ಬಳ್ಳಾರಿ: ಭಾರತೀಯ ಜನತಾ ಪಕ್ಷದ ಬಳ್ಳಾರಿ ಜಿಲ್ಲಾ (ಗ್ರಾಮಾಂತರ) ಉಪಾಧ್ಯಕ್ಷರನ್ನಾಗಿ ವಿ ಕೆ ಬಸಪ್ಪ ಇವರನ್ನು ರಾಜ್ಯದಕ್ಷರ ಸೂಚನೆ ಮೇರೆಗೆ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ, ಬಸಪ್ಪ ಹಲವಾರು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಶ್ರೀರಾಮುಲು ರವರ ಬಲಗೈ ಬಂಟನಾಗಿ ಎಲ್ಲಾ ಚುನಾವಣೆಯಲ್ಲಿ ಕೆಲಸ ಮಾಡುತ್ತಾ ಪಕ್ಷದ ಸೇವಯನ್ನು ಮಾಡಿರುತ್ತಾರೆ, ಈ ಸೇವಯನ್ನು ಪರಿಗಣ ಸಿದ ಪಕ್ಷದ ಹೈಕಮಾಂಡ್ ವಿ.ಕೆ ಬಸಪ್ಪನವರನ್ನು ಬಳ್ಳಾರಿ ಜಿಲ್ಲಾ (ಗ್ರಾಮಾಂತರ) ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ಸೂಚಿಸಿದೆ.
ಈ ಸಂದರ್ಭದಲ್ಲಿ ವಿ ಕೆ ಬಸಪ್ಪ ಮಾತನಾಡಿ, ನನ್ನ ಸೇವೆಯನ್ನು ಗುರುತಿಸಿದ ಪಕ್ಷದ ಹೈಕಮಾಂಡ್ ನನ್ನನ್ನು ಜಿಲ್ಲಾ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಿದೆ, ಅವರ ನಂಬಿಕೆಗೆ ಅನುಗುಣವಾಗಿ ಮುಂದಿನ ಲೋಕಸಭಾ ಸೇರಿದಂತೆ ಎಲ್ಲಾ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿ ಅವರ ಗೆಲುವಿಗೆ ಪ್ರಮಾಣ ಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಮತ್ತು ನನ್ನ ನೇಮಕಕ್ಕೆ ಕಾರಣರಾದ ಬಿ ಶ್ರೀರಾಮುಲು, ಜಿ ಸೋಮಶೇಖರರೆಡ್ಡಿ ಮತ್ತು ಜಿಲ್ಲಾಧ್ಯಕ್ಷ ಅನಿಲ್ ನಾಯ್ಡುರವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆಂದರು.