ನಾವು ಮಾಡುವ ಕೆಲವು ಸಣ್ಣ-ಪುಟ್ಟ ತಪ್ಪುಗಳಿಂದಲೇ ಲ್ಯಾಪ್ಟಾಪ್ ಬ್ಯಾಟರಿ ಹಾಳಾಗುತ್ತದೆ ಎಂದು ನಿಮಗೆ ತಿಳಿದಿದೆಯೇ. ಕೆಲವು ಬ್ಯಾಟರಿಗಳು ಒಂದು ವರ್ಷ ಕೂಡ ಬರುವುದಿಲ್ಲ. ಬ್ಯಾಟರಿ ಹಾಳಾದರೆ ಅದನ್ನು ಬದಲಾಯಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹಾಗಾದರೆ, ಇಂದಿನಿಂದಲೇ ಈ ತಪ್ಪುಗಳನ್ನು ಮಾಡುವುದು ನಿಲ್ಲಿಸಿ.
ಯಾವುದೇ ಗ್ಯಾಜೆಟ್ ಆಗಿರಲಿ ಅದಕ್ಕೆ ಬ್ಯಾಟರಿ ಬಹಳ ಮುಖ್ಯ. ಬ್ಯಾಟರಿಯು (Battery) ಗ್ಯಾಜೆಟ್ಗೆ ಜೀವ ನೀಡುವ ಪ್ರಮುಖ ಸಾಧನವಾಗಿದೆ. ಆದರೆ ತಿಳಿದೋ ಅಥವಾ ತಿಳಿಯದೆಯೋ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ, ಇದು ಬ್ಯಾಟರಿಯ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದರಿಂದ ಲ್ಯಾಪ್ಟಾಪ್ ಬ್ಯಾಟರಿಯು ಒಂದು ವರ್ಷ ಕೂಡ ಬಾರದೆ ಕೆಲವೇ ತಿಂಗಳುಗಳಲ್ಲಿ ಹಾನಿಗೊಳಗಾಗುತ್ತದೆ. ಲ್ಯಾಪ್ಟಾಪ್ ಬ್ಯಾಟರಿಯ ಆರೋಗ್ಯ ಚೆನ್ನಾಗಿ ಇರಲು ಏನು ಮಾಡಬೇಕು ಎಂಬ ಬಗ್ಗೆ ನಾವು ಇಲ್ಲಿ ತಿಳಿಸುತ್ತೇವೆ.
ಲ್ಯಾಪ್ಟಾಪ್ ಬ್ಯಾಟರಿ ಹಾಳಾದರೆ ಅದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತಿದೆ. ಇದನ್ನು ತಪ್ಪಿಸಲು ನೀವು ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ.
ತಾಪಾಮಾನ
ಲ್ಯಾಪ್ಟಾಪ್ ಅತಿಯಾಗಿ ಬಿಸಿಯಾಗಲು ಪ್ರಾರಂಭಿಸಿದಾಗ, ಇದು ನಿಮ್ಮ ಲ್ಯಾಪ್ಟಾಪ್ನ ಬ್ಯಾಟರಿಯು ಪರಿಣಾಮ ಬೀರುತ್ತಿದೆ ಎಂದು ಅರ್ಥಮಾಡಿಕೊಳ್ಳಿ. ನೀವು ಬಿಸಿಲಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಅಥವಾ ಬಿಸಿಯಾದಂತಹ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಇದು ಸಿಸ್ಟಮ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀಳುತ್ತದೆ. ಇಲ್ಲಿ ಲ್ಯಾಪ್ಟಾಪ್ ಕೂಡ ಬಿಸಿಯಾಗಲು ಪ್ರಾರಂಭಿಸುತ್ತದೆ. ಹೀಗಾಗಿ ಲ್ಯಾಪ್ಟಾಪ್ ಹೀಟ್ ಆಗುವಂತಹ ಯಾವುದೇ ಕೆಲಸವನ್ನು ಮಾಡಬೇಡಿ.
ಚಾರ್ಜಿಂಗ್
ಬ್ಯಾಟರಿ ಕಡಿಮೆಯಾದ ತಕ್ಷಣ ಲ್ಯಾಪ್ಟಾಪ್ ಅನ್ನು ಮತ್ತೆ ಮತ್ತೆ ಚಾರ್ಜ್ ಮಾಡುವ ಅಭ್ಯಾಸ ಅನೇಕರಲ್ಲಿದೆ. ಹಾಗೆಯೆ ಬ್ಯಾಟರಿಯನ್ನು ಶೇಕಡಾ 100 ರಷ್ಟು ಚಾರ್ಜ್ ಮಾಡಿದ ನಂತರವೂ ಅದನ್ನು ದೀರ್ಘಕಾಲದವರೆಗೆ ಚಾರ್ಜ್ ಇಡುವುದರಿಂದ ಬ್ಯಾಟರಿಯ ಜೀವಿತಾವಧಿ ಕುಗ್ಗುತ್ತದೆ. ಆದ್ದರಿಂದ, ಲ್ಯಾಪ್ಟಾಪ್ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವ ಬದಲು, ಅದನ್ನು 80 ಪ್ರತಿಶತದವರೆಗೆ ಮಾತ್ರ ಚಾರ್ಜ್ ಮಾಡಿ ಪ್ಲಗ್ ತೆಗೆಯಿರಿ. ಲ್ಯಾಪ್ಟಾಪ್ ಅನ್ನು ಅಗತ್ಯವಿದ್ದಾಗ ಮಾತ್ರ ಚಾರ್ಜ್ನಲ್ಲಿ ಇರಿಸಿ.
ಬ್ಯಾಟರಿ ಡೆಡ್
ಲ್ಯಾಪ್ಟಾಪ್ನ ಬ್ಯಾಟರಿ ಪೂರ್ತಿಯಾಗಿ ಡೆಡ್ ಆದ ನಂತರ ಮಾತ್ರ ಚಾರ್ಜ್ಗೆ ಹಾಕುತ್ತೇವೆ ಎಂದು ಕೆಲವರು ಭಾವಿಸುತ್ತಾರೆ, ಆದರೆ ಹಾಗೆ ಮಾಡುವುದು ಸರಿಯಲ್ಲ. ಲ್ಯಾಪ್ಟಾಪ್ ಬ್ಯಾಟರಿಯು ಶೇಕಡಾ 20 ಕ್ಕೆ ಇಳಿದರೆ ಲ್ಯಾಪ್ಟಾಪ್ ಅನ್ನು ಚಾರ್ಜ್ ಮಾಡಿ, ಬ್ಯಾಟರಿ ಸಂಪೂರ್ಣವಾಗಿ ಮುಗಿಯುವ ತನಕ ಕಾಯಬೇಡಿ.
ತಪ್ಪು ಚಾರ್ಜಿಂಗ್
ಹೊಸ ಲ್ಯಾಪ್ಟಾಪ್ನೊಂದಿಗೆ ಕೊಟ್ಟ ಚಾರ್ಜರ್ ಕೆಟ್ಟುಹೋದ ನಂತರ ಹಣವನ್ನು ಉಳಿಸಲು ಅನೇಕ ಜನರು ಲೋಕಲ್ ಚಾರ್ಜರ್ ಅನ್ನು ಖರೀದಿಸುವುದು ಹಲವು ಬಾರಿ ಕಂಡುಬಂದಿದೆ. ಸಹಜವಾಗಿ, ಇದನ್ನು ಮಾಡುವುದರಿಂದ ನಿಮ್ಮ ಹಣವನ್ನು ಉಳಿಯುತ್ತದೆ ನಿಜ, ಆದರೆ ಸ್ಥಳೀಯ ಚಾರ್ಜರ್ ಅನ್ನು ಬಳಸುವುದರಿಂದ ನಿಮ್ಮ ಲ್ಯಾಪ್ಟಾಪ್ನ ಬ್ಯಾಟರಿ ಹಾನಿಯಾಗಬಹುದು.