ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಫೆ.22: ಮುಂದಿನ ತಿಂಗಳು 17 ರಂದು ನಡೆಯುವ ಉಭಯ ಜಿಲ್ಲೆಗಳ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾದರೂ ಉಭಯ ತಂಡಗಳ, ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಹೆಚ್ಚಿನ ಸಂಖೆಯಲ್ಲಿ ಅಭ್ಯರ್ಥಿಗಳು, ಅವರ ಬೆಂಬಲಿಗರು, ಅಜೀವ ಸದಸ್ಯರು ಸಂಘದ ಸಭಾಂಗಣದಲ್ಲಿ ಸೇರಿತ್ತು.
ಮುಖ್ಯ ಚುನಾವಣಾಧಿಕಾರಿ ಲಿಂಗನಗೌಡ ಅವರಿಗೆ 40 ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ದಿ.ಅಲ್ಲಂ ಕರಿಬಸಪ್ಪ ಮತ್ತು ಎನ್.ತಿಪ್ಪಣ್ಣನವರ “ಹಿರಿಯರ ತಂಡ” ಹಾಗು ಯುವಕ ವೃಂದ ತಂಡದಿAದ ಹಾಗು ಅನೇಕರು ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ಸಮೂದಾಯ ಎಷ್ಟೊಂದು ಇದೆ ಎಂಬುದನ್ನು ಪ್ರದರ್ಶಿಸುವಂತೆ ಇತ್ತು.
ನಗರದಿಂದ ಅಲ್ಲಂ ಗುರುಬಸವರಾಜ್,ಡಾ.ಅರವಿಂದ ಪಾಟೀಲ್, ಎನ್.ವೀರಭದ್ರಗೌಡ ಸಂಜೆವಾಣಿ, ಹೆಚ್.ಎಂ.ಕಿರಣ್ ಕುಮಾರ್, ಬೈಲುವದ್ದಿಗೇರಿ ಯರಿಸ್ವಾಮಿ, ಜಾನೆಕುಂಟೆ ಬಸವರಾಜ್, ಎಲ್.ಟಿ.ಶೇಖರ್, ಕೆ.ಎಂ.ಸಿದ್ದರಾಮಯ್ಯ, ಎಂ.ಕಾತ್ಯಾಯಿನಿ ಮರಿದೇವಯ್ಯ, ಕೆ.ಉಮಾಶಂಕರ್, ಕೆ.ಗಿರಿಜ, ಎನ್.ಶಿವಶಂಕರಗೌಡ, ಅಂಗಡಿ ಶರಣ ಬಸಪ್ಪ, ದಿವಾಕರ ಜಿ, ಎಸ್.ಮಲ್ಲಿಕಾರ್ಜುನ, ಎರ್ರಿಸ್ವಾಮಿ ಬೂದಿಹಾಳ್ ಮಠ, ಪಾಟೀಲ್ ಸಿದ್ದಾರೆಡ್ಡಿ, ಸಾಹುಕಾರ್ ಸತೀಶ್ ಬಾಬು, ಮುಂಡಾಸದ ಚೆನ್ನಬಸವರಾಜ್, ಬಿ.ತಿಮ್ಮನಗೌಡ ಪಾಟೀಲ್, ಕೆರೆನಳ್ಳಿ ಚಂದ್ರಶೇಖರ್, ಚೆನ್ನಬಸವರಾಜ್ ಕೆ.ಪಿ, ಇವರು ನಾಮಪತ್ರ ಸಲ್ಲಿಸಿದ್ದಾರೆ.
ನಗರೇತರ ಕ್ಷೇತ್ರದಿಂದ ಬಾವಿ ಶಶಿಧರ, ಕೋಳೂರು ವೆಂಕಟೇಶ್ ಗೌಡ, ಐಗೋಳ್ ಚಿದಾನಂದ ಹಡಗಲಿ, ಕೆ.ಎಂ.ಕೊಟ್ರೇಶ್, ಸಿ.ಮೋಹನ್ ರೆಡ್ಡಿ ವರಕನಹಳ್ಳಿ, ಕೆ.ಎಂ.ಉಮಾಪತಿಗೌಡ(ವಾಟಾಳ್), ಮಟ್ಟಿ ಮಂಜುನಾಥ ಹರಪನಹಳ್ಳಿ, ಟಿ.ನರೇಂದ್ರಬಾಬು ಮಿಂಚೇರಿ, ಏಳಬೆಂಚೆ ರಾಜಶೇಖರ್, ಜಿ.ಎರ್ರಿಸ್ವಾಮಿ ಕಲ್ಲುಕಂಬ, ಯಾಳ್ಫಿ ಮೇಟಿ ಪಂಪನಗೌಡ, ಪಿ.ವಿಶ್ಬನಾಥ, ಪಾಟೀಲ್ ಬೆಟ್ಟನಗೌಡ, ಕೆ.ಕೊಟ್ರೇಶ್ವರ, ಕಲ್ಗುಡಿ ಮಂಜುನಾಥ,
ಅಪ್ಫೇನಳ್ಳಿ ಎ. ಹೇಮರೆಡ್ಡಿ, ಕಾರದಪುಡಿ ಮುದ್ದನಗೌಡ ಮೋಕಾ ನಾಮಪತ್ರ ಸಲ್ಲಿಸಿದ್ದಾರೆ.