ಕೊಟ್ಟೂರು 17 :- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬಡೇಲಡಕು ಗ್ರಾಮದಲ್ಲಿ ಶ್ರೀ ಸುಂದರೇಶ ಪೂರ್ವ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಹತ್ತನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಪಿ ಪುರುಷೋತ್ತಮ್ ಶಾಲೆಯ ವ್ಯವಸ್ಥಾಪಕರ ಆಶ್ರಯದಲ್ಲಿ ಮಕ್ಕಳ ಕಾಳಜಿಯ ಬಗ್ಗೆ ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸುತ್ತಾ ಕನ್ನಡದ ಬಗ್ಗೆ ಹೆಮ್ಮೆಯ ಇಟ್ಟುಕೊಂಡು ವೇದಿಕೆ ಒಳಗಡೆ ಮಕ್ಕಳಿಂದ ಕನ್ನಡ ಹಾಡುಗಳನ್ನು ಬಳಸಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ವೇದಿಕೆಯನ್ನು ದೀಪದ ಅಲಂಕಾರದಿಂದ ಕಂಗೊಳಿಸಿ ಅದ್ಭುತವಾದ ವೇದಿಕೆನ ನಿರ್ಮಾಣ ಮಾಡಿ ನೃತ್ಯ ಮಾಡಲು ಮಕ್ಕಳಿಗೆ ಸಾಹಕಾರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ ಪುರುಷೋತ್ತಮ್ ಮುಖ್ಯ ಗುರುಗಳು ಮಕ್ಕಳಿಗೆ ವಿದ್ಯೆ ಜೊತೆ ವಿವೇಚನೆ ಸಂಸ್ಕಾರ ಕಲಿಸುವ ನಮ್ಮ ವಿದ್ಯೆ ಸಂಸ್ಥೆ ಆಗಿರುತ್ತದೆ ಇಂಥ ಒಂದು ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಪಠ್ಯಕ್ರಮಗಳ ಮುಖಾಂತರ ನಮ್ಮ ಶಿಕ್ಷಕರು ಒಂದು ಹೆಜ್ಜೆ ಮುಂದಿದ್ದಾರೆ, ಪ್ರತಿಯೊಬ್ಬ ಪೋಷಕರಿಗೆ ನಮ್ಮ ಸಂಸ್ಥೆ ಬಗ್ಗೆ ಕಾಳಜಿ ಇದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣ ವಂಚಿತರಾಗದೆ ನಾವು ಬೆಳೆಸುವ ಪ್ರತಿಭೆ ಪ್ರವೃತ್ತಿಯನ್ನು ಮಕ್ಕಳಿಗೆ ಉಣಬಡಿಸುತ್ತೇವೆ ಹಾಗೂ ಶಾಲೆ ಸ್ವಚ್ಛತೆ ಶಾಲೆಯ ತುಂಬಾ ಕಾಳಜಿ ಹಾಗೂ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಸಂಸ್ಥೆಯ ಮಕ್ಕಳು ಒಂದು ಹೆಜ್ಜೆ ಮುಂದೆ ಇದ್ದಾರೆ ಎಂದು ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯೂ ಮಂಜುಳಾ ಸತೀಶ್ ಹಾಗೂ ಡಾ ಶಿವಕುಮಾರ್ ಹಾಸನ, ಕೆ ಮೂಗಣ್ಣ, ವಕೀಲರು ಬಿ ಸಂದೀಪ್, ಸಿ ಆರ್ ಪಿ ಗಜಾಪುರ ಕ್ಲಸ್ಟರ್ ಜಯಲಕ್ಷ್ಮಿ, ಅರಣ್ಯ ಇಲಾಖೆ ವಿಜಯನಗರ ಬಿಕೆ ಕರಿಯಪ್ಪ ಎನ್ ಬಸವರಾಜ್ ಗ್ರಾಮ ಪಂಚಾಯತಿ ಸದಸ್ಯರು ರಾಘವೇಂದ್ರ, ಎನ್ ಕೆ ಕಂಪನಿ ಸೇಲ್ಸ್ ಆಫೀಸರ್ ಕಲಾಭಾರತಿ, ಕಲಾ ಸಂಘದ ಅಧ್ಯಕ್ಷರಾದ ಬಣಕಾರ್ ಮೂಗಪ್ಪ ,ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಶಾಲಾ ಸಿಬ್ಬಂದಿ ವರ್ಗ ,
ಪಿ ಮಂಜುನಾಥ ಶಿಕ್ಷಕರು,ಪಿ ವೀರಮ್ಮ ಸಹ ಶಿಕ್ಷಕಿಯರು ಬಿ ಲಕ್ಷ್ಮಿ ಡಿ ಸುಮಾ ಬಿಎಸ್ ಗಂಗೂ, ಪಿ ಮಾಬುನಿ, ಬಿ ಸವಿತಾ, ಬಿ ಜ್ಯೋತಿ, ಎಂ ಸಂಗೀತ, ಸಹಾಯಕರಾದ ಸಂಗಮೇಶ್ ಸುಂದರಮ್ಮ ಹಾಗೂ ಪಾಲಕ ಪೋಷಕರು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.