ಹೊಸಪೇಟೆ ಫೆ.22: ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಕಂದಾಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವು ಫೆ.22ರಂದು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ನ್ಯಾ.ಅಬ್ದುಲ್ ರಹೀಮಾನ ಎ. ನಂದಗಡಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನ್ಯಾಯ ಎಂಬುದು ಕೇವಲ ನ್ಯಾಯಾಂಗದಲ್ಲಿ ಮಾತ್ರ ಇರುವುದಿಲ್ಲ. ಅದು ಸಮಾಜದಲ್ಲಿ ಕೂಡ ಇರುತ್ತದೆ. ನಾವು ಮಾಡುವ ಕೆಲಸದಲ್ಲಿ, ನಾವು ಯೋಜಿಸುವ ಯೋಚನೆಯಲ್ಲಿ ನಾವು ತೋರಿಸುವ ಪ್ರೀತಿ, ಕಾಳಜಿಯಲ್ಲಿ ಸಾಮಾಜಿಕ ನ್ಯಾಯ ಅಡಗಿರುತ್ತದೆ. ಸಾಮಾಜಿಕ ನ್ಯಾಯದಲ್ಲಿ ನಮ್ಮನ್ನು ನಾವು ಪರಾಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ನ್ಯಾ.ಸಂಜೀವ್ಕುಮಾರ ಜಿ ಅವರು ಮಾತನಾಡಿ, ಭಾರತ ಸಂವಿಧಾನದ ಪೀಠಿಕೆಯಲ್ಲಿ ಸಾಮಾಜಿಕ ನ್ಯಾಯದ ಉಲ್ಲೇಖವಿದೆ. ಸಂವಿಧಾನದ ಭಾಗ 3 ರಲ್ಲಿ ಮೂಲಭೂತಹಕ್ಕುಗಳು ಕಂಡು ಬರುತ್ತವೆ. ಅದರಲ್ಲಿ ಮುಖ್ಯವಾಗಿ ಎರಡು ಹಕ್ಕುಗಳು ಪ್ರಮುಖವೆನಿಸುತ್ತವೆ. ಜೀವಿಸುವ ಹಕ್ಕು ನಮಗೆ ಸಮಾಜದಲ್ಲಿ ಘನತೆ, ಗೌರವ, ಸಹಬಾಳ್ವೆಯಿಂದ ಬಾಳಲು ಅವಕಾಶ ಕಲ್ಪಿಸಿದೆ. ಇದನ್ನು ಕಾನೂನಾತ್ಮಕವಾಗಿ ಕಾಪಾಡಲು ಸಂವಿಧಾನಿಕ ಪರಿಹಾರದ ಹಕ್ಕನ್ನು ಸಂವಿಧಾನ ರೂಪಿಸಿದೆ. ಅದನ್ನು ಉಪಯೋಗಿಸಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ಸಂವಿಧಾನದ ಪ್ರತಿಯನ್ನು ಪ್ರತಿಯೊಬ್ಬರ ಮನೆಯಲ್ಲಿ ಇರಿಸಿ, ಅದರ ಮಹತ್ವವನ್ನು ಅರಿತು ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸಪೇಟೆ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ನ್ಯಾ.ಹೇಮಲತಾ ಬಿ.ಹೆಚ್., ನ್ಯಾ.ರಮೇಶ್ ಬಾಬು ಬಿ.ಎನ್., ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಕಿಶನ್ ಬಿ.ಮಾಡಲಗಿ, ನ್ಯಾ.ಚೈತ್ರ ಜೆ., ವಕೀಲರ ಸಂಘದ ಅಧ್ಯಕ್ಷರಾದ ಕೆ ಪ್ರಹ್ಲಾದ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪಿ ಶ್ರೀನಿವಾಸ ಮೂರ್ತಿ, ಗ್ರೇಡ್ 2 ತಹಶೀಲ್ದಾರ್ರಾದ ವೇಂಕಟೇಶ್, ತಾಲೂಕು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.