ಬಳ್ಳಾರಿ,ಪೆ,೦೫: ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೆಲ ಮಸೀದಿಗಳ ಅಭಿವೃದ್ದಿಗಾಗಿನಾರಾ ಭರತ್ ರೆಡ್ಡಿ ಅವರ ಪ್ರಯತ್ನದ ಫಲವಾಗಿ ಆರು ಮಸೀದಿಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ನಗರದಲ್ಲಿರುವ ೧೬ ಮುಸ್ಲಿಂ ಪ್ರಾರ್ಥನಾ ಮಂದಿರಗಳ(ಮಸೀದಿಗಳಿಗೆ) ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ವಕ್ಫ್ ಖಾತೆ ಸಚಿವರಾದ ಜಮೀರ್ ಅಹ್ಮದ್ ಖಾನ್ರಿಗೆ ಶಾಸಕ ನಾರಾ ಭರತ್ ರೆಡ್ಡಿಯವರು ಪತ್ರ ಬರೆದು ಅನುದಾನ ಮಂಜೂರು ಮಾಡುವಂತೆ ಕೋರಿದ್ದರು. ತದನಂತರ ವಕ್ಘ್ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಮಸೀದಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸಿದ್ದರು. ಶಾಸಕರ ಈ ಪ್ರಯತ್ನದ ಫಲವಾಗಿ ಸರ್ಕಾರದಿಂದ ಮೊದಲನೆಯ ಹಂತದಲ್ಲಿ ಬಳ್ಳಾರಿ ನಗರದ ಆರು ಮಸೀದಿಗಳ ಅಭಿವೃದ್ಧಿಗೆ ಸರ್ಕಾರದಿಂದ ೬೫.೦೦ ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.
ನಗರದ ಅಂದ್ರಾಳುವಿನ ಎಂ.ಜೆ.ಡಿ.ಇ ಆಶಾರಫಿಯಾ ಮಸೀದಿಗೆ ೧೦ ಲಕ್ಷ ರೂ. ೧೨ ನೇ ವಾರ್ಡ್ ನಲ್ಲಿರುವ ಬಂಗಾರ ಸ್ಟೀಟ್ ತಾಜೀಯಾ ಮಹೊಲ್ಲ ಮಸೀದಿಗೆ ೫ ಲಕ್ಷ. ಗುಗ್ಗರಹಟ್ಟಿಯಲ್ಲಿರುವ ಕೆ.ಜಿ. ಎನ್. ಕಾಲೋನಿ ಜಂತೂಲ್ ಫಿರದೋಸ್ ಮಸೀದಿಗೆ ೫ ಲಕ್ಷ. ಗಾಂಧಿನಗರದ ಕಪ್ಪಗಲ್ ರಸ್ತೆಯಲ್ಲಿರುವ ಮಸ್ಜೀದ್- ಏ-ಆಹ್ಮದ್ ಐಲೇ ಸುನ್ನತ್ ಉಲ್-ಜಮಾತ್ ಮಸೀದಿಗೆ ೧೦ ಲಕ್ಷ. ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಜಮೀಯಾ ಸುನ್ನಿ ಮಸೀದಿಗೆ ೧೦ ಲಕ್ಷ. ದೇವಿನಗರದಲ್ಲಿರುವ ಮಸ್ಜೀದ್ ಏ ಸಿದ್ದೀಖಿ ಹಾಗೂ ದೇವಿನಗರದ ಮದರಾಸಾಗೆ ೧೫ ಲಕ್ಷ ರೂ. ಅನುದಾನವನ್ನ ನಗರ ಶಾಸಕ ನಾರಾಭರತ್ ರೆಡ್ಡಿಯವರು ಮಂಜೂರು ಮಾಡಿಸಿದ್ದಾರೆ. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಹೊಸ ಕಾಮಗಾರಿ ಹಾಗೂ ಹೊಸ ಅಭಿವೃದ್ಧಿ ಕಾರ್ಯಗಳಿಗೆ ಸರಕಾರ ಅನುದಾನ ಬಿಡುಗಡೆ ಮಾಡುವ ಸನ್ನಿವೇಶವಿಲ್ಲದ ಈ ಸಮಯದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ವಿಶೇಷ ಕಾಳಜಿ ಹಾಗೂ ಸತತ ಪ್ರಯತ್ನದ ಫಲವಾಗಿ ನಗರದ ಅಭಿವೃದ್ಧಿಗೆ ಅನುದಾನವನ್ನ ತಂದು ನಗರ ಅಭಿವೃದ್ಧಿಗೆ ಪಣ ತೊಟ್ಟಿರುವ ಶಾಸಕರ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.