ಸುವರ್ಣವಾಹಿನಿ ಸುದ್ದಿ
ಕಾರಟಗಿ. ಜ.೨4. ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ, ಜಿಲ್ಲಾಧ್ಯಕ್ಷರಾದ ಜಮದಗ್ನಿ ಚೌಡಕಿ ,ತಾಲೂಕು ಅಧ್ಯಕ್ಷರಾದ ಹುಲಿಗೇಶ್ ಬುಕ್ನಟ್ಟಿ ಹಾಗೂ ಇತರೆ ಎಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಮೂಲಭೂತ ಸೌಲಭ್ಯಗಳಾದ ಪಾರಂ ನಂಬರ್ -೩, ಮ್ಯುಟೇಶನ್ ,ನಿವೇಶನ, ಮನೆಗಳ ಮಂಜೂರಾತಿಗಾಗಿ ಹಾಗೂ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಮನೆಗಳ, ನಿವೇಶನಗಳ ಹಕ್ಕು ಪತ್ರಗಳ ವಿತರಣೆಗಾಗಿ ಇನ್ನಿತರ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಕಾರಟಗಿಯ ಪುರಸಭೆ ಹಾಗೂ ತಹಸಿಲ್ದಾರರ ಕಚೇರಿಗೆ ಬೃಹತ್ ಪ್ರತಿಭಟನೆ ಮೂಲಕ ಮನವಿಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೌನೇಶ್ ಭಗಜರಂಗಿ ಜಿಲ್ಲಾ ಉಪಾಧ್ಯಕ್ಷರು ಗಂಗಾವತಿ ತಾಲೂಕ್ ಅಧ್ಯಕ್ಷರಾದ ಸುಮಿತ್ರ ಕುಮಾರ್ ಗೌರವಾಧ್ಯಕ್ಷರಾದ ನೀಲಪ್ಪ ಡಣಾಪುರ್, ಮರಳಿ ಹೋಬಳಿ ಘಟಕದ ಅಧ್ಯಕ್ಷರಾದ ಮರಿಸ್ವಾಮಿ , ದೇವದಾಸ್ ,ಲಕ್ಷ್ಮಣ ಹೆಬ್ಬಾಳ ,ಗಾಳೇಶ್ ,ಪರಶುರಾಮ್, ತಿಮ್ಮಣ್ಣ ಗುಂಡೂರ್, ಮಹಬೂಬ್ ಸಾಬ್, ತಾಯಪ್ಪ, ದ್ಯಾವಣ್ಣ ,ಮಾರುತಿಹುಲಿಕಾಳ್ ,
ಗಾದಿಲಿಂಗಪ್ಪ ,ಯಮನೂರಪ್ಪ ,ಇನ್ನಿತರ ಅನೇಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಂಪಾಪತಿ ಸಿದ್ದಾಪುರ, ವೆಂಕೋಬ ಮೈಲಾಪುರ್ ದುರ್ಗೇಶ್ ,ಲಕ್ಷ್ಮಣ ಮರ್ಲಾನಹಳ್ಳಿ, ಗೋಪಾಲ್, ಆದಮ್, ಮೋಷ, ಸ್ವಾಮಿ ,ಕೆಂಚಪ್ಪ ,ಮಲ್ಲೇಶ್ ,ಹನುಮಂತ, ಸವಾರಪ್ಪ, ಅಭಿಷೇಕ ,ಲಕ್ಷ್ಮಣ ಇನ್ನು ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.