ಬಳ್ಳಾರಿ, ಜ.26: ಈ ವರ್ಷ ಬಳ್ಳಾರಿ ಜಿಲ್ಲೆಯ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಅಭಾವದಿಂದ ಬರಕಾಡಿದೆ. ಬೆಲಕೆ ನಷ್ಟಹೊಂದಿದೆ. ಇದಕ್ಜಾಗಿ ಫ್ರೂಟ್ ತಂತ್ರಾಂಶದಲ್ಲಿ 85 ನೋಂದಣಿ ಮಾಡಿಕೊಂಡದ್ದ ಜಿಲ್ಲೆಯ ಶೇ 85 ರಷ್ಟು ರೈತರ ಪೈಕಿ ಮೊದಲ ಹಂತವಾಗಿ 34294 ರೈತರಿಗೆ
ಪ್ರತಿ ಹೆಕ್ಟಾರ್ ಗೆ ಎರೆಡು ಸಾವಿರದಂತೆ 6 ಕೋಟಿ, 74 ಸಾವಿರದ 434 ರೂಗಳ ಪರಿಹಾರ ನೀಡಿದೆ. ಎರಡನೇ ಕಂತಿನಲ್ಲಿ ನೀಡುತ್ತಿದ್ದು ಒಟ್ಟಾರೆ ಜಿಲ್ಲೆಯ 50 ಸಾವಿರಕ್ಕೂ ರೈತರಿಗೆ ಬರ ಪರಹಾರವನ್ನು ರಾಜ್ಯ ಸರ್ಕಾರ ನೀಡಲಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಗಣರಾಜ್ಯೋತ್ಸವದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ರಾಜ್ಯ ಸರ್ಕಾರ ಬರ ಪರಿಹಾರ ನೀಡಿದೆ. ಆದರೆ ಈವರಗೆ ಕೇಂದ್ರ ನೀಡಿಲ್ಲ. ಮಲತಾಯಿ ಧೋರಣೆ ಮಾಡುತ್ತಿದೆ.ಈ ಬಗ್ಗೆ ಸಂಸದರು ಮೌನವಹಿಸಿದ್ದಾರೆಂದು ಆಪಾದಿಸಿದರು.
ಶಿಕ್ಷಣ, ಆರೊಗ್ಯಕ್ಕೆ ಆಧ್ಯತೆ. ನಂತರ ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ ನೀಡುತ್ತಿದ್ದು ಜಿಲ್ಲೆಯಲ್ಲಿ ಕೆಎಂಈಆರ್ ಸಿ ಅನುದಾನ ನಮಗೆ ಅನುಕೂಲಕರವಾಗಿದೆಂದ ಅವರು ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು. ತುಂಗಭದ್ರ ಜಲಾಶಯದಿಂದ ನೂರು ಕ್ಯೂಸೆಕ್ ನೀರನ್ನು ಎಲ್ ಎಲ್ ಸಿ ಕಾಲುವೆ ಮೂಲಕ ಪಡೆದು ನೀರಿನ ಸಮಸ್ಯೆ ಇಲ್ಲದೆ ನೋಡಿಕೊಳ್ಳಲಿದೆಂದರು. ನಮ್ಮ ನಾಯಕ ರಾಹುಲ್ ಗಾಂಧಿ ಅವರು ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ನಗರದಲ್ಲಿ ಜೀನ್ಸ್ ಪಾರ್ಕ್ ಮತ್ತು ವಿಮಾನ ನಿಲ್ದಾಣಕ್ಕೆ ಈ ಬಾರಿ ಬಜೆಟ್ ನಲ್ಲಿ ಅನುದಾನ ದೊರೆಯಲಿದೆಂದರು.
12 ಕೋಟಿ ರೂ ವೆಚ್ಚದಿಂದ ಸುಸಜ್ಜಿತ ಜಿಮ್:
ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ 12 ಕೋಟಿ ರೂ ವೆಚ್ಚದಿಂದ 100/100 ವಿಸ್ತ್ರೀರ್ಣದ ನಾಲ್ಕು ಪ್ಲೋರ್ ನಲ್ಲಿ ಸುಸಜ್ಜಿತ ಜಿಮ್ ನಿರ್ಮಾಣ ಮಾಡಲಿದೆಂದು ತಿಳಿಸಿದರು. ಬೆಂಗಳೂರಿನಲ್ಲಿ ವಿವಿಧ ಕಂಪನಿಗಳ ಮೂಲಕ ಫೆ 19.20 ಕ್ಕೆ ಜಾಬ್ ಮೇಳ ಹಮ್ಮಿಕೊಂಡಿದೆ. ಇದರಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಆಯ್ದ ಯುವಕರಿಗೆ ತರಬೇತಿ ನೀಡಲಿದೆಂದರು. ಮಹಿಳಾ ಡಿಗ್ರಿ ಕಾಲೇಜು 25 ಕೋಟಿ ಡಿಎಂಎಫ್ ದಿಂದ 25 ಕೋಟಿ ರೂ. ವಾಲ್ಮೀಕಿ ಭವನದ ಮುಂದೆ ಬರಲಿದೆ.
ವಾಲ್ಮೀಕಿ ನಿಗಮಕ್ಕೆ ಬಸನಗೌಡ ದದ್ದಲ್ ನೇಮಕ ಮಾಡಲಿದೆ ಇದಕ್ಕೆ ಅಸಮಾಧಾನ ಇಲ್ಲ ಸ್ವಾಗತ ಎಂದರು.
ನನ್ನನ್ನು ಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗುವಂತೆ ಕ್ಷ ಕೇಳಿಲ್ಲ. ಕೇಳುದರೆ ನೋಡುವೆ ಎಂದ ಅವರು ಬಳ್ಳಾರಿ ಉತ್ಸವ ಆಚರಿಸಲಿದ್ದು ಅದು ಯುವಜನೋತ್ಸವವಾಗಿಯೂ ಇರಲಿದೆಂದರು.
ಶೆಟ್ಟರ್ ನಡೆ ಬಗ್ಗೆ ಸಚಿವ ನಾಗೇಂದ್ರ ಅಸಮಾಧಾನ
ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ತಮ್ಮ ಪಕ್ಷ ಎಲ್ಲಾ ರೀತಿಯ ಗೌರವದಿಂದ ನಡೆಸಿಕೊಂಡಿದ್ದರೂ ಕಾಂಗ್ರೆಸ್ ಪಕ್ಷ ತೊರೆದು ಮತ್ತೆ ಬಿಜೆಪಿಗೆ ಹೊಗಿದ್ದು ಅಚ್ಚರಿ ಮೂಡಿಸಿದೆಂದು. ಶೆಟ್ಟರ್ ನಡೆ ಬಗ್ಗೆ ಸಚಿವ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್ ಪಕ್ಷ ಅವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡಿದೆ. ಆದರೆ ಬಿಜೆಪಿಗೆ ಯಾಕೆ ಹೋದ್ರು ಗೊತ್ತಾಗ್ತಿಲ್ಲ. ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಶೆಟ್ಟರ್ ಪ್ರಭಾವಿಯಾಗಿದ್ದಾರೆ ಆದರೆ ಬಳ್ಳಾರಿ ಭಾಗದಲ್ಲಿ ಅವರ ಪ್ರಭಾವ ಇಲ್ಲ. ಕಾಂಗ್ರೆಸ್ ಪಕ್ಷ ಒಬ್ಬರನ್ನು ನಂಬಿಕೊಂಡಿಲ್ಲ.
ಬಿಜೆಪಿ ಬಿಟ್ಟಾಗ ಕಾಂಗ್ರೆಸ್ ವಿಧಾನಸಭಾ ಟಿಕೆಟ್ ನೀಡಿತ್ತು ಸೋತಾಗಲೂ ಕೂಡಲೇ ಎಂಎಲ್ಸಿ ಮಾಡಿತ್ತು. ಆದ್ರೂ ಯಾವ ಒತ್ತಡಕ್ಕೆ ಬಿಜೆಪಿಗೆ ಹೋದ್ರೋ ಗೊತ್ತಾಗ್ತಿಲ್ಲ.
ಮೊನ್ನೆ ಮೊನ್ನೆವರೆಗೂ ಡಿಕೆಶಿ ಅವರು ಶೆಟ್ಟರ್ ಪಕ್ಷ ಬಿಡಲ್ಲ ಎಂದಿದ್ರು. ಮಾಜಿ ಸಚಿವ ಮನೇನ ಕೊಪ್ಪ ಅವರು ಕಾಂಗ್ರೆಸ್ ಗೆ ಬರೋರಿದ್ರು. ಅವರನ್ನು ಕಾಂಗ್ರೆಸ್ ಬರಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಶೆಟ್ಟರ್ ಪಕ್ಷ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಮೋದಿ ಅಲೆ ಎನ್ನುತ್ತಾರೆ. ಅದೇನು ಇಲ್ಲ. ಶೆಟ್ಟರ್ ಬಿಟ್ಟು ಹೋದ್ರೇನು, ಕಾಂಗ್ರೆಸ್ ನಲ್ಲಿ ಸಾಕಷ್ಟು ಜನರು ಲಿಂಗಾಯತ ನಾಯಕರು ಇದ್ದಾರೆ. ನಮ್ಮಪಕ್ಷಶೆಟ್ಟರ್ ಅವರನ್ನೇ ನಂಬಿಕೊಂಡಿಲ್ಲ.ಎಂಬಿ. ಪಾಟೀಲ್, ಈಶ್ವರ ಖಂಡ್ರೇ, ಶಾಮನೂರು ಶಿವಶಂಕರಪ್ಪ ಹೀಗೆ ಹಲವು ಲಿಂಗಾಯತ ಮುಖಂಡರಿದ್ದಾರೆಂದಿದ್ದಾರೆ.