ಬೆಂಗಳೂರು: ಸಿರಿಯಾಕ್ ಆರ್ಥೋಡಾಕ್ಸ್ ಚರ್ಚ್ ನ ಮುಖ್ಯಸ್ಥ ಮೊರನ್ ಮೊರ್ ಇಗ್ನೇಷಿಯಸ್ ಅಫೆರೆಮ್ -2 ನೇತೃತ್ವದ ಧರ್ಮಗುರುಗಳ ನಿಯೋಗ ಇಂದು ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿತು. ಬೆಂಗಳೂರು ಆರ್ಚ್ ಬಿಷಪ್ ರೆ. ಡಾ. ಪೀಟರ್ ಮಚಾಡೋ ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.