ಬಳ್ಳಾರಿ : ಫೆ 16 .ಸರ್ವಜನಿಕರ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವುದರ ಜೊತೆಗೆ ರಾಜ್ಯದ ಅಭಿವೃದ್ಧಿಪರವಾದಂತ ಬಜೆಟ್ ನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ.ರಾಜ್ಯ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಮಾಡಿದರು ಸಮತೋಲವಾದ ಬಜೆಟ್ ಮಂಡಿಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ಎಲ್ಲಾ ವರ್ಗದವರಿಗೂ ಮತ್ತು ಎಲ್ಲಾ ಕ್ಷೇತ್ರಕ್ಕೂಸಮಾನವಾಗಿ ಹಂಚಿಕೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆಂದು ಸಿರಿವಾರ ಗ್ರಾಮದ ಕಾಂಗ್ರೆಸ್ ಮುಖಂಡರಾದ ಶೇಕ್ ಲಿಂಗಪ್ಪ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.
ಪತ್ರಿಕೆ ಜೊತೆಗೆ ಮಾತನಾಡಿದ ಲಿಂಗಪ್ಪ, ಕೃಷಿಕರಿಗೆ ಕೃಷಿ ಹೊಂಡ ಯೋಜನೆಯನ್ನು ಮತ್ತೆ ಜಾರಿಮಾಡಲು 200 ಕೋಟಿ ರೂ. ಮಂಜೂರು ಮಾಡಿದ್ದಾರೆ ಇದರಿಂದ ಖುಷ್ಕಿ ಜಮೀನಿಗಳ ರೈತರಿಗೆ ಅನುಕೂಲವಾಗಲಿದೆ, ಮತ್ತು ರೈತರು ಸಹಕಾರಿ ಸಂಘದ ಮೂಲಕ ಪಡೆದ 132 ಕೋಟಿ ರು. ಸಾಲ ಮನ್ನಾ ಕಾರಣಕ್ಕೆ ಸಹಕಾರಿ ಬ್ಯಾಂಕ್ ಗಳು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿದ್ದರು. ಇದೀಗ ಇದರ ಪರಿಹಾರಕ್ಕೆ 132 ಕೋಟಿ ರು ಮಂಜೂರು ಮಾಡಿ ಸಹಕಾರಿ ಕ್ಷೇತ್ರದ ನೆರವಿಗೆ ಬಂದಿದ್ದಾರೆ, ಜೊತೆಗೆ ರೂಪಾಯಿ 450 ಕೋಟಿ ಬಡ್ಡಿ ಮನ್ನಾ ಮಾಡಲು ಡಿಸಿಸಿ ಬ್ಯಾಂಕ್ ಗಳಿಗೆ ಅನುದಾನ ನೀಡಲು ಮುಂದಾಗಿದ್ದಾರೆ ಇದರಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದರು.
ಬಳ್ಳಾರಿ ಜಿಲ್ಲೆಗೆ ಪ್ರತಿ ಘಟಕಕ್ಕೆ 40-50 ಕೋಟಿ ರೂಪಾಯಿಗಳನ್ನ ನೀಡಿದ್ದಾರೆ, ಅಲ್ಲದೆ ನಮ್ಮ ಜೆಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ರೂ15,600 ಕೋಟಿ ರು. ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಿರುವುದು ಈ ಭಾಗದ ರೈತರಪರ ಕಾಳಜಿ ತೋರಿಸಿದ್ದಾರೆ. ನಮ್ಮ ಜಿಲ್ಲೆಗೆ ವಿಶೇಷ ಖಾಳಜಿ ತೋರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ರವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.