್ಷಗಳಿಂದ ಇದೆ ಉಪ್ಪಾರ ಸಮುದಾಯ ಬಂಧುಗಳ ಹಿಂದೆ ಯಾವಾಗಲೂ ನಾನು ಇರುತ್ತೇನೆ ಅದೇ ರೀತಿಯಾಗಿ ಭಗೀರಥ ಸಮುದಾಯದವರು ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸಿ ಸಾಧನೆ ಮಾಡುವಲ್ಲಿ ಶ್ರಮಿಸಬೇಕು ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಮಾತನಾಡಿ, ರಾಮ ದೇವರ ಸ್ವರೂಪಿ ಎಂದು ರಾಮಾಯಣದಲ್ಲಿ ತೋರಿಸಿಕೊಂಡಿಲ್ಲ, ರಾಮ ಬ್ರಹ್ಮನ ಹತ್ತಿರ ವರಪಡೆದು ರಾವಣನನ್ನು ಸಂಹಾರ ಮಾಡಿರುತ್ತಾನೆ,ರಾಮಾಯಣದಲ್ಲಿ ೭ ಖಾಂಡಗಳಿದ್ದವೆ ೬೦೦ ಸರ್ಕಗಳಿದ್ದವೆ,೨೪ ಸಾವಿರ ಶ್ಲೋಕಗಳಿದ್ದವೆ, ಮೊದಲನೇ ಮತ್ತು ಎರಡನೇ ಶ್ಲೋಕದಲ್ಲಿ ರಾವಣನ ಸಾವು ಮನುಷ್ಯನಿಂದ ಬಿಟ್ಟರೆ ಬೇರೆ ಯಾರಿಂದ ಸಾಧ್ಯವಿಲ್ಲವೆಂದು ರಾವಣ ವರವನ್ನು ಪಡೆದಿರುತ್ತಾನೆ, ರಾಮ ಮಾನವನಾಗಿ ಹುಟ್ಟಿದ ಮೇಲೆ ಬ್ರಹ್ಮನ ವರದಿಂದ ರಾವಣನ ಸಂಹಾರ ಮಾಡಿರುತ್ತಾನೆ ಎಂದರು.
ಹಾಗಂತ ನಾವು ರಾಮನ ಭಕ್ತರು ಅಲ್ಲ ಅಂತ ಏನೂ ಇಲ್ಲ. ನಾವು ಕೂಡ ಪರಮರಾಮ ಭಕ್ತರೇ ಎಂದರು.ನಾನು ಪ್ರತಿ ದಿನ ಮಲಗುವ ಮುಂಚೆ ೧೦ ನಿಮಿಷವಾದರೂ ರಾಮಾಯಣ ಮಹಾಭಾರತವನ್ನು ಓದುತ್ತೇನೆ,
ಭಾರತದಲ್ಲಿ ಪ್ರೇತಾಯುಗಕ್ಕಿಂತ ಮೊದಲು ನೆಲೆ ಊರಿದ ಸಮುದಾಯ ಯಾವುದಾದರು ಇದ್ದರೆ ಅದು ಉಪ್ಪಾರ ಭಗೀರಥ ಸಮುದಾಯ, ಈ ಸಮುದಾಯ ರಾಜಕೀಯವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯ. ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದ ಏಳಿಗೆಗೆ ಶ್ರಮಿಸಿ ಎಂದರು. ಉಪ್ಪಾರ ಸಮಾಜದ ಧರ್ಮ ಗುರುಗಳಾದ ಬಸವರಾಜ್ ಸ್ವಾಮಿ ಮಾತನಾಡಿ ನಮ್ಮ ಸಮಾಜದ ಹಿರಿಯ ಧರ್ಮ ಗುರುಗಳಾದ ಡಾಕ್ಟರ್ ಪುರುಷೋತ್ತಮಾನಂದಪುರಿ ಮಹಾಸ್ವಾಮಿಜಿಯವರು. ಇಂದು ಶ್ರೀರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆಗೆ ಹೋಗಿದ್ದಾರೆ. ಬರುವುದಕ್ಕೆ ಆಗಿಲ್ಲ ಆದರಿಂದ ಅವರ ಅನುಮತಿ ಮೇರೆಗೆ, ಇಂದು ಭಗೀರಥ ಮಹಾ ಸ್ವಾಮೀಜಿಗಳ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಸಿದ್ದೇವೆ ಕರ್ನಾಟಕದಲ್ಲಿ, ನಮ್ಮ ಸಮುದಾಯದ ಭಗಿರಥ ಮಹಾಸ್ವಾಮೀಜಿಗಳ ವಿಗ್ರಹ ಎಲ್ಲೂ ಇಲ್ಲ. ಇವತ್ತು ನಮ್ಮ ಬಂಧುಗಳು. ೧೦ ಅಡಿ ವಿಗ್ರಹ ಪ್ರತಿಷ್ಠಾಪನೆ ಬಳ್ಳಾರಿಯಲ್ಲಿ ಮಾಡಿದ್ದಕ್ಕೆ. ನಮ್ಮ ಸಮುದಾಯದ ಜನರಲ್ಲಿ ಸಂತೋಷ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ. ನಾವೆಲ್ಲಾ ಒಗ್ಗಟ್ಟಿನಿಂದ ನಮ್ಮ ಸಮುದಾಯವನ್ನು ಬೆಳೆಸೋಣ ಎಂದರು.
ಕಾರ್ಯಕ್ರಮದಲ್ಲಿ ನಗರ ಶಾಸಕ ನಾರ ಭರತ್ ರೆಡ್ಡಿ ,ಮೆರವಣಿಗೆಯಲ್ಲಿ ಭಾಗವಹಿಸಿದರು, ಮಹಾನಗರ ಪಾಲಿಕೆಯ ಮಹಾ ಪೌರರಾದ ಬಿ ಶ್ವೇತ ಸೋಮು, ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕೋಬ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೊತ್ಕಾರ್ ಹನುಮಂತಪ್ಪ ಗುಡಿಗಂಟಿ ಹನುಮಂತಪ್ಪ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷರಾದ ,ಹನುಮೇಶ ಉಪ್ಪಾರ್, ಕಾರ್ಯದ್ಯಕ್ಷರಾದ ಯರಿಸ್ವಾಮಿ ಕೊಳಗಲ್ಲು , ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗೇಶ್ ಉಪ್ಪಾರ, ಕೂರಿಗನೂರು ಗಾಧಿಲಿಂಗಪ್ಪ, ಸಿದ್ದೇಶ ಊಳುರು, ಸಂಗನಕಲ್ಲು ಕೃಷ್ಣ, ವೀರೇಶ, ವೆಂಕಟೇಶ, ಶ್ರೀರಾಮುಲು,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.