ಸುವರ್ಣವಾಹಿನಿ ಸುದ್ದಿ
ಸಿರಗುಪ್ಪ,ಜ,೨೩: ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಮುಖ್ಯ ಕಚೇರಿಯಲ್ಲಿ ಶ್ರೀರಾಮ ಜನ್ಮಭೂಮಿ ಅಯೋಧ್ಯ ದಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ಸೀತಾ ಶ್ರೀ ರಾಮನ ಭಾವಚಿತ್ರವನ್ನು ಇರಿಸಿ ದೀಪ ಬೆಳಗಿಸಿ ಪೂಜೆ ಸಲ್ಲಿಸಲಾಯಿತು. ನಂತರ ಮಾತನಾಡಿದ ತಾಲೂಕು ಯೋಜನಾಧಿಕಾರಿಗಳು ಸುಧೀರ್ ಹಂಗಳೂರ್ ಶ್ರೀ ರಾಮ್ ಚಂದ್ರ ಪ್ರಭುಗಳ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಬೇಕು ರಾಮ ಲಕ್ಷ್ಮಣರಂತೆ ಸಹೋದರತ್ವದಿಂದಾ ಜೀವನ ಸಾಗಿಸಲು ಆದರ್ಶಮಯ ಬದುಕು ನಮ್ಮ ನಿಮ್ಮೆಲ್ಲರದು ಆಗಿರಲಿ ಎಂದು ಶುಭಹಾರೈಸಿ ನಮ್ಮೆಲ್ಲರ ಪರವಾಗಿ ಪರಮಪೂಜ್ಯ ಡಾ” ವೀರೇಂದ್ರ ಹೆಗ್ಗಡೆ ರವರು ಅಯೋಧ್ಯ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಂತೋಷವನ್ನು ಉಂಟು ಮಾಡಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಕೊಪ್ಪಳ ವಿಭಾಗದ ಯೋಜನಾಧಿಕಾರಿಗಳಾದ ನಾಗೇಶ್, ಕಚೇರಿಯ ಹಣಕಾಸು ಪ್ರಬಂಧಕರಾದ ಲಕ್ಷ್ಮಿ, ಆಡಳಿತ ಸಹಾಯಕ ಪ್ರಬಂಧಕರಾದ ಸುಜಾತ,ಹಾಗೂ ಯೋಜನಾ ಕಚೇರಿ ಸಿಬ್ಬಂದಿ ವರ್ಗದವರು ಉಪಸಿತರಿದ್ದರು.