ಸುವರ್ಣವಾಹಿನಿ ಸುದ್ದಿ
ಕೊಟ್ಟೂರು,ಜ,೨೪: ಪಟ್ಟಣದ ಅಂಗನವಾಡಿ ಎಲ್ ಕೇಂದ್ರದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಗಿಡಕ್ಕೆ ನೀರು ಹಾಕುವ ಮೂಲಕ ಆಚರಿಸಲಾಯಿತು.
ಹೆಣ್ಣು ಮಕ್ಕಳನ್ನು ಎಲ್ಲರೂ ಗೌರವದಿಂದ ಕಾಣಬೇಕು, ಗೌರವಿಸಬೇಕು. ಹೆಣ್ಣು ಮಕ್ಕಳು ಮನೆಗೆ ನಂದಾ ದೀಪವಿದ್ದಂತೆ ಎಲ್ಲಾ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು , ನಿರಂತರ ಓದಬೇಕು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೇಟಿ ಬಚಾವ್ ಭೇಟಿ ಪಡಾವ್ ಯೊಜನೆಯು ೨೦೧೫ ಜಾರಿಗೆ ಬಂದಿದೆ ಇದರ ಪ್ರಯೋಜನೆಯನ್ನು ಹೆಣ್ಣು ಮಕ್ಕಳು ಶಿಕ್ಷಣ ಇತರೆ ಸೌಲಭ್ಯಗಳನ್ನು ಪಡೆಯ ಬೇಕೇಂದು ಮಲ್ಲಪ್ಪ ಗುಡ್ಲಾನೂರ್ ಶಾಖಾ ಗ್ರಂಥಾಲಯ ಅಧಿಕಾರಿ ಮಾತನಾಡಿದರು .
ಶಿಕ್ಷಕಿ ಅಕ್ಕಮಹಾದೇವಿ. ಸಹಾಯಕಿ ಹನುಮಕ್ಕ. ರತ್ನಮ್ಮ ಮತ್ತು ಶಾಲಾ ಮಕ್ಕಳು ಇದ್ದರು.