ಸುವರ್ಣವಾಹಿನಿ ಸುದ್ದಿ
ಕೊಟ್ಟೂರು,ಜ,೨೪: ಪಟ್ಟಣದ ಮಧ್ಯ ಭಾಗದಲ್ಲಿರುವ ಕೌಲುಪೇಟೆಯ ಶ್ರೀ ಬನಶಂಕರಿ ದೇವಿಯ ನಾಲ್ಕನೇ ವರ್ಷದ ರಥೋತ್ಸವ ಬನದ ಹುಣ್ಣಿಮೆ ಗುರುವಾರ ಸಂಜೆ ೫ಘಂಟೆಗೆ ಧಾರ್ಮಿಕ ವಿಧಿವಿಧಾನಗಳಿಂದ ಅದ್ಬೂರಿಯಾಗಿ ರಥೋತ್ಸವ ಜರುಗುತ್ತದೆ.
೧೭ಅಡಿ ಎತ್ತರವಿದ್ದು .ಮೂರುವರಿ ಅಡಿ ಜಲ್ಲಿ , ಎರಡೂವರಿ ಅಡಿ ಕಳಸ ಸೇರಿದಂತೆ ೨೩ಅಡಿ ರಥ ಎತ್ತರವಿದ್ದು.ಸುಂದರವಾದ ಮರದ ಮೂರ್ತಿಗಳನ್ನು ಕೂರಿಸಲಾಗಿದೆ. ಅಸಂಖ್ಯಾತ ಭಕ್ತರ ಜಯಘೋಷ ದೊಂದಿಗೆ ಸಕಲವಾಧ್ಯ ಮೇಳದೊಂದಿಗೆ ರಥ ಜ.೨೫ರ ಸಂಜೆ ಶ್ರೀ ಬನಶಂಕರಿ ದೇವಸ್ಥಾನ ಹೊರವಲಯದಿಂದ ರೇಣುಕಾ ದೇವಸ್ಥಾನದ ತನಕ ಸಾಗಿ ಪುನಃ ಶ್ರೀ ಬನಶಂಕರಿ ದೇವಾಲಯಕ್ಕೆ ಮರಳಿ ನೆಲೆ ನಿಲ್ಲಲಿದೆ.ರಥೋತ್ಸವ ನಿಮಿತ್ತ ಜ ೨೫ರಿಂದ ಪಟ್ಟಣದ ಕೌಲುಪೇಟೆಯ ಶ್ರೀ ಬನಶಂಕರಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಬನಶಂಕರಿ ದೇವಿಯ ಕೃಪೆಗೆ ಪಾತ್ರರಾಗಿ ಎಂದು ಶ್ರೀ ಬನಶಂಕರಿ ದೇವಸ್ಥಾನ ಸಮಿತಿ ಹಾಗೂ ದೈವದವರು ಪತ್ರಿಕೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.