ಬಳ್ಳಾರಿ,(ಫೆ.15): ಬಳ್ಳಾರಿ ನಗರದ ಮೋತಿ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಮಾಜಿ ಅರೇ ಸೇನೆ ಸಂಘದ ವತಿಯಿಂದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದಂತಹ ವೀರ ಯೋಧರಿಗೆ 5ನೇ ವರ್ಷದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಮಾಜಿ ಅರೇ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಎನ್ ಪ್ರಹ್ಲಾದ ರೆಡ್ಡಿ ಸಹ ಕಾರ್ಯದರ್ಶಿಯಾದ ರಾಜಸಿಂಹ, ಉಪಾಧ್ಯಕ್ಷರಾದ ಈಶ್ವರ ರೆಡ್ಡಿ ಮತ್ತು ನಿರ್ದೇಶಕರಾದ ಲಕ್ಷ್ಮಣ್ ಮತ್ತು ಶೇಕ್ ಸಾಬ್ ಹಾಗೂ ಗೋವಿಂದರಾಜು, ಕಾಶಿಮ್ ಗವಿಸಿದ್ದ, ಹೊನ್ನೂರಪ್ಪ ,ರಾಜಶೇಖರ್ ,ವಿರುಪಾಕ್ಷ ಹಾಗೂ ರೈತ ಮುಖಂಡರು ಪ್ರಭಾಕರ್ ರೆಡ್ಡಿ .ಸಲೀಂ ಹಾಗೂ ಜಾನಕಿ ಕಾರ್ಪ ಲಿಮಿಟೆಡ್ ಸೇಫ್ಟಿ ಆಫೀಸರ್ ಕಾಸಿಂಸಾಬ್ ,ಅನಿತಾ ಜೈನ್ ,ರೂಪ ,ಮಾತೃ ಮಹಿಳಾ ಮಂಡಳಿಯ ಅಧ್ಯಕ್ಷರು ಪುಷ್ಪಾವತಿ,ಸಮಾಜ ಸೇವಕರಾದ ಶ್ರೀದೇವಿ, ಆಮ್ ಆದ್ಮಿ ಪಕ್ಷದ ಅಧ್ಯಕ್ಷರು ಮಂಜುನಾಥ್, ರಾಮಣ್ಣ ಕಿರಣ್, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.