ಕೊಟ್ಟೂರು; ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಾಜ್ಯೋತ್ಸವದಂದು ಎಲ್ಲಾ ಶಾಲಾ ಮಕ್ಕಳ ನೃತ್ಯ ಹಾಗು ಹಾಡಿನ ಮುಖಾಂತರ ಸಾರ್ವಜನಿಕರಿಗೆ ಮನರಂಜನೆಯನ್ನು ಕೊಡುವ ಹಬ್ಬವಾಗಿದೆ.ಪಟ್ಟಣದ ತಾಲೂಕಿನ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ 75 ನೇ ಗಣರಾಜ್ಯೋತ್ಸವ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾಯ೯ಕ್ರಮದಲ್ಲಿ ಪಿಎಸ್ಐ ಗೀತಾಂಜಲಿ ಶಿಂಧೆ ಹಾಗೂ ಇಲಾಖೆಯ ಸಿಬ್ಬಂದಿಗಳು ಮತ್ತು ತಾಲೂಕಿನ ಎಲ್ಲಾ ವಿಧ್ಯಾಥಿ೯ಗಳು ಪಥಸಂಚಲನ ನಡೆಸಿದರು.
ಈ ರಾಷ್ಟ್ರೀಯ ಹಬ್ಬದಂದು, ಕಾಯ೯ಕ್ರಮದ ಕೇಂದ್ರ ಬಿಂದು ತಾಲೂಕು ದಂಡಾಧಿಕಾರಿಗಳಾದ ಅಮರೇಶ ಜಿ ಕೆ ರವರು ಆಗಿರುತ್ತಾರೆ. ಈ ಹಬ್ಬದಂದು ರಾಷ್ಟ್ರಗೀತೆ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡುವ ಸಂಪ್ರದಾಯವಿದೆ. ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡಿ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ರವರು ವಿಧಾನಸಭಾ ಕ್ಷೇತ್ರ ಹಗರಿಬೊಮ್ಮನಹಳ್ಳಿಯಲ್ಲಿ, ಇವರು ಮತ್ತೊಂದು ತಾಲೂಕಿನ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ರೈತ ಗೀತೆಯನ್ನು ಹಾಡಲಿಕ್ಕೆ ಹೇಳಿದರು, ತದನಂತರ ಅದನ್ನು ನಿಲ್ಲಿಸಿ, ರೈತ ಸಂಕುಲಕ್ಕೆ ಅವಮಾನ ಮಾಡಿದಂತೆ ಆಗಿದೆ ಎಂದು ಅಲ್ಲಿನ ರೈತ ಸಂಘಟನೆಯ ಮುಖಂಡರುಗಳು ಬೇಸರ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹಬ್ಬಗಳ ತಾಲೂಕು ಅಧ್ಯಕ್ಷರು ತಾಲೂಕಿನ ದಂಡಾಧಿಕಾರಿಯೇ ಆಗಿರುತ್ತಾರೆ ಇದಕ್ಕೆ ಈ ಕಾರ್ಯಕ್ರಮದ ಕೇಂದ್ರ ಬಿಂದುವಾದ ತಹಶೀಲ್ದಾರ್ ರವರನ್ನು ಮಾಧ್ಯಮ ಮಿತ್ರರರು ನಿರ್ಲಕ್ಷ ತೋರಿಸಿದ ಅಧಿಕಾರಿಗಳಿಗೆ ಯಾವ ರೀತಿ ಕ್ರಮ ಜರುಗಿಸುವಿರಿ? ಹಾಗೂ ಕಾರ್ಯಕ್ರಮದ ಸಂಘಟನಕಾರರಿಗೆ ಅಹ್ವಾನ ಪತ್ರಿಕೆ ನೀಡಿಲ್ಲ.ಈ ಕಾರ್ಯಕ್ರಮ ಗೊಂದಲಕ್ಕೆ ಈಡಾಗಿದೆ ಎಂದಲ್ಲ ವಿಚಾರಣೆ ನಡೆಸಿದಾಗ, ಹೌದು ಸ್ವಲ್ಪ ನೂನ್ಯತೆಗಳ ಆಗಿವೆ, ಇನ್ನು ಮುಂದೆ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಇದೇ ರೀತಿ ಮುಂದುವರೆದರೆ ಅಧಿಕಾರಿಗಳ ವಿರುದ್ಧ ಮುಂದೆ ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಗುಡಿಯಾರ್ ಮಲ್ಲಿಕಾರ್ಜುನ್ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿಗಳು ಎಚ್ಚರಿಸಿರುವರಂತೆ.
ಈ ಹಾಡನ್ನು ಹಾಡದಿರುವುದಕ್ಕೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ KS ಜಯಪ್ರಕಾಶ ನಾಯ್ಕ , ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ, ಜಿಲ್ಲಾ ಮುಖಂಡರಾದ ಕೊಟ್ರಯ್ಯ, ನೀಲನ
ಕಂಠನ ಗೌಡ್ರು, ರಮೇಶ್ ನಾಯ್ಕ, ಸುರೇಶ್ ನಾಯ್ಕ ಮತ್ತು ಕೊಟ್ಟೂರು ತಾಲೂಕು ಎಸ್ ಡಿ ಎಂ ಸಿ ಅದ್ಯಕ್ಷರು ಕೆ.ಎಸ್ ಹರೀಶ್,. ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಂಸ್ಥೆ ತಾಲೂಕು ಅದ್ಯಕ್ಷರು ಬಿ.ಸತೀಶ್ ಮತ್ತು ತಾಲೂಕಿನ ಇನ್ನಿತರ ವಿವಿಧ ಸಂಘಟನೆಯ ಪಧಾದಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೆಂಕಟಸ್ವಾಮಿ ಸಿಪಿಐ,ಎ ನಸುರುಲ್ಲಾ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳು ಹಾಗೂ ಸದಸ್ಯರು ಶಶಿಧರ್ ಮೈದೂರ್ ಮತ್ತು ಅಜ್ಜಪ್ಪ ಎಲ್ಲಾ ಇಸಿಓ ಸಿಆರ್ಪಿ ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಮಕ್ಕಳು ಸಾರ್ವಜನಿಕರು ಸೇರಿದ್ದರು.