ಸುವರ್ಣವಾಹಿನಿ ಸುದ್ದಿ
ಸಿರುಗುಪ್ಪ,ಜ,೨೩: ತಾಲೂಕಿನ ಮಿಟ್ಟೇಸೂಗುರು ಗ್ರಾಮದಲ್ಲಿ ಉತ್ತರ ಪ್ರದೇಶ ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನ ಸಮಾರಂಭ ಅಂಗವಾಗಿ ಮಿಟ್ಟೇಸೂಗುರು ಗ್ರಾಮದಲ್ಲಿ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನೆ ,ದೀಪೋತ್ಸವ ,ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಲ್ಲ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗವಹಿಸಿ ಸಂಭ್ರಮ ಆಚರಿಸಿದರು.
ಇದೇ ವೇಳೆಯಲ್ಲಿ ಗ್ರಾಮಸ್ಥರು ಮನೆಗಳಲ್ಲಿ ವಿಶೇಷ ಪೂಜೆ, ದೀಪಗಳು ಹಚ್ಚುವ ಮೂಲಕ ಶ್ರೀ ರಾಮಲಾಲ್ಲ ಪ್ರಾಣ ಪ್ರತಿಷ್ಠಾಪನೆ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಕ್ರಿಷ್ಣಮ್ಮ, ವಿಶ್ವಹಿಂದು ಪರಿಷತ್ತಿನ ಹಿರಿಯರಾದ ಕೆ.ವೆಂಕಟರೆಡ್ಡಿ, ಅಖಿಲ ಭಾರತೀಯ ಸಂತ ಸಮಿತಿ ಬಳ್ಳಾರಿ ಜಿಲ್ಲಾ ಸಂಯೋಜಕರಾದ ಕುಮಾರ್ ನಾಯಕ್, ದೇವಸ್ಥಾನದ ಅರ್ಚಕರಾದ ಶ್ರೀ ಕೃಷ್ಣ, ಶೇಖರಯ್ಯ ಸ್ವಾಮಿ, ಮಲ್ಲಿ ಸ್ವಾಮಿ,ಹಾಗೂ ಗ್ರಾಮಸ್ಥರಾದ ಕೋಸ್ಗಿ ಮಾರೇಪ್ಪ, ಶಿವಮೂರ್ತಿ, ಖಿ.ವಿಜಯ ಕುಮಾರ್, ಖಿ ನಾಗರಾಜ, ಅಂಗಡಿ ಮಹಾದೇವ, ಶ್ರೀನಿವಾಸ, ಜಡೇಸ್, ಗ್ರಾಮಸ್ಥರು ಉಪಸ್ಥಿತರಿದ್ದರು..