ಸಂದೀಪ್ ರೆಡ್ಡಿ ‘ಅನಿಮಲ್ ಪಾರ್ಕ್’ ಚಿತ್ರ ನಿರ್ದೇಶನ ಮಾಡೋಕೆ ರೆಡಿ ಆಗಿದ್ದಾರೆ. ಈ ಚಿತ್ರದ ಬಗ್ಗೆ ಇನ್ನೂ ಯಾವುದೂ ಅಂತಿಮ ಆಗಿಲ್ಲ. ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ ಚಿತ್ರದ ವಿಲನ್ ಪಾತ್ರಕ್ಕೆ ಮತ್ತೊಬ್ಬ ನಟನನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಇದೆ. ಅವರು ಬೇರಾರೂ ಅಲ್ಲ ನಟ ವಿಕ್ಕಿ ಕೌಶಲ್.
ನಟ ರಣಬೀರ್ ಕಪೂರ್ (Ranbir Kapoor) ಅವರಿಗೆ 2023 ಆಶಾದಾಯಕವಾಗಿತ್ತು. ಡಿಸೆಂಬರ್ 1ರಂದು ಬಿಡುಗಡೆಯಾದ ಅವರ ನಟನೆಯ ‘ಅನಿಮಲ್’ ಸಿನಿಮಾ ಸಾಕಷ್ಟು ಬಜ್ ಸೃಷ್ಟಿಸಿತು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸಿತು. ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 915 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರದಲ್ಲಿ ರಣಬೀರ್ ಹೊರತುಪಡಿಸಿ, ಇನ್ನೋರ್ವ ನಟ ಬಾಬಿ ಡಿಯೋಲ್ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಅಭಿನಯದಿಂದ ಎಲ್ಲರನ್ನೂ ಬೆರಗುಗೊಳಿಸಿದರು. ಅವನ ವಿಲನ್ ಆಗಿ ಎಲ್ಲರಿಗೂ ಇಷ್ಟವಾಗಿದ್ದಾರೆ. ಈ ಚಿತ್ರದ ಸೀಕ್ವೆಲ್ ‘ಅನಿಮಲ್ ಪಾರ್ಕ್’ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಮೊದಲ ಭಾಗದಲ್ಲಿ ಬಾಬಿ ಡಿಯೋಲ್ ಪಾತ್ರ ಕೊನೆ ಆಗಿದೆ. ಈಗ ಈ ಚಿತ್ರದ ಎರಡನೇ ಪಾರ್ಟ್ ಬಗ್ಗೆ ಹೊಸ ಅಪ್ಡೇಟ್ ಹೊರಬಿದ್ದಿದೆ.
ಸಂದೀಪ್ ರೆಡ್ಡಿ ಅವರು ‘ಅನಿಮಲ್ ಪಾರ್ಕ್’ ಸಿನಿಮಾ ನಿರ್ದೇಶನ ಮಾಡೋಕೆ ರೆಡಿ ಆಗಿದ್ದಾರೆ. ಈ ಸಿನಿಮಾದ ಬಗ್ಗೆ ಇನ್ನೂ ಯಾವುದೂ ಅಂತಿಮ ಆಗಿಲ್ಲ. ರಣಬೀರ್ ಕಪೂರ್ ಹಾಗೂ ರಶ್ಮಿಕಾ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಇದರ ಜೊತೆಗೆ ಚಿತ್ರದ ವಿಲನ್ ಪಾತ್ರಕ್ಕೆ ಮತ್ತೊಬ್ಬ ನಟನನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಇದೆ. ಅವರು ಬೇರಾರೂ ಅಲ್ಲ ನಟ ವಿಕ್ಕಿ ಕೌಶಲ್.
ರಣಬೀರ್ ಕಪೂರ್ ಅವರ ‘ಅನಿಮಲ್ ಪಾರ್ಕ್’ನಲ್ಲಿ ಖಳನಾಯಕನ ಪಾತ್ರಕ್ಕಾಗಿ ವಿಕ್ಕಿ ಕೌಶಲ್ ಅವರನ್ನು ಸಂಪರ್ಕಿಸಲಾಗಿದೆ. ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಈ ಸೀಕ್ವೆಲ್ನಲ್ಲಿ ರಣಬೀರ್ ಕಪೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ವಿಕ್ಕಿ ಕೌಶಲ್ ಜೊತೆಗೆ ಶಾಹಿದ್ ಕಪೂರ್ ಹೆಸರು ಕೂಡ ಈ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಚರ್ಚೆಯಾಗುತ್ತಿದೆ. ವಿಲನ್ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ. ಈ ಪಾತ್ರಕ್ಕೆ ವಿಕ್ಕಿ ಕೌಶಲ್ ಅವರು ಆಯ್ಕೆ ಆದರೆ, ಇದು ಅವರ ವೃತ್ತಿಜೀವನದ ಅವರ ಮೊದಲ ನೆಗೆಟಿವ್ ಪಾತ್ರವಾಗಲಿದೆ. ಆದರೆ, ನಿರ್ಮಾಪಕರು ಅಥವಾ ನಟರಿಂದ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ.
ವಿಕ್ಕಿ ಕೌಶಲ್ ಅವರು ‘ಉರಿ’, ‘ರಾಜಿ’, ‘ಉದ್ದಮ್ ಸಿಂಗ್’, ‘ಸ್ಯಾಮ್ ಬಹದ್ದೂರ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಮುಂದಿನ ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮಗ ಮತ್ತು ವೀರ ಯೋಧ ಛತ್ರಪತಿ ಸಂಭಾಜಿ ರಾಜೆ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕಾಗಿ ತಯಾರಿ ನಡೆಸುತ್ತಿರುವ ಅವರು, ತಮ್ಮ ತೂಕವನ್ನೂ ಹೆಚ್ಚಿಸಿಕೊಂಡಿದ್ದಾರೆ. ಸಾಹಸ ದೃಶ್ಯಗಳಿಗೂ ಭರ್ಜರಿ ತಯಾರಿ ನಡೆಸುತ್ತಿರುವ ಅವರು ಸದ್ಯ ಕತ್ತಿವರಸೆ, ಕುದುರೆ ಸವಾರಿ ಕಲಿಯುತ್ತಿದ್ದಾರೆ.