ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಕಳ್ಳರಿಗೂ ಒಂದು ಅವಕಾಶವನ್ನು ನೀಡಿದ್ದಾರೆ. ಟ್ರಾಫಿಕ್ ದಂಡ ಬಾಕಿ ಇರಿಸಿದ ವಾಹನ ಚಾಲಕರು ದಂಡದ ಮೊತ್ತ ಪಾವತಿಸಲು ಡಿಸ್ಕೌಂಟ್ ಆಫರ್ ಕೊಡಲಾಗಿತ್ತು. ಅದೇ ರೀತಿ, ಕಳ್ಳತನ ಮಾಡಿದ ಮೊಬೈಲ್ಗಳನ್ನು ಪೋಸ್ಟ್ ಮೂಲಕ ಹಿಂದಿರುಗಿಸಿದರೆ ಅಂತಹ ಕಳ್ಳರ ವಿರುದ್ಧ ಪ್ರಕರಣ ದಾಖಲಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ.
ಬೆಂಗಳೂರು, ಫೆ.16: ಬಾಕಿ ಟ್ರಾಫಿಕ್ ದಂಡ ಪಾವತಿಗಾಗಿ ಪ್ರಯೋಗಿಸಿದ ಡಿಸ್ಕೌಂಟ್ ಆಫರ್ ಯಶಸ್ವಿ ಬೆನ್ನಲ್ಲೇ, ಬೆಂಗಳೂರು ಪೊಲೀಸರು, ಕಳ್ಳತನ ಮಾಡಿದ ಮೊಬೈಲ್ಗಳನ್ನು (Mobile Theft) ಪೋಸ್ಟ್ ಮೂಲಕ ಹಿಂದಿರುಗಿಸಿದರೆ ಅಂತಹ ಕಳ್ಳರ ವಿರುದ್ಧ ಪ್ರಕರಣ ದಾಖಲಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು (Bengaluru Police) ಕಳ್ಳರಿಗೂ ಒಂದು ಅವಕಾಶವನ್ನು ನೀಡಿದ್ದಾರೆ.
ಇತ್ತೀಚೆಗೆ, ಬೆಂಗಳೂರು ನಗರದಲ್ಲಿ ಮೊಬೈಲ್ ಸ್ನ್ಯಾಚಿಂಗ್ ಹೆಚ್ಚಾಗುತ್ತಿದೆ. ಪೊಲೀಸರು ಕೂಡ ಶ್ರಮವಹಿಸಿ ಮೊಬೈಲ್ ಕಳ್ಳರನ್ನ ಬಂಧಿಸುತ್ತಲೇ ಇದ್ದಾರೆ. ಆದರೆ ಮೊಬೈಲ್ ಸ್ನ್ಯಾಚರ್ಸ್ ಹಾವಳಿ ಕಡಿಮೆಯಾಗುತ್ತಿಲ್ಲ. ಹೀಗಾಗಿ ನಗರ ಪೊಲೀಸರು ಹೊಸ ವಿಧಾನ ಕಂಡುಕೊಂಡಿದ್ದಾರೆ.
ತಪ್ಪನ್ನು ಅರಿತು ಮೊಬೈಲ್ ಪೋಸ್ಟ್ ಬಾಕ್ಸ್ಗೆ ಹಾಕಬೇಕು. ಆದರೆ ಕಳ್ಳತನ ಮಾಡಿಯೂ ಪೊಲೀಸರು ಕೊಟ್ಟ ಅವಕಾಶವನ್ನ ಮಿಸ ಯೂಸ್ ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ. ಅಕಸ್ಮಾತ್, ಮೊಬೈಲ್ ರಸ್ತೆಯಲ್ಲಿ ಸಿಕ್ಕಿದರೂ ಕೂಡ ಪೊಲೀಸ್ ಠಾಣೆಗೆ ಒಪ್ಪಿಸುವ ಪ್ರಮೇಯ ಇಲ್ಲ. ಅಂತಹ ಮೊಬೈಲ್ಗಳನ್ನೂ ಪೋಸ್ಟ್ ಬಾಕ್ಸ್ಗೆ ಹಾಕಿದರೆ ಸಾಕು. ಈ ಮೊಬೈಲ್ಗಳನ್ನು ಮಾಲೀಕರಿಗೆ ತಲುಪಿಸುವ ಜವಾಬ್ದಾರಿ ಪೊಲೀಸರದ್ದು.
ಇನ್ನು ಮುಂದೆ, ಮೊಬೈಲ್ ಕಳೆದು ಹೋದರೆ ಇ – ಲಾಸ್ಟ್ನಲ್ಲಿ, ಎಫ್ಐಆರ್, ಎನ್ಸಿಆರ್ ಮಾಡಿಸುವ ಅವಶ್ಯಕತೆ ಇಲ್ಲ. ಮೊಬೈಲ್ ಕಳೆದು ಹೋದ ಬಳಿಕೆ ಕಂಟ್ರೊಲ್ ರೂಂಗೆ ತಿಳಿಸಿ ನಂತರ Central equipment identity register ಆ್ಯಪ್ ಮುಖಾಂತರ ಮೊಬೈಲ್ ನಂಬರ್ ಐಎಂಇಐ ನಂಬರ್ ನಮೂದಿಸಬೇಕು.
ಪೊಲೀಸರು ಈ ಆ್ಯಪ್ ಮುಖಾಂತರ ಸಾಧ್ಯವಾಷ್ಟು ಬೇಗ ಮೊಬೈಲ್ ಹಿಂದಿರುಗಿಸುವ ವ್ಯವಸ್ಥೆ ಮಾಡಲಿದ್ದಾರೆ. ಕಳ್ಳರು ಕೂಡ ಇದೇ ಪೋಸ್ಟ್ ಬಾಕ್ಸ್ನಲ್ಲಿ ಮೊಬೈಲ್ ಡಂಪ್ ಮಾಡಿದರೆ ಅವರ ವಿರುದ್ಧ ಕೇಸ್ ದಾಖಲಾಗುವುದಿಲ್ಲ.
ಶೀಘ್ರದಲ್ಲೇ ಸಿಇಐಆರ್ ಲಾಂಚ್
ಪೊಲೀಸರು ಇನ್ನೆರಡು ದಿನದಲ್ಲಿ ಸಿಇಐಆರ್ ಲಾಂಚ್ ಮಾಡಲಿದ್ದು, ಮೊದಲಿಗೆ ಕಮಾಂಡ್ ಸೆಂಟರ್ ಬಳಿ ಪೋಸ್ಟ್ ಬಾಕ್ಸ್ ಇಡಲು ನಿರ್ಧಾರ ಮಾಡಲಾಗಿದೆ. ಪೊಲೀಸರ ಈ ಪ್ಲಾನ್ ವರ್ಕ್ ಆಗುತ್ತಾ ಎಂಬುದನ್ನ ಕಾದು ನೋಡಬೇಕಿದೆ. ಪೊಲೀಸರ ಈ ಯೋಜನೆ ಯಶಸ್ವಿಯಾದರೆ ಇದೊಂದು ವಿನೂತನ ಪ್ರಯೋಗವಾಗಿದೆ.