ಕೊಟ್ಟೂರು; ತಾಲೂಕಿನ ಅಂಬಳಿ ಗ್ರಾಮ ಪಂಚಾಯಿತಿಯಲ್ಲಿ 75 ನೇ ಗಣರಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಗ್ರಾಮಪಂಚಾಯಿತಿ ಅದ್ಯಕ್ಷರಾದ ಹೊಳಲಮ್ಮ ಹನುಮಂತಪ್ಪ ರವರು ಧ್ವಜರೋಹಣ ಮಾಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿ ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂತು. ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು. ನಂತರ ಗ್ರಾಮ ಪಂಚಾಯತಿ ಉಪಾದ್ಯಕ್ಷರಾದ ಟಿ.ಕೊಟ್ರಮ್ಮ ಮಾರುತಿ ರವರು ಮಾತನಾಡಿ ದೇಶದ ವಿವಿಧ ಭಾಗಗಳಲ್ಲಿ ರಕ್ಷಣಾ ಪಡೆಗಳು ಪರೇಡ್ ಮಾಡುವ ಮೂಲಕ, ಶಾಲೆಗಳು, ಕಚೇರಿಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸಮಾರಂಭಗಳು ನಡೆಯುತ್ತವೆ. ಪ್ರತಿವರ್ಷ ನಮ್ಮ ದೇಶದಲ್ಲಿ ಇದೊಂದು ಮಹತ್ವದ ಸಂದರ್ಭವಾಗಿದೆ ಎಂದು ಹೇಳಿದರು.ಈ ಕಾಯ೯ಕ್ರಮವನ್ನು ಉದ್ದೇಶಿಸಿ ಪ್ರಥಮ ದಜೆ೯ಯ ಗುತ್ತಿಗೆದಾರರಾದ ವಿ ಬಸವರಾಜ ರವರು ನವದೆಹಲಿಯ ಕರ್ತವ್ಯ ಪಥದಲ್ಲಿ ರಕ್ಷಣಾ ಪಡೆಗಳು ಅತ್ಯಂತ ಭವ್ಯವಾದ ಪರೇಡ್ ಮೆರವಣಿಗೆಯನ್ನು ನಡೆಸುತ್ತವೆ. ಈ ಸುದಿನದಂದು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಸ್ಮರಿಸಲು ನಾಗರೀಕರೆಲ್ಲರೂ ಒಟ್ಟಾಗಿ ಸೇರುತ್ತೇವೆ ಎಂದರು. ಗ್ರಾಮ ಪಂಚಾಯತಿಯ ಸದಸ್ಯರಾದ ಬಿ ಸಣ್ಣ ಬಸವರಾಜ ರವರು -ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ದಿನವನ್ನು ಅತ್ಯಂತ ಉತ್ಸಾಹ ಮತ್ತು ದೇಶಭಕ್ತಿಯ ಭಾವನೆಗಳಿಂದ ಆಚರಿಸಲಾಗುತ್ತದೆ ಎಂದರು. ಎನ್ ವಿರುಪಾಕ್ಷಿ, ಟಿ ಶಿವಣ್ಣ ನವರು ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣಗಳು, ಪ್ರಬಂಧ ಸ್ಪರ್ಧೆ, ಇತರೆ ಚಟುವಟಿಕೆಗಳೊಂದಿಗೆ ಈ ದಿನವನ್ನು ಸ್ಮರಣೀಯವಾಗಿಸಲಾಗುತ್ತದೆ ಎಂದು ಹೇಳಿದರು. ಮಾಜಿ ಅಧ್ಯಕ್ಷರಾದ ಅನುಸೂಯಮ್ಮಗೊಣೇಪ್ಪ ಮತ್ತು ಉಪಾಧ್ಯಕ್ಷರಾದ ವಿ ಗಂಗಮ್ಮ ಬಸವರಾಜ ರವರು ಡಾ” ಬಾಬಸಾಹೇಬ ಅಂಬೇಡ್ಕರ್ ರವರು ಸಂವಿಧಾನವನ್ನು ಎಲ್ಲಾ ಜಾತಿ, ಧಮ೯, ಬಾಷೆಗಳಿಗೆ ಅನುಗುಣವಾಗಿ ರಚಿಸಿದರು. ಗ್ರಾಮ ಪಂಚಾಯತಿಯ ಪಿಡಿಓ ದೇವೇಶ ಮತ್ತು ಕಾಯ೯ದಶಿ೯ ಪ್ರದೀಪ್ ರವರು ಇದೊಂದು ಬೃಹತ್ ಸಂವಿಧಾನವಾಗಿದ್ದು, ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ ಬಿ.ಆರ್.ಅಂಬೇಡ್ಕರ್ ರವರು. ಆದ್ದರಿಂದ ಅಂಬೇಡ್ಕರ್ ರನ್ನು ಭಾರತ ಸಂವಿಧಾನದ ಪಿತಾಮಹರು ಎನ್ನುವರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಂ ಲಿಂಗರಾಜರವರು ಸಂವಿಧಾನವನ್ನು ಗೌರವಿಸಬೇಕು. ಅದರಲ್ಲಿ ಇರುವ ನಿಯಮಗಳನ್ನು ಅನುಸರಿಸಬೇಕು. ಮೂಲಭೂತ ಹಕ್ಕುಗಳಂತೆ, ದೇಶದ ಪ್ರಜೆಗಳಾಗಿ ಇದರಲ್ಲಿ ನೀಡಲಾದ ಮೂಲಭೂತ ಕರ್ತವ್ಯಗಳನ್ನು ಸಹ ಪಾಲಿಸಬೇಕು. ಈ ಕಾಯ೯ಕ್ರಮವನ್ನು ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಫ್ ರೇಟರ್ ಹುಲುಗಪ್ಪ ಮತ್ತು ಕೊಟ್ರೇಶ ಬಿಲ್ ಕಲೆಕ್ಟರ್ ರವರು ಮಹಾತ್ಮ ಗಾಂಧೀಜಿ ಮತ್ತು ‘ಬಾಬ ಸಾಹೇಬರ ‘ ಪುಷ್ಪ ನಮನವನ್ನು ಸಲ್ಲಿಸಿ ಪೂಜೆಯನ್ನು ನೆರವೇರಿಸಿದರು.ಸ್ವಾಗತವನ್ನು ಕರಿಬಸಪ್ಪ ಶಿಕ್ಷಕರು ಮಾಡುವ ಮೂಲಕ ಕಾಯ೯ಕ್ರಮಕ್ಕೆಅನುವು ಮಾಡಿ ಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು, ಸಿಬ್ಬಂದಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು . ಎಸ್ ಡಿ ಎಂ ಸಿ ಸದಸ್ಯರು, ಅಧ್ಯಕ್ಷರು, ವಿ ಎಸ್ ಎಸ್ ಎನ್ ಸದಸ್ಯರು, ಅಧ್ಯಕ್ಷರು , ಅಂಗನವಾಡಿ ಟೀಚರ್, ಆಶಾ ಕಾಯ೯ಕತ೯ರು, ಸಾವ೯ಜನಿಕರು, ಊರಿನ ಮುಖಂಡರು ಉಪಸ್ಥಿತರಿದ್ದರು.