ಸುವರ್ಣವಾಹಿನಿ ಸುದ್ದಿ
ಸಿರುಗುಪ್ಪ,ಜ,೨೪: ತಾಲೂಕಿನ ರಾರಾವಿ ಗ್ರಾಮದ ರಾರಾವಿ ವಲಯ ಕ್ಷೇತ್ರದಲ್ಲಿ ಐತಿಹಾಸಿಕ ಶ್ರೀ ಹುತ್ತಿನ ಯಲ್ಲಮ್ಮ ದೇವಿಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ವತಿಯಿಂದ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಅವರು ದೇವಸ್ಥಾನದ ಕಮಿಟಿ ಅಧ್ಯಕ್ಷ ಅವರಿಗೆ ಎರಡು ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು, ದೇವಸ್ಥಾನದ ಆಡಳಿತ ಸದಸ್ಯರಾದ ಸೋಮಯ್ಯ,ಬಸವನಗೌಡ,ವೆಂಕಟೇಶ್, ವಲಯ ಮೇಲ್ವಿಚಾರಕಿ ವನಿತಾ ಅಂಗಡಿ,ಹಾಗೂ ಸೇವಾಪ್ರತಿನಿಧಿಗಳು ಹಾಜರಿದ್ದರು.