ಬಳ್ಳಾರಿ, ಜ.26:, ಶೋಷಿತ ಸಮುದಾಯದ ಜನರನ್ನು ಎಲ್ಲಾ ರೀತಿಯಿಂದ ಮೇಲೆತ್ತುವ ಕೆಲಸ ಆಗಬೇಕಿದೆ. ಶೋಷಿತ ಸಮುದಾಯಗಳ ಜನರ ಸಂಖ್ಯೆ, ಮುಖಂಡರ ಸಂಖ್ಯೆ ದೊಡ್ಡದು ಎಂದರು ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗಳ ಸಚಿವ ಬಿ.ನಾಗೇಂದ್ರ ಹೇಳಿದರು.
ಜ.28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ
ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಶೋಷಿತರ ಪರವಾಗಿ ಇದೆ. ಜ.28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾವೇಶ ಯಶಸ್ವಿಗೆ ನಾವೆಲ್ಲ ಶ್ರಮಿಸಲಿದ್ದೇವೆ ಎಂದು ಅವರು ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಐದೂ ಜನ ಶಾಸಕರ ಗೆಲುವಿನಲ್ಲಿ ಶೋಷಿತ ಸಮುದಾಯಗಳ ಜನರ ಪಾತ್ರ ದೊಡ್ಡದು ಇದೆ ಎಂದು ಹೇಳಿದ ಸಚಿವ ನಾಗೇಂದ್ರ ಜ.28ರ ಸಮಾವೇಶಕ್ಕೆ ಎಲ್ಲ ನೆರವು ನೀಡುತ್ತೇವೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಶೋಷಿತ ಸಮುದಾಯಗಳ ನೆರವಿಗೆ ನಾವು ನಮ್ಮ ಶಾಸಕರು, ಸಂಸದರು ಬದ್ಧರಾಗಿದ್ದೇವೆ. ಸಮಯದ ಅಭಾವ ಇದ್ದರೂ ಕೂಡ ಸಮಾವೇಶವನ್ನು ಯಶಸ್ವಿಗೊಳಿಸುವ ಎಲ್ಲ ಪ್ರಯತ್ನ ಮಾಡೋಣ ಎಂದರು
ಇದಕ್ಕೂ ಮುನ್ನ ಮಾತನಾಡಿದ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್; ಶೋಷಿತ ಸಮುದಾಯದ ಜನರ ಜೊತೆಗೆ ಇತಿಹಾಸದಲ್ಲಿ ಹಾಗೂ ವರ್ತಮಾನದಲ್ಲಿ ನಡೆಯುವ ಕೆಲವು ಘಟನೆಗಳನ್ನು ನೆನದಾಗ ದಿಗ್ಭ್ರಾಂತಿ ಎನಿಸುತ್ತದೆ. ಇಂದಿಗೂ ಶೋಷಿತ ಸಮುದಾಯಗಳ ಸ್ಥಿತಿ ಬದಲಾಗಿಲ್ಲ. ಹೀಗಾಗಿ ದುರ್ಬಲ ಜನರ ಜಾಗೃತಿಗಾಗಿ ಚಿತ್ರದುರ್ಗದಲ್ಲಿ ಜ.28ರಂದು ಏರ್ಪಡಿಸಲಾಗಿರುವ ಸಮಾವೇಶ ಯಶಸ್ಸಿಗೆ ನಾವೆಲ್ಲ ಶ್ರಮಿಸೋಣ ಎಂದರು.
ಮತ್ತೋರ್ವ ಶಾಸಕ ಬಳ್ಳಾರಿ ನಗರದ ನಾರಾ ಭರತ್ ರೆಡ್ಡಿ ಅವರು ಮಾತನಾಡಿ; ಚಿತ್ರದುರ್ಗದಲ್ಲಿ ನಡೆಯುತ್ತಿರುವ ಸಮಾವೇಶ ರಾಜಕೀಯ ಉದ್ಧೇಶ ಇಲ್ಲದ ಸಮಾವೇಶ, ಈ ಸಮಾವೇಶ ಯಶಸ್ವಿ ಆಗಬೇಕು ಎಂದರು.
ಸಿದ್ಧರಾಮೋತ್ಸವ ಯಶಸ್ವಿಯಾದಂತೆ ಈ ಸಮಾವೇಶ ಕೂಡ ಯಶಸ್ವಿಯಾಗಬೇಕು, ಸಚಿವ ಬಿ.ನಾಗೇಂದ್ರ ಅವರು ನೀಡುವ ಸೂಚನೆಗಳಂತೆ ನಾವೆಲ್ಲ ಶಾಸಕರು ಸಮಾವೇಶಕ್ಕಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೆರಳಿ ಸಮಾವೇಶದಲ್ಲಿ ಭಾಗವಹಿಸಲು ಬೇಕಾದ ಸವಲತ್ತು ಮಾಡುವ ಜವಾಬ್ದಾರಿ ನಮ್ಮದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ
ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ, ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಹುಮಾಯೂನ್ ಖಾನ್, ರಾಂಪ್ರಸಾದ್, ವೆಂಕಟೇಶ ಪ್ರಸಾದ್, ಮಹಾನಗರ ಪಾಲಿಕೆಯ ಮೇಯರ್ ಬಿ.ಶ್ವೇತಾ, ಉಪಮೇಯರ್ ಜಾನಕಮ್ಮ, ಬಲಿಜ ಸಮುದಾಯದ ರಮೇಶ ಬುಜ್ಜಿ, ಗೊಲ್ಲರ ಸಂಘದ ಪಿ.ಗಾದೆಪ್ಪ, ಬಂಜಾರ ಸಮುದಾಯದ ಚಂಪಾ ಚವ್ಹಾಣ, ಮಂಜುಳಾ, ಕೆರಕೋಡಪ್ಪ, ದಲಿತ ಮುಖಂಡರಾದ ಎ.ಮಾನಯ್ಯ, ರೈತ ಮುಖಂಡ ವಿ.ಎಸ್.ಶಿವಶಂಕರ್, ಮುಂಡ್ರಿಗಿ ನಾಗರಾಜ್,ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷ ರಾದ ಡಾ, ಮಂಜುಳಾ, ಎಲ್.ಮಾರೆಣ್ಣ, ಕಣೇಕಲ್ ಮಬೂಸಾಬ್ ದಲಿತ ಜಿ ಗೋವರ್ಧನ್, ಡಿ ನಟರಾಜ್ ಪೊಟ್ ರಾಜ ಎ,ಕೆ ನಾಗರಾಜ್,ಉಪ್ಪಾರ್ ಸಮಾಜದ ಮುಖಂಡರು ಕೊಳಗಲ್ ಎರಿಸ್ವಾಮಿ ಮೆಹಬೂಬಸಾಬ, ಕಲೀಂ ಹಾಶ್ಮಿ, ಬೋವಿ ಸಮಾಜದ ರಾಮಾಂಜನೇಯ, ತಳವಾರ ದುರ್ಗಣ್ಣ, ನರಸಪ್ಪ, ಪಾಲಿಕೆಯ ಸದಸ್ಯರಾದ ಮಿಂಚು ಶ್ರೀನಿವಾಸ್, ಪ್ರಭಂಜನಕುಮಾರ್, ಪೆರ್ರಂ ವಿವೇಕ್, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಬಿ ಆರ್ ಎಲ್ ಸೀನಾ, ಬಳ್ಳಾರಿ ಮುಸ್ಲಿಂ ಅಂಜುಮನ್ ಕಮಿಟಿ ಇಮಾಮ್ ಗೋಡೆಕಾರ, ಮಡಿವಾಳ ಸಮುದಾಯದ ಧನಂಜಯ ಹಮಾಲ್, ಕುಡಿತಿನಿ ರಾಮಾಂಜನೇಯ ವೇದಿಕೆ ಮೇಲಿದ್ದರು.
ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಕೆ.ಇ.ಚಿದಾನಂದಪ್ಪ ಸ್ವಾಗತಿಸಿ, ನಿರೂಪಿಸಿದರು. ಮಾನವ ಬಂಧುತ್ವ ವೇದಿಕೆಯ ಸಂಗನಕಲ್ಲು ವಿಜಯ್ ವಂದಿಸಿದರು
ಕಾಂತರಾಜ ಆಯೋಗದ ವರದಿಯಲ್ಲಿ ಹಾವಿದೆಯೋ? ಚೇಳಿದೆಯೋ? ಬಹಿರಂಗ ಆಗಲಿ
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರೈತ ಮುಖಂಡ ವಿ.ಎಸ್.ಶಿವಶಂಕರ್; ಸಿದ್ದರಾಮಯ್ಯ ಅವರ ನೇತೃತ್ವದ ಈ ಹಿಂದಿನ 2013-18ರ ಸರ್ಕಾರ ರಾಜ್ಯದ ಎಲ್ಲ ಸಮುದಾಯಗಳ ಜಾತಿಯಾಧಾರಿತ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಯಿತು. ಆದರೆ ಈ ಸಮೀಕ್ಷೆಯ ವರದಿ ಸಿದ್ಧಗೊಂಡರೂ ಕೂಡ ಇಂದಿಗೂ ವರದಿ ಸಲ್ಲಿಕೆ ಆಗಿಲ್ಲ. ವರದಿಯನ್ನು ಮನುವಾದಿಗಳು, ಶೋಷಿತರ ವಿರೋಧಿಗಳು, ಸಂಘಪರಿವಾರದವರು ವಿರೋಧ ಮಾಡುತ್ತಿದ್ದಾರೆ. ಆದರೆ ವರದಿಯಲ್ಲಿ ಸಲ್ಲಿಕೆಯಾಗದ ಹೊರತು ವರದಿಯಲ್ಲಿ ಏನಿದೆ ಎಂದು ತಿಳಿಯುವುದಾದರೂ ಹೇಗೆ? ವರದಿ ಮೊದಲು ಬಹಿರಂಗ ಆಗಲಿ, ಸಾರ್ವಜನಿಕ ಚರ್ಚೆ ಆಗಲಿ, ನಂತರ ಅದನ್ನು ಜಾರಿಗೆ ತರುವ ಕೆಲಸ ಆಗಲಿ ಎಂದರು.