ಕೊಟ್ಟೂರು ಜ.25. ಪಟ್ಟಣದ ಶ್ರೀ ಬನಶಂಕರಿ ದೇವಿಯ ದೇವಾಲಯದಲ್ಲಿ ಬನದ ಹುಣ್ಣಿಮೆಯಂದು ನಡೆಯುವ ರಥೋತ್ಸವ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿತು.ಶ್ರೀ ಬನಶಂಕರಿ ದೇವಿಗೆ ಅಭಿಷೇಕ, ಪುಷ್ಪಾರ್ಚನೆ, ಮಂಗಳಾರತಿ ಹಾಗೂ ವಿವಿಧ ಬಗೆಯ ಹೂವುಗಳಿಂದ ಅಲಂಕಾರವನ್ನು ಮಾಡಿ ಅರ್ಚಕರಾದ ಮೂಗಣ್ಣ ಭಕ್ತರಿಗೆ ದೇವಿಯ ತೀರ್ಥ ಆಶೀರ್ವಾದ ನೀಡಿದರು.ಭಕ್ತರು ನಸುಕಿನಿಂದ ಸರತಿ ಸಾಲಿನಲ್ಲಿ ನಿಂತು ನೋಡಿ,ಹೂ, ತೆಂಗಿನ ಕಾಯಿ, ಬಾಳೆಹಣ್ಣು, ಕರ್ಪೂರ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಬನಶಂಕರಿ ದೇವಿ ಆಶೀರ್ವಾದ ಪಡೆದರು.ನಂತರ ಧಾರ್ಮಿಕ ವಿಧಿವಿಧಾನಗಳಿಂದ ಇಂದು ಸಂಜೆ ಐದು ಗಂಟೆಗೆ ದೇವಿಯ ರಥೋತ್ಸವದಲ್ಲಿ ಶ್ರೀ ಬನಶಂಕರಿ ದೇವಿಯ ಮೂರ್ತಿಯನ್ನು ರಥದಲ್ಲಿ ಅರ್ ಎಂ ಕೊಟ್ರಯ್ಯ ಹಾಗೂ ಅರ್ಚಕರಾದ ಮೂಗಣ್ಣ ದೇವಿಯು ರಥ ಏರಿ ದೇವಿಗೆ ಪೂಜೆ ಸಲ್ಲಿಸಿದರು.ಸಂಜೆ ಐದು ಗಂಟೆ ಐದು ನಿಮಿಷಕ್ಕೆ
ರಥೋತ್ಸೂವಕ್ಕೆ ಚಾಲನೆ ನೀಡಿದರು. ಶ್ರೀ ಬನಶಂಕರಿ ದೇವಿಯ ಪಟಾಕ್ಪಿಯನ್ನು ಬಂಟನಳ್ಳಿ ಗುರುಬಸಪ್ಪ
ಐವತ್ತು ಒಂದು ಸಾವಿರ ರೂಪಾಯಿ ದಾಗಿಸಿಕೊಂಡರು. ನಂತರ ರಥ ಶ್ರೀ ಬನಶಂಕರಿ ದೇವಸ್ಥಾನ ಹೊರವಲಯದಿಂದ ವಿವಿಧ ಜಯಘೋಷ ದೊಂದಿಗೆ ಶ್ರೀ ರೇಣುಕಾ ದೇವಸ್ಥಾನ ತಲುಪಿ ದೇವಸ್ಥಾನ ತಲುಪಿ ನೆನೆ ನಿಂತು ಅಸಂಖ್ಯಾತ ಭಕ್ತರು ರಥವನ್ನು ಎಳೆಯುವ ಮೂಲಕ ನಾಲ್ಕನೇ ವರ್ಷದ ರಥೋತ್ಸವ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಬನಶಂಕರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೊಳ್ಳಿ ವೀರಭದ್ರಪ್ಪ, ಎಂ ಶಿವಣ್ಣ ಕಾರ್ಯದರ್ಶಿ, ಜಿ ಕೊಟ್ರೆಶಪ್ಪ, ಟಿ ಮಂಜುನಾಥ್, ಲಿಂಗಪ್ಪ,ಗುರುಬಸವರಾಜ್,ಮೈದೂರು ವಿಶ್ವನಾಥ್, ಮೈದೂರು ಕೊಟ್ರೆಶಪ್ಪ,ತಳಸ್ಥ ರಾಜಪ್ಪ, ಬಿಡ್ರಿ ಕಾಳಪ್ಪ ಇತರರು ಇದ್ದರು.