ಬೆಂಗಳೂರು (ಫೆ.15): ಉಸಿರಾಟದ ತೊಂದರೆಯಿಂದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರಿನ ಡಾ ಸತ್ಯನಾರಾಯಣ ಶ್ವಾಸಕೋಶ ತಜ್ಞರಿಂದ ಚಿಕತ್ಸೆ ನೀಡಲಾಗುತ್ತಿದೆ. ಸದ್ಯ ದೇವೇಗೌಡರ ಆರೋಗ್ಯ ಸ್ಥಿರವಾಗಿದ್ದು, ತಜ್ಞರ ತಂಡದಿಂದ ನಿಗಾ ವಹಿಸಲಾಗಿದೆ.
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಆರೋಗ್ಯದ ಬಗ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಡಾ ಸತ್ಯನಾರಾಯಣ ಅವರು ಪ್ರತಿಕ್ರಿಯಿಸಿದ್ದು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಪ್ರತ್ಯೇಕ ಮೆಡಿಕಲ್ ಟೀಂ ರಚನೆ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. Respiratory infection ಆಗಿದೆಕ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಮತ್ತಷ್ಟು ಚಿಕಿತ್ಸೆಯ ಅಗತ್ಯತೆ ಇದೆ. ಎರಡುಮೂರು ದಿನಗಳಿಂದ ಅವರಿಗೆ ಉಸಿರಾಟದ ಸಮಸ್ಯೆ ಇತ್ತು. ಇನ್ನೂ ಡಿಸ್ಟಾರ್ಜ್ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಡಾ.ಮಂಜುನಾಥ್ ಅವರು ಕೂಡ ಇಲ್ಲೇ ಇದ್ದಾರೆ. ಮನೆಯವರು ಜೊತೆಗಿದ್ದಾರೆ. ಚಿಕಿತ್ಸೆಗಾಗಿ ವಿಶೇಷ ತಂಡ ಮಾಡಿದ್ದೇವೆ. ಯಾವ್ಯಾವ ಚಿಕಿತ್ಸೆಯ ಅಗತ್ಯವಿದ್ಯೋ ಅಂತಹ ಚಿಕಿತ್ಸೆಯನ್ನು ತಜ್ಞ ವೈದ್ಯರು ನೀಡ್ತಾರೆ. ಆದಷ್ಟು ಬೇಗ ಗುಣಮುಖರಾಗಿ ಮನೆಗೆ ತರಳಲಿ ಎಂದಿರುವ ವೈದ್ಯರು.
90ರ ಇಳಿವಯಸ್ಸಿನ ದೇವೇಗೌಡರು ವಯೋಸಹಜ ಅನರೋಗ್ಯ ಬಿಟ್ಟರೆ ಈಗಲೂ ಉತ್ಸಾಹ ಕಳೆದುಕೊಂಡಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರ, ದೇವಸ್ಥಾನಗಳ ದರ್ಶನ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ, ದೇವೇಗೌಡರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಮತ್ತು ಅದರ ಮಿತ್ರ ಪಕ್ಷವಾದ ಬಿಜೆಪಿ ಒಟ್ಟಾಗಿ ಸ್ಪರ್ಧಿಸುವ ಲೋಕಸಭಾ ಚುನಾವಣಾ ಫಲಿತಾಂಶವನ್ನು ನೋಡಬೇಕು ಹೇಳಿದ್ದರು.
“ನಾವಿಬ್ಬರೂ, (ಜೆಡಿಎಸ್ ಮತ್ತು ಬಿಜೆಪಿ) 2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುತ್ತೇವೆ. ನಾವು ಎಲ್ಲಾ 28 ಸ್ಥಾನಗಳಲ್ಲಿ (ಕರ್ನಾಟಕದ) ಸ್ಪರ್ಧಿಸುತ್ತೇವೆ. ಚುನಾವಣೆಯ ನಂತರ ನೀವು ಫಲಿತಾಂಶವನ್ನು ನೋಡುತ್ತೀರಿ ಎಂದಿದ್ದಾರೆ. ಇಳಿವಯಸ್ಸಿನಲ್ಲಿ ದೇವೇಗೌಡರು ಉತ್ಸಾಹದ ಚಿಲುಮೆಯಂತೆ ಮಾತನಾಡುತ್ತಾರೆ. ಇದೀಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೀಘ್ರ ಗುಣಮುಖರಾಗಲಿ.