ಸುವರ್ಣವಾಹಿನಿ ಸುದ್ದಿ
ಬಳ್ಳಾರಿ:ಜ ೨೪ ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿದಂತ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡು ಉಗ್ರ ಕಠಿಣ ಶಿಕ್ಷೆ ವಿಧಿಸಿ ಹಾಗೂ ಗಡಿಪಾರು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಸುರೇಶ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಭಾರತರತ್ನ ವಿಶ್ವಜ್ಞಾನಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಕೆಲವು ರಾಜ್ಯದ್ರೋಹಿಗಳು ವ್ಯವಸ್ಥಿತವಾಗಿ ಪೂರ್ವ ಸಿದ್ಧತೆಯಿಂದ ಹಾಗೂ ಉದ್ದೇಶಪೂರ್ವಕವಾಗಿ ಪ್ರತಿಮೆಗೆ ಅವಮಾನ ಮಾಡಿದ್ದಾರೆ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಗಲಿರುಳು ಶ್ರಮವಹಿಸಿ ತಮ್ಮ ಜೀವನವನ್ನೇ ಸಂವಿಧಾನವನ್ನು ಬರೆಯಲಿಕ್ಕೆ ಮುಡುಪಾಗಿಟ್ಟು ಪ್ರಪಂಚವೇ ಮೆಚ್ಚುವಂತ ಅತೀ ಶ್ರೇಷ್ಠವಾದ ಸಂವಿಧಾನವನ್ನೇ ಭಾರತ ದೇಶಕ್ಕೆ ಬರೆದು ಕೊಟ್ಟಿದ್ದರಿಂದ ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನ ತಜ್ಞರು ಮೆಚ್ಚಿಕೊಂಡಿದ್ದರಿAದ ಡಾ ಬಾಬಾಸಾಹೇಬ ಅಂಬೇಡ್ಕರ್ ಬರೆದಿದ್ದರಿಂದ ಭಾರತದ ದೇಶದಲ್ಲಿರುವಂತ ಎಲ್ಲಾ ಧರ್ಮದ ಜಾತಿಯ ಜನಾಂಗದವರು ನೆಮ್ಮದಿಯಾಗಿ ಜೀವನವನ್ನು ಸಾಗಿಸುವಲಿಕ್ಕೆ ಕಾರಣರಾಗಿದ್ದು,ಇಂತಹ ಮಹಾ ನಾಯಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಅವಮಾನ ಮಾಡಿದ್ದನ್ನು ನೋಡಿದರೆ ಸಂವಿಧಾನ ತಜ್ಞರು ಬುದ್ಧಿಜೀವಿಗಳು ಪ್ರಗತಿಪರ ಚಿಂತಕರು,ತಲೆತಗ್ಗಿಸುವAತಹ ವಿಷಯವಾಗಿದೆ ಆದುದರಿಂದ ರಾಜ್ಯದ್ರೋಹಿ ದುಷ್ಕರ್ಮಿ ಆರೋಪಿಗಳ ಮೇಲೆ ರಾಜ್ಯದ್ರೋಹಿ ಪ್ರಕರಣವನ್ನು ದಾಖಲಿಸಿಕೊಂಡು, ಪತ್ತೆ ಹಚ್ಚಿ ಅವರ ಮೇಲೆ ಉಗ್ರ ಕಠಿಣ ಶಿಕ್ಷೆಯನ್ನು ವಿಧಿಸಿ ಹಾಗೂ ಅವರ ಆಸ್ತಿ ಪಾಸ್ತಿಯನ್ನು ಸರ್ಕಾರ ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ
ನಾಗೇಶ್,ನಾಗರಾಜ್,ಮಲ್ಲಿಕಾರ್ಜುನ,ಈಶಪ್ಪ,ಎಚ್ ವೀರೇಶ್,ಜಯ ದುರ್ಗೇಶ್,ಮರೇಶ್,ತಿಪ್ಪೆರುದ್ರ,ರವಿ ಕುಮಾರ ಸೇರಿದಂತೆ ಇನ್ನಿತರರಿದ್ದರು.