ಕಾರಟಗಿ : ತಾಲೂಕಿನ ತೊಂಡಿಹಾಳ-ದುಂಡಗಿ ಗ್ರಾಮದಲ್ಲಿ ಶ್ರೀ ಬಸವಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹಗಳು ಹಾಗೂ ಮಹಾರಥೋತ್ಸವವು ವಿಜ್ರಂಭಣೆಯಿಂದ ಜರುಗಿತು.
ಪ್ರತಿ ವರ್ಷದಂತೆ ಈ ಬಾರಿಯೂ ತೊಂಡಿಹಾಳ ಗ್ರಾಮದ ದುರ್ಗಾದೇವಿ ಕಟ್ಟೆಯಿಂದ ಬಸವಂತ ಶಿವಯೋಗಿಗಳ ಮಠದ ಅವರಿಗೂ ಮುತ್ತೈದೆಯರಿಂದ ಕುಂಭ ಕಳಸ ಹಾಗೂ ಭಾಜ ಬಜಂತ್ರಿಯೊಂದಿಗೆ ಮೆರವಣಿಗೆ ನಡೆಯಿತು. ನಂತರ ಶ್ರೀ ಬಸವಂತ ಶಿವಯೋಗಿಗಳ ಮೂರ್ತಿಗೆ ಪೂಜಾ ಪುನಸ್ಕಾರಗಳು ಜರುಗಿದವು. ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಾಮೂಹಿಕ ವಿವಾಹಗಳು ಜರುಗಿದ್ದು, ನಾಲ್ಕು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ದಾಸೋಹ ಕಾರ್ಯಕ್ರಮವು ನಡೆಯಿತು. ಸಂಜೆ ಶ್ರೀ ಬಸವಂತ ಶಿವಯೋಗಿಗಳ ಮಠದಿಂದ ಪಾದಗಟ್ಟೆಯವರಿಗೂ ನೂರಾರು ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕಂಠೇಪ್ಪ ನಾಯಕ, ನಾಗನಗೌಡ ಪೊಲೀಸ್ ಪಾಟೀಲ್, ನೀಲಾದರ ನಾಯಕ್, ಮಲ್ಲಿಕಾರ್ಜುನ ತೊಂಡಿಹಾಳ, ಶರಣಪ್ಪ ನಾಡಿಗೇರ, ಸುರೇಶಪ್ಪ ನಾಡಿಗೇರ, ಪಾರಿಜಾತಪ್ಪ, ಭದ್ರಪ್ಪ ನಾಡಿಗೇರಾ, ಮಂಜುನಾಥ ಹಿರೇಮನಿ, ಶರಣಪ್ಪ ಛಲವಾದಿ, ಶಿವಪ್ಪ ತಳವಾರ, ರುದ್ರಪ್ಪ ಮಂಗಳಪೂರ, ನಿಂಗಪ್ಪ ಮನ್ನಾಪೂರ, ಗ್ರಾ.ಪಂ ಅಧ್ಯಕ್ಷರಾದ ಹನುಮಂತಪ್ಪ, ಯಮನಪ್ಪ ಗೋಮರ್ಸಿ, ಕುಂಟೇಪ್ಪ, ರಾಮಣ್ಣ ಕಲ್ಗುಡಿ, ಕುಮಾರಪ್ಪ ಗುಂಡಾಣಿ, ಮಂಜುನಾಥ ಸೇರಿದಂತೆ ದೇವಸ್ಥಾನ ಸಮಿತಿಯ ಸದಸ್ಯರು, ಗ್ರಾ.ಪಂ ಸದಸ್ಯರು, ಗ್ರಾಮದ ಮುಖಂಡರು, ಮಹಿಳೆಯರು, ಯುವಕರು ಇದ್ದರು.