ಸಿಂಧನೂರು- ತಾಲೂಕಿನಾದ್ಯಂತ ಬೈಕ್ ಕಳ್ಳತನ ಪ್ರಕರಣ ಗಳು ಹೆಚ್ಚು ವರದಿಯಾಗುತ್ತಿದ್ದಂತೆ ಗುರುತರವಾದ ತಂಡ ದೊಂದಿಗೆ ಕಳ್ಳರನ್ನು ಬೆನ್ನಟ್ಟಿ ಮೂರು ಜನ ಕಳ್ಳರನ್ನು ವಶಕ್ಕೆ ಪಡೆದು ಅವರಿಂದ ಎಂಟು ಬೈಕ್ಗಳನ್ನು ವಶಕ್ಕೆ ಪಡೆದು ನಗರ ಠಾಣೆಯಲ್ಲಿ ಕಳ್ಳರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಂದು ಡಿವಾಯ್ಎಸ್ಪಿ ಬಿಎಸ್ತಳವಾರ ಹೇಳಿದರು.
ನಗರ ಠಾಣೆಯಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿ, ಕಳ್ಳತನ ಬೆನ್ನತ್ತಿದ ಪೋಲಿಸರು ಡಿವಾಯ್ಎಸ್ಪಿ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಸುನೀಲ್ ವಿ ಮೂಲಿಮನಿ ಹಾಗೂ ಪಿಎಸ್ಐ ಬಸವರಾಜ, ವಿ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಗಳಾದ ಶರಣಪ್ಪ ರಡ್ಡಿ, ಸಂಗನಗೌಡ, ವಿಜಯಕುಮಾರ್, ಸಿದ್ದಪ್ಪ, ಖಲೀಲ್ ಪಾಷಾ ಒಳಗೊಂಡು ವಿಶೇಷ ತಂಡ ರಚಿಸಲಾಗಿತ್ತು.
ಅದರಂತೆ ಎರಡು ಪ್ರತ್ಯೇಕ ಪ್ರಕರಣ ಗಳಲ್ಲಿ ಬೈಕ್ ಕಳ್ಳತನ ಮಾಡುವ ಆರೋಪಿತರಾದ ಮಹಿಬೂಬ ಪಾಷಾ, ಅನಿಲ ಕುಮಾರ್, ಮಂಜುನಾಥರನ್ನು ಬಂಧಿಸಲಾಗಿದೆ.
ಫೆ.೨೮ ರಂದು ಆರೋಪಿಗಳನ್ನು ವಶಕ್ಕೆ ಪಡೆದು ನಗರ ಠಾಣೆಯಲ್ಲಿ ಗುನ್ನೆ ನಂ.೨೯ ಮತ್ತು ೩೦ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ಬೈಕ್ ಸೇರಿ ೧,೮೦,೦೦೦ ಜಪ್ತಿ ಮಾಡಿಕೊಂಡು ಎರಡು ಪ್ರಕರಣಗಳನ್ನು ಬೇದಿಸಲಾಗಿದೆ.ಸದ್ರಿ ಕಳ್ಳರ ಪತ್ತೆ ಕಾರ್ಯವನ್ನು ಜಿಲ್ಲಾ ಪೋಲಿಸ್ ಅಧಿಕ್ಷಕರು ಶ್ಲಾಘನೆ ಮಾಡಿರುತ್ತಾರೆಂದರು.