ಹರಪನಹಳ್ಳಿ.ಮಾ.2; ಹರಪನಹಳ್ಳಿ ಪಟ್ಟಣದಲ್ಲಿ ಆರಂಭವಾಗಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ 100 ಎಕರೆ ಭೂಮಿ ನೀಡಲು ಪ್ರಯತ್ನ ಮಾಡುವುದಾಗಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ತಾತ್ಕಾಲಿಕವಾಗಿ ಮಂಜೂರಾಗಿರುವ ನಾಲ್ಕು ಕೊಠಡಿಗಳಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಚೇರಿಯನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಈಗಾಗಲೇ ತಹಶೀಲ್ದಾರ ಬಳಿ 50 ಎಕರೆ ಭೂಮಿ ನೀಡುವ ಕುರಿತು ಚರ್ಚಿಸಿದ್ದು, ಇನ್ನೂ 50 ಎಕರೆ ಅಂದರೆ 100 ಎಕರೆ ಭೂಮಿಯನ್ನು ಸರ್ಕಾರದಿಂದ ಕೊಡಿಸಲು ಸಕಲ ಪ್ರಯತ್ನ ಮಾಡುತ್ತೇನೆ, ಮುಂದಿನ ದಿನಗಳಲ್ಲಿ ಇಲ್ಲಿಯೇ ವಿಶ್ವ ವಿದ್ಯಾಲಯ ಸ್ಥಾಪನೆ ಆಗಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಹರಪನಹಳ್ಳಿ ಶೈಕ್ಷಣಿಕ ಹಬ್ ಆಗಿದ್ದು, ಇಲ್ಲಿಯ ಸಾಕಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸಗಳ ಅಧ್ಯಯನ ಮಾಡಲು ದೂರದ ನಗರಗಳಿಗೆ ಹೋಗುತ್ತಿರುವುದನ್ನು ಮನಗಂಡು ಇಲ್ಲಿ ಪಿ.ಜೆ.ಸೆಂಟರ್ ತೆರೆಯಲಾಗಿದೆ ಎಂದ ಅವರು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ ಶಾಸಕರು ಇದರ ಸದುಪಯೋಗವನ್ನು ಹರಪನಹಳ್ಳಿ ಸೇರಿದಂತೆ ಸುತ್ತ ಮುತ್ತಲ ತಾಲೂಕುಗಳ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕೋರಿದರು.
ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಅನಂತ ಎಲ್.ಝಂಡೇಕರ್ ಮಾತನಾಡಿ ಉನ್ನತ ಶಿಕ್ಷಣ ದೂರದ ಬೆಚ್ಚವಾಗಬಾರದು, ಪ್ರತಿಯೊಬ್ಬರ ಮನೆ ಮನೆಗೂ ತಲುಪಬೇಕು, ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ದೂರ ಉಳಿಯಬಾರದು ಎಂದರು.
ಬಳ್ಳಾರಿ ವಿವಿ.ಕುಲಪತಿ ಪ್ರೋ.ಅನಂತ್ ಎಲ್.ಝಂಡೇಕರ್ ಮಾತನಾಡಿ ಅನೇಕರು ಇಲ್ಲಿ ಸ್ನಾತಕೋತ್ತರ ಅಧ್ಯಯನ ಆಗಬೇಕು ಎನ್ನುವ ಒತ್ತಾಯಗಳು ಕೇಳಿಬಂದಿದ್ದವು, ಅನೇಕರ ಶ್ರಮದಿಂದ ಇಲ್ಲಿ ಅಧ್ಯಯನ ಕೇಂದ್ರ ತೆರೆಯಲು ಮುಂದಾಗಿದ್ದು, ಗ್ರಾಮೀಣ ಭಾಗದ ಪ್ರತಿಯೊಬ್ಬರ ಮನೆಯಲ್ಲಿ ಅದರಲ್ಲೂ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು, ಉನ್ನತ ಹುದ್ದೆಯನ್ನು ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಸ್ನಾತಕೋತ್ತರವನ್ನು ಆರಂಭಿಸಲಾಗುತ್ತಿದೆ ಎಂದರು.
ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಚಾಲಕರನ್ನಾಗಿ ಬಳ್ಳಾರಿ ಶ್ರೀಕೃಷ್ಣ ವಿವಿಯ ಸಹಾಯಕ ಕುಲ ಸಚಿವ ಡಾ.ಪ್ರಶಾಂತರವರನ್ನು ನೇಮಕ ಮಾಡಿದ್ದೇನೆ ಎಂದು ಕುಲಸಚಿವರು ಅವರು ತಿಳಿಸಿದರು.
ವಿವಿಯ ಸಿಂಡಿಕೇಟ್ ಸದಸ್ಯ ಸುರೇಶ ಆರ್ ಸಜ್ಜನ ಮಾತನಾಡಿ ಹೊಸದಾಗಿ ಆರಂಭಗೊಂಡಿರುವ ಇಲ್ಲಿಯ ಪಿ.ಜೆ.ಸೆಂಟರ್ ಗೆ ಕನಿಷ್ಟ 200 ವಿದ್ಯಾರ್ಥಿಗಳಾದರೂ ಸೇರ್ಪಡೆಯಾಗಬೇಕು , ಇದರ ಉನ್ನತಿಗೆ ಸರ್ವರೂ ಕೈ ಜೋಡಿಸಬೇಕು ಎಂದು ಅವರು ತಿಳಿಸಿದರು.
ಬಳ್ಳಾರಿ ವಿವಿಯ ಕುಲಸಚಿವರಾದ ಎಸ್.ಎನ್.ರುದ್ರೇಶ, ಪ್ರೊ.ರಮೇಶ ಓಲೆಕಾರ, ಮಾತನಾಡಿದರು. ವಿವಿಯ ಸಿಂಡಿಕೇಟ್ ಸದಸ್ಯ ಟಿ.ಎಂ.ರಾಜಶೇಖರ ಪ್ರಸ್ಥಾವಿಕವಾಗಿ ಮಾತನಾಡಿದರು. ತೆಗ್ಗಿನಮಠದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರಯ್ಯ, ಬುದ್ದ ಬಸವ ಅಂಬೇಡ್ಕರ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಗುಂಡಗತ್ತಿ ಕೊಟ್ರಪ್ಪ,, ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಷಣ್ಮೂಖನಗೌಡ, ಹೂವಿನ ಹಡಗಲಿ ಪ್ರಾಚಾರ್ಯರಾದ ಪ್ರೊ.ವಿಜಯಕುಮಾರ, ಎಸ್ ಎಸ್.ಪಾಟೀಲ್, ಹೊಸಪೇಟೆಯ ಪ್ರಾಚಾರ್ಯ ವಿಶ್ವನಾಥಗೌಡ್ರು, ಕೂಡ್ಲಿಗಿಯ ನಿವೃತ್ತ ಪ್ರಾಚಾರ್ಯ ಪಿ.ಎಂ.ಸೋಮಯ್ಯ, ತಾ.ಪಂ ಮಾಜಿ ಸದಸ್ಯರಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಪ್ರಾದ್ಯಾಪಕರಾದ ಡಾ.ಭೀಮಪ್ಪ,ಪ್ರಭುನಾಯ್ಕ, ಕಲ್ಲಹಳ್ಳಿ ಗುರುಸಿದ್ದಯ್ಯ,ಕನ್ನಿಹಳ್ಳಿ ಪ್ರಭಾಕರ, ಇತರರು ಉಪಸ್ಥಿತರಿದ್ದರು.