ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೨: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆ ನಗರದ ಕೆಸಿ ರಸ್ತೆಯ, ಹೊನ್ನುರಪ್ಪ ಕಾಂಪ್ಲೆಕ್ಸ್ ಬಳಿ ದ್ವಿಚಕ್ರ ವಾಹನ ವ್ಯಾಪಾರಸ್ಥರ ಅಸೋಸಿಯೇಶನ್ ಆಶ್ರಯದಲ್ಲಿ
ಸೋಮವಾರ ಶ್ರೀರಾಮ ಭಕ್ತರಿಗೆ, ಸರ್ವಜನಿಕರಿಗೆ, ವಾಹನ ಸವಾರರಿಗೆ ಲಡ್ಡು ಪ್ರಸಾದ ವಿತರಿಸಿ ಭಕ್ತಿ ಸರ್ಪಿಸಿದರು.
ಮುಖ್ಯ ರಸ್ತೆ ಜನಜಂಗುಳಿ ಪ್ರದೇಶವಾದ ಹಿನ್ನೆಲೆಯಲ್ಲಿ ಶ್ರೀರಾಮ ಭಕ್ತರು, ರಸ್ತೆ ಬದಿ ನಿಂತು ವಾಹನ ಸವಾರರಿಗೆ ಲಡ್ಡು ಪ್ರಸಾದ್ ವಿತರಿಸಿ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ರಸ್ತೆ ಬದಿ ನಿಂತು ಸಾವಿರಾರು ಜನರಿಗೆ ಲಡ್ಡುಗಳನ್ನು ವಿತರಿಸಿ ಶ್ರೀರಾಮನ ಸೇವೆ ಮಾಡಿ ಗಮನಸೆಳೆದರು.
ಈ ಸಂರ್ಭದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಸಾಯಿ ಬಾಲಾಜಿ, ಉಪಾಧ್ಯಕ್ಷ ನರ್ಮಲ್ ಕುಮಾರ್, ಜಿತೇಂದ್ರ ಕುಮಾರ್, ಅಜಿತ್ ಕುಮಾರ್, ರೂಪೇಶ್ ಸೇರಿದಂತೆ ಇತರರು ಇದ್ದರು.