ಸುವರ್ಣವಾಹಿನಿ ಸುದ್ದಿ
ಕೊಟ್ಟೂರು,ಜ,೨೩: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಕೊಟ್ಟೂರು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಕೇಸರಿ ಬಣ್ಣದ ತೋರಣಗಳಿಂದ ಇಡೀ ವಠಾರವೇ ಅಲಂಕಾರ ಗೊಂಡಿತ್ತು.
ಹಿAದು ಕಾರ್ಯಕರ್ತರು ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಹಸಿರು ತೋರಣ ಕಟ್ಟಿ , ದೇವಸ್ಥಾನದ ಆವರಣದಲ್ಲಿ ಶ್ರೀರಾಮ ಪೋಟೋ ಇಟ್ಟು ಪೂಜೆ ನಡೆಸಿ ಎಲ್ಲಾ ಭಕ್ತರಿಗೆ ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನವಾದ ಇಂದು ಕೊಟ್ಟೂರು ಪಟ್ಟಣದ ವಿವಿಧ ದೇವಸ್ಥಾನ ಹಾಗೂ ಮುಖ್ಯ ಸರ್ಕಲ್ ಬಳಿ ಪೊಲೀಸ್ ಇಲಾಖೆಯಿಂದ ಭದ್ರತೆ ನಿಯೋಜನೆಗೊಳಿಸಿದ್ದು ಕಂಡುಬAದಿತ್ತು
ಕೊಟ್ಟೂರು ಪಟ್ಟಣದ ಶ್ರೀ ವೀರಾಗ್ನಿಅಂಜೀನೇಯ, ತೇರುಬಯಲು ಅಂಜೀನೇಯ, ಕನ್ನಿಕಾ ಪರಮೇಶ್ವರ ದೇವಸ್ಥಾನ, ಶ್ರೀ ಅಂಜನೇಯಾ ಬಡಾವಣೆಯಲ್ಲಿರುವ ಅಂಜೀನೇಯ ಸ್ವಾಮಿ ದೇವಸ್ಥಾನ ಕೋಟೆ ಬಸವೇಶ್ವರ ದೇವಸ್ಥಾನದ ಯುವಕರು ಹಾಗೂ ಹಿಂದೂ ಕಾರ್ಯಕರ್ತರು ಅಪಾರ ಭಕ್ತಾದಿಗಳು ಶ್ರೀರಾಮನಿಗೆ ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿದರು.
ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನಕ್ಕೆ ೨ ದಿನಗಳಿಂದ ಹಿಂದೂ ಕಾರ್ಯಕರ್ತರಾದ ಹಳ್ಳಿ ಸಿದ್ದೇಶ್, ಬಣಕಾರ ಸಿದ್ದೇಶ್, ಪ್ರದೀಪ್ ಎಂ. ಸಿದ್ದೇಶ್ ಸಿ. ದರ್ಶನ್ ಪಿ.ಎಂ. ಮಂಜುನಾಥ ಎನ್.ಸಿ. ವೀರಭದ್ರಿ ಎಂ. ವಿನಯ್ ಹಂಪಳ್ಳಿ, ಕಾರ್ತಿಕ್ ಆರ್. ಎಂ. ಕೊಟ್ರೇಶ್ ಕೆ. ಅವಿನಾಶ್ ಎಲಿಗಾರ್ ಉಪಸ್ಥಿತರಿದ್ದರು