ಬಳ್ಳಾರಿ, ಫೆ.05: ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಬಳ್ಳಾರಿ ಸುಬ್ಬಣ್ಣ ಮತ್ತು ತಂಡ ಇವರಿಂದ ವಿಶ್ವವಿಖ್ಯಾತ ಹಂಪಿ ಉತ್ಸವ ಆಯೋಜಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಜಿಲ್ಲಾಡಳಿತ ವಿಜಯನಗರ ಜಿಲ್ಲೆ ಆಯೋಜಿಸಿದ ಸಾಸಿವೆ ಕಾಳು ಗಣಪ್ಪ ವೇದಿಕೆಯಲ್ಲಿ ನಮ್ಮ ತಂಡದ ವತಿಯಿಂದ ರಾಮ ರಾವಣರ ಯುದ್ಧ ಪ್ರಸಂಗ ತೊಗುಲು ಗೊಂಬೆ ಕಥಾ ರೂಪಕದಲ್ಲಿ ನೆರವೇರಿಸಲಾಯಿತು. ಜನಸ್ತೋಮ ತುಂಬಿದ ವೇದಿಕೆಯಲ್ಲಿ ಜನಮನ ರಂಜನಗೊಳಿಸಲಾಯಿತು,, ತಂಡದ ಕಲಾವಿದರಾದ ಸುಬ್ಬಣ್ಣ .ತುಳಸಿ .ಜಯಲಕ್ಷ್ಮಿ .ಶ್ರೀನಿವಾಸ. ಹಂಪಿ ಎರ್ರಿಸ್ವಾಮಿ. ಕುಮಾರ್ ಗೌಡ ಅಮರಾಪುರ ,ಅಭಿನಯ ,ಹೆಚ್ ತಿಪ್ಪೇಸ್ವಾಮಿ ,ನಾರಾಯಣಪ್ಪ ,ಆದಿತ್ಯರಾವ್, ದುರ್ಗೇಶ, ಗೌತಮ್, ನಿತಿನ್ ರಾವ್ ಮುಂತಾದ ಕಲಾವಿದರು ಇದ್ದರು.