ಬಳ್ಳಾರಿ,ಫೆ.10: ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮನೆ, ಕಛೇ ರಿಗಳ ಮೇಲೆ ಶನಿವಾರ ಸುಮಾರು ಮುಂಜಾನೆ 6:00 ಸಮಯದಲ್ಲಿ ಜಾರಿ ನಿರ್ದೆಶನಾಲಯ (ಇಡಿ) ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇದರ ಜೊತೆಗೆ ಭರತ್ ರೆಡ್ಡಿ ಅವರ ತಂದೆ, ಮಾಜಿ ಶಾಸಕ ನಾರಾ ಸೂರ್ಯನಾರಾಯಣ -ರೆಡ್ಡಿ, ಅವರ ಚಿಕ್ಕಪ್ಪ ಪ್ರತಾಪ್ ರೆಡ್ಡಿ ಮತ್ತು ಸಂಬಂಧಿಗಳ ಮನೆಗಳು, ಕಛೇ ರಿಗಳ ಶೋಧ ನಡೆಯುತ್ತಿದೆ. ಶಾಸಕ ನಗರ ಭರತ್ ರೆಡ್ಡಿ ಅವರ ಕುಟುಂಬ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಗ್ರಾನೆಟ್ ವ್ಯವಹಾರ ಹೊಂದಿದ್ದು ಅಲ್ಲಿಯೂ ಸಹ ಇಡಿ ಅಧಿಕಾರಿಗಳ ತನಿಖೆಯನ್ನು ಆರಂಭಿಸಿದ್ದಾರೆ ಇಡಿ ಅಧಿಕಾರಿಗಳು ಬೆಂಗಳೂರಿನಿಂದ ಆಗಮಿಸಿದ್ದು ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ನಡೆಸಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ
ಕೆಲ ವರ್ಷಗಳ ಹಿಂದೆ ಭರತ್ ರೆಡ್ಡಿಯವರ ಮನೆ, ಕಛೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.