ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೩: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಇಂದು ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು ಸಂಘದ ಪದಾಧಿಕಾರಿಗಳೊಂದಿಗೆ ಬಳ್ಳಾರಿ ನಗರದ ಮೀನಾಕ್ಷಿ ವೃತ್ತ, ರಾಯಲ್ ವೃತ್ತ, ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಹತ್ತಿರ, ಮೋತಿ ವೃತ್ತ ಸೇರಿದಂತೆ ವಿವಿಧ ಕಡೆ ಇರುವ ನಿರ್ಗತಿಕರಿಗೆ ಪೊಟ್ಟಣಗಳನ್ನು ಹಾಗೂ ಪ್ರಾಣಿಗಳಿಗೆ ಅನ್ನದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧ್ರುವ ಸರ್ಜಾ ಅವರ ಅಭಿಮಾನಿ ಎಂ.ಜಿ ಕನಕ ಅವರು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿ ನೀಡಲೆಂದು ಭಗವಾನ್ ಶ್ರೀರಾಮ್ನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ರಿಯಾಜ್, ನಗರಾಧ್ಯಕ್ಷರಾದ ಉಮಾರ್ ಫಾರೂಕ್, ಪದಾಧಿಕಾರಿಗಳಾದ ವೈ.ಅರುಣ್ ಕುಮಾರ್, ಸಿ.ತಿಪ್ಪೆರುದ್ರ, ಯೋಗೇಶ್ ಕುಮಾರ್, ಮೋಕ ಷಾಷ, ರಫೀಕ್, ವಿ.ಎಚ್, ಎ.ಕೆ ಗಾದಿಲಿಂಗಪ್ಪ, ಸೇರಿದಂತೆ ಧ್ರುವ ಸರ್ಜಾ ಅವರು ಅಭಿಮಾನಿಗಳು ಉಪಸ್ಥಿತರಿದ್ದರು.